
ಅರ್ಜುನ ಆನೆ ಸಾವಿಗೆ ಅರಣ್ಯ ಇಲಾಖೆ ವೈಫಲ್ಯ ಕಾರಣ
ಸೂಕ್ತ ಕ್ರಮಕ್ಕೆ ಗವಿಸಿದ್ದಪ್ಪ ಹಂಡಿ ಆಗ್ರಹ
ಕರುನಾಡ ಬೆಳಗು ಸುದ್ದಿ
ಕಪ್ಪಳ, ೦೭- ಮೈಸೂರಿನ ಸಂಸ್ಕೃತಿಕ ನಗರಿ ಮೈಸೂರಿನ ಅರಮನೆಯ ಅಂಬಾರಿ ಯನ್ನು ಸುಮಾರು ಎಂಟು ಬಾರಿ ಹೊತ್ತು ಎಲ್ಲರ ಮನದಲ್ಲಿ ಉಳಿದಿರುವ ಕ್ಯಾಪ್ಟನ್ ಅರ್ಜುನ್ ಆನೆಯನ್ನು ಕಳೆದುಕೊಂಡಿರುವುದು ನಾಡಿನ ದುರದೃಷ್ಟಕರ ಎಂದು ಯುವ ಮುಖಂಡ ಗವಿಸಿದ್ದಪ್ಪ ಹಂಡಿ ಬೆಸರ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ್ದು ಅರ್ಜುನ ಆನೆ ಸಾವಿಗೆ ಅರಣ್ಯ ಇಲಾಖೆ ವೈಫಲ್ಯವೇ ಕಾರಣ ಕಾಡಾನೆಯನ್ನು ಪಳಗಿಸಲು ವಯಸ್ಸಾದ ಹಾಗೂ ಅಂಬಾರಿ ಹೊರುವ ಅರ್ಜುನನನ್ನು ಅರಣ್ಯ ಅಧಿಕಾರಿಗಳ ಉಪಯೋಗಿಸಿಕೊಂಡಿರುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಒಂಟಿ ಸಲಗವನ್ನು ಪಳಗಿಸಲು ಸೂಕ್ತವಾದ ಆನೆಗಳನ್ನು ಬಳಸಿಕೊಳ್ಳಬೇಕಿತ್ತು ಮನುಷ್ಯ ಜೀವವಷ್ಟೇ ಪ್ರಾಣಿಗಳ ಜೀವವು ಅಮೂಲ್ಯವಾದದ್ದು ಎಂಬುದನ್ನು ಇನ್ನಾದರೂ ಅಧಿಕಾರಿಗಳು ತಿಳಿದುಕೊಳ್ಳಬೇಕು ಹಾಗೂ ಸರ್ಕಾರ ಕೂಡಲೇ ಸೂಕ್ತ ತನಿಖೆ ಮಾಡಿ ಅರ್ಜುನ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸರ್ಕಾರ ನಿರ್ದಕ್ಷಣವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರೆ.