
ಅದ್ದೂರಿಯಾಗಿ ಜರುಗಿದ ಸಂವಿಧಾನ ಜಾಗೃತಿ ಜಾಥಾ
ಕರುನಾಡ ಬೆಳಗು ಸುದ್ದಿ
ಗಂಗಾವತಿ,23- ನಗರದ ಎಪಿಎಂಸಿಯಿಂದ ಅಂಬೇಡ್ಕರ್ ವೃತ್ತದವರೆಗೆ ಸಂವಿಧಾನ ಜಾಗೃತಿ ಜಾಥಾ ಅದ್ದೂರಿಯಾಗಿ ಜರುಗಿತು. ವಿವಿಧ ಶಾಲಾ ಮಕ್ಕಳಿಂದ ಸ್ಥಬ್ದ ಚಿತ್ರಗಳು,ವೆಷಧಾರಿಗಳು ಪಾಲಗೋಂಡಿದ್ದರು.
ಮಾಜಿಶಾಸಕ ಪರಣ್ಣ ಮುನವಳ್ಳಿ,ಮಾಜಿ ವಿಧಾನಪರಿಷತ ಹೆಚ್.ಆರ್.ಶ್ರೀ ನಾಥ ಮಾತನಾಡಿ ಅಂಬೇಡ್ಕರ್ ರು ರಚಿಸಿದ ಸಂವಿಧಾನ ವು ಪ್ರಪಂಚಕ್ಕೆ ಮಾದರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಪೂರಕವಾಗಿದೆ. ಸರ್ವರಿಗೂ ಸಮಾನತೆಯ ಕೋಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಯು ನಾಗರಾಜ, ಮಾಜಿ ಶಾಸಜ ಜಿ ವಿರಪ್ಪ, ನಗರಸಭೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ, ತಾಪಂ ಇಓ ಲಕ್ಷ್ಮಿ ದೇವಿ, ನೆಕ್ಕಂಟಿ ಸೂರಿಬಾಬು, ಜಗನ್ನಾಥ ಆಲಂಪಲ್ಲಿ, ವಿರುಪಾಕ್ಷ ಸಿಂಗನಾಳ, ದೋಡ್ಡಭೋಜಪ್ಪ, ಹುಲಿಗೇಶ ದೆವರಮನಿ, ವಾಸುದೇವ ನವಲಿ, ಜಂಗಮರಹಳ್ಳಿ, ಡಾ.ಸೋಮಕ್ಕ, ಸಮಾಜ ಕಲ್ಯಾಣ ಅಧಿಕಾರಿ ಶರಣಪ್ಪ, ಪೋಲಿಸ ಉಪ ವಿಭಾಗಧಿಕಾರಿ ಸಿದ್ದಲಿಂಗಪ್ಪ ಗೌಡ, ಹನುಮಂತಪ್ಪ ಗಿಡ್ಡಿ, ಜಿ ಶ್ರಿಧರ, ಮುಂತಾದವರು ಉಪಸ್ಥಿತರಿದ್ದರು.