
ಅನಾಮಧೇಯ ವ್ಯಕ್ತಿ ಮೃತ : ವಾರಸುದಾರರ ಪತ್ತೆಗೆ ಮನವಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 5- ಹಂಪಿಯ ದೊಡ್ಡ ಖಾಸಗಿ ಹೋಟೆಲ್ ಹತ್ತಿರದ ಗಣೇಶ್ ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸುಮಾರು 45 ರಿಂದ 50 ವರ್ಷ ವಯಸ್ಸಿನ ಗಂಡಸು ವ್ಯಕ್ತಿಯು ಮೃತಪಟ್ಟ ಬಗ್ಗೆ ಹೊಸಪೇಟೆ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ (ಯು.ಡಿ.ಆರ್ ನಂಬರ್ 01/2024 ಕಲಂ 174 ಸಿ.ಆರ್.ಪಿ.ಸಿ ಅಡಿ) ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಕೈಕಾಲುಗಳು ಸೆಟೆದಂತೆ ಇದ್ದು ಬಲಗಾಲು ಕರೆಂಟ್ ಕಂಬದ ತಂತಿಗೆ ತಾಗಿದ್ದರಿಂದ ಬಿಸಿಲಿನ ತಾಪಕ್ಕೆ ಚರ್ಮ ಸುಲಿದಿದೆ. ಮೃತ ವ್ಯಕ್ತಿಯು ಎಡಭಾಗದ ಕಡೆ ಮಲಗಿದ್ದರಿಂದ ಎಡ ಭಾಗದ ಮುಖ, ಕಣ್ಣು, ಮೈ, ಕೈ ಕಾಲುಗಳ ಮೇಲಿನ ಚರ್ಮವು ಅಲ್ಲಲ್ಲಿ ಸುಲಿದಂತೆ ಕಂಡು ಬರುತ್ತದೆ. ಮೈಮೇಲೆ ತುಂಬು ತೋಳಿನ ಅಂಗಿ ಮತ್ತು ಲುಂಗಿ ಇರುತ್ತದೆ. ಈ ವ್ಯಕ್ತಿಯು ಸರಿಯಾಗಿ ಊಟ ಮಾಡದೇ ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಇಲ್ಲದೇ ಮೇ 01 ರಿಂದ ಮೇ 2ರ ಬೆಳಗಿನ 9.30ರ ಮಧ್ಯೆದ ಅವಧಿಯಲ್ಲಿ ಮೃತಪಟ್ಟಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತ ವ್ಯಕ್ತಿಯ ಚಹರೆ: ವಯಸ್ಸು 45 ರಿಂದ 50 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಉದ್ದ ಮುಖ, ಗೋಧಿ ಮೈಬಣ್ಣ, ಕೆಂಪು ಮತ್ತು ಬಿಳಿ ಹೂವಿನ ಡಿಸೈನ್‌ವುಳ್ಳ ತುಂಬು ತೋಳಿನ ಅಂಗಿ, ನೀಲಿ, ಮತ್ತು ಬಿಳಿ ಗೆರೆಗಳುಳ್ಳ ಲುಂಗಿ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರು ಪತ್ತೆಯಾದಲ್ಲಿ ವಿಜಯನಗರ ಕಂಟ್ರೋಲ್ ರೂಂ ದೂ.ಸಂ: 08394-200202, ಚಿತ್ತವಾಡಗಿ ಪೊಲೀಸ್ ಠಾಣೆ ದೂ.ಸಂ: 08394-228543, ಚಿತ್ತವಾಡಗಿ ಪೊಲೀಸ್ ಇನ್ಸ್ಪೆಕ್ಟರ್ ಮೊ: 9480805733., ಪಿ.ಎಸ್.ಐ ಕಾ.ಸು ಚಿತ್ತವಾಡಗಿ ಪೊಲೀಸ್ ಠಾಣೆ ಮೊ:9480805757 ಇವರಿಗೆ ಮಾಹಿತಿ ನೀಡಲು ಚಿತ್ತವಾಡಗಿ ಪೊಲೀಸ್ ಠಾಣೆಯ ಸಹಾಯಕ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.