a5907573-335d-4b12-ad78-f33329a39395

ಅಳತೆ ಮಾಪನ ಮೂಲಕ ಹೂ ಮಾರುವ ಕಾಯಿದೆ ಶೀಘ್ರ ಜಾರಿ

ಕರುನಾಡ ಬೆಳಗು ಸುದ್ದಿ

ಕುಕನೂರು, ೩೧-  ಪಟ್ಟಣ ಪಂಚಾಯತ ಆವರಣದಲ್ಲಿ ಗುರುವಾರ ಯಲಬುರ್ಗಾ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾಯ೯ಕ್ರಮ ಜರುಗಿತು.

ಕಾಯ೯ಕ್ರಮ ಉದ್ಘಾಟಿಸಿದ ಯಲಬುಗಾ೯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಧೀಶರಾದ ವಿಜಯ ಕುಮಾರ್ ಮ. ಕನ್ನೂರ ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ದಿನಗಳಲ್ಲಿ ಗ್ರಾಹಕರು ನಿತ್ಯ ಮೋಸ ಕ್ಕಿಡಗುತ್ತಿದ್ದಾರೆ.

ಆಧಾರ ಕಾಡ್೯ ಸೇರಿದಂತೆ ಗೌಪ್ಯ ದಾಖಲೆ ಗಳನ್ನು ಯಾರಿಗೂ ಕೊಡಬಾರದು ಇದರಿಂದ ಮೋಸ ವಾಗುವ ಸಾಧ್ಯತೇಇದೆ, ತಾಲೂಕು ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೆ ಉಚಿತ ಕಾನೂನು ಸೇವೆ ಒದಗಿಸುವ ಪ್ರಾಧಿಕಾರ ಇದೆ, ಸಾವ೯ಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸ ಬೇಕೆಂದು ತಿಳಿಸಿದರಲ್ಲದೆ ಶೀಘ್ರ ದಲ್ಲಿಯೇ ಹೂ ಮಾರುವ ವ್ಯಾಪಾರಿ ಗಳು ಸಹ ಅಳತೆ ಮಾಪನ ಮಾಡಿ ಹೂ ಮಾರಬೇಕೆಂಬ ಕಾಯ್ದೆ ಜಾರಿಗೆ ಬಂದಿದೆ.

ಅದು ಶೀಘ್ರ ಕಾಯ೯ರೂಪಕ್ಕೆ ಬರುತ್ತದೆ ಎಂದು ತಿಳಿಸಿದರು. ಮೋಸ ಮಾಡುವ ತಂತ್ರಜ್ಞಾನ ವ್ಯಾಪಕ ಬೆಳೆದಿದೆ, ಇದು ಅಪಾಯಕಾರಿ ಬೆಳವಣಿಗೆ ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು. ಸಿವಿಲ್ ನ್ಯಾಯಾಧೀಶರಾದ ಆಯಿಷಾ ಬಿ.ಪಿ..ಮಜೀದ್, ಗ್ರೇಡ್ ೨ ತಹಸಿಲ್ದಾರ್ ಮುರಳೀಧರ್ ಕುಲಕರ್ಣಿ, ನಾಗಪ್ಪ ಸಜ್ಜನ್ ,ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಬ್ರಹ್ಮಣ್ಯ , ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳಾದ ಬಡಿಯುದ್ದಿನ್, ಆಹಾರ ಇಲಾಖೆಯ ಜೆ ಡಿ ದೇವರಾಜ್, ವಕೀಲರ ಸಂಘದ ಕಾರ್ಯದರ್ಶಿ ಈರಣ್ಣ ಕೋಳೂರು, ವಕೀಲರಾದ ಶಂಕರಗೌಡರ, ಸಂಗಮೇಶ ಗುತ್ತಿ, ರಮೇಶ್ ಗಜಾಕೋಷ, ಅಡಿವೆಪ್ಪ ಬೊರನ್ನವರ್, ಎ ಎಸ್. ಅಯ್.ನಿರಂಜನ ತಳವಾರ , ಸೇರಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!