IMG-20231029-WA0034

ಅಪ್ಪು ಪುಣ್ಯ ಸ್ಮರಣೆ

ಅಪ್ಪು ನುಡಿ ನಮನ

ಎಲ್ಲವೂ ಇದೆ
ಎಲ್ಲರೂ ಇದ್ದಾರೆ
ಈ ಭೂಮಿಯ ಮೇಲೆ
ನಿನ್ನ ಹೊರತು

ಆರೋಗ್ಯದಿಂದಲೇ ಇದ್ದೆಯಲ್ಲಾ
ನಗು ನಗುತ್ತಾ
ತಿಳಿಯದು ನನಗೆ
ನಿನ್ನ ಸಾವಿಗೆ ಕಾರಣ

ನಗುತ್ತಿದ್ದೆ ನಗಿಸುತ್ತಿದ್ದೆ
ಚಟುವಟಿಕೆಯಿಂದಲೇ ಇದ್ದೆ
ಒಮ್ಮೆಲೇ ಯಾಕೆ ಸ್ತಬ್ಧವಾದೆ
ಮೌನವನ್ನು ಮಾತ್ರ ಉಳಿಸಿ ಬಿಟ್ಟು

ಕರ್ನಾಟಕವು ನಿನ್ನಿಂದ
ಹೆಮ್ಮೆ ಪಡುತ್ತಿತ್ತು
ಕನ್ನಡಕ್ಕಾಗಿ ಬದುಕಿ
ಕನ್ನಡದ ‘ರಾಜರತ್ನ’ವಾಗಿದ್ದೆ

ಬೇಡುವೆನು ದೇವರಲ್ಲಿ
ಮರಳಿ ಕಳಿಸಿಬಿಡು
ನಮ್ಮ ‘ವೀರ ಕನ್ನಡಿಗ’ನನ್ನು
ಚಿರಂಜೀವಿಯಾಗಿರಿ ಎಂದು ಹೇಳಿ.

✍️- ರಾಜೇಸಾಬ ರಾಟಿ, ಬೆದವಟ್ಟಿ

Leave a Reply

Your email address will not be published. Required fields are marked *

error: Content is protected !!