
ಅರ್ಜುನ ಆನೆ ಸಾವು
ತನಿಖೆಗೆ ಆದೇಶಿಸಿ : ಗೋಪಿಕೃಷ್ಣ ಪ್ಯಾಟಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೬- ಮೈಸೂರು ಉತ್ಸವದಲ್ಲಿ, ಹಲವಾರು ವರ್ಷಗಳಿಂದ ತನ್ನದೇ ಆದ ಸೇವೆ ಸಲ್ಲಿಸುತ್ತಿರುವ ಅರ್ಜುನ ಎಂಬ ಹೆಸರಿನ ಆನೆ ಮೃತಪಟ್ಟಿರುವ ಬಗ್ಗೆ ಪರಶುರಾಮ ಬ್ರಾಹ್ಮಣ ಸೇವಾ ಟ್ರಸ್ಟ್, ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ಬಳ್ಳಾರಿ ಜಿಲ್ಲಾ ವತಿಯಿಂದ ಸಂತಾಪವನ್ನು ವ್ಯಕ್ತ ಮಾಡಿದ್ದಾರೆ.
ಈ ಕರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷರು ಗೋಪಿಕೃಷ್ಣ ಪ್ಯಾಟಿ ಅರ್ಜುನ ಎಂಬ ಆನೆ ಮೃತಬಂದಿರುವುದು ಹಲವಾರು ಅನುಮಾನಗಳು ವಿವಿಧ ಭಾಗದಿಂದ ವ್ಯಕ್ತವಾಗುತ್ತಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಈ ಘಟನೆಯ ಮೇಲೆ ವಿಚಾರಣೆಗೆ ಆದೇಶ ಮಾಡಬೇಕು ಎಂದು ತಾವು ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಒತ್ತಾಯಿಸುತ್ತಿರುವದಾಗಿ ಈ ಸಂದರ್ಭದಲ್ಲಿ ಗೋಪಿ ಕೃಷ್ಣ ಪ್ಯಾಟಿಹೇಳಿದರು.