4ae286a6-207a-408f-9b38-75dc71ea05e2

ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ಸೀಘ್ರ ಪೂರ್ಣ
ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ, ೨೯-  ಅಳವಂಡಿ-ಬೇಟಗೇರಿ ಏತ ನೀರಾವರಿ ಯೋಜನೆಡಿಯಲ್ಲಿ ಕ್ಯಾನಲ್ ನಿರ್ಮಾಣಕ್ಕೆ ಭೂಮಿಕೊಟ್ಟ ರೈತರಿಗೆ ಭೂಸ್ವಾಧೀನದ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಭಾಗದ ಬಹುದಿನಗಳ ಬೇಡಿಕೆ ಅಗಿದ್ದ ಅಳವಂಡಿ-ಬೇಟಗೇರಿ ಏತ ನೀರಾವರಿ ಯೊಜನೆಯನ್ನ ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ಈ ಯೋಜನೆಯನ್ನ ಅರ್ಪಣೆ ಮಾಡುತ್ತೇವೆ.ಈ ಯೋಜನೆಯ ಕ್ಯಾನಲ್ ನಿರ್ಮಾಣಕ್ಕೆ ಭೂಮಿಕೊಟ್ಟ ರೈತರಿಗೆ ಪರಿಹಾರ ಧನದ ಚೆಕ್ ವಿತರಣೆ ಮಾಡುವುದು ವಿಳಂಭಣೆ ಆಗಿತ್ತು ಇಂದು ಇದಕ್ಕೆ ಕಾಲ ಕೂಡಿ ಬಂದಿದೆ ಎಂದರು.

ಅಳವಂಡಿ-ಬೇಟಗೇರಿ ಏತ ನೀರಾವರಿ ಯೋಜನೆಡಿಯಲ್ಲಿ ಕಾಲುವೆ,ಉಪಕಾಲುವೆ ನಿರ್ಮಾಣದ ಸಲುವಾಗಿ ಭೂಸ್ವಾಧಿನವಾದ ಕೊಪ್ಪಳ ತಾಲೂಕಿನ ಕವಲೂರು,ಅಳವಂಡಿ,ಹಿರೇಸಿಂದೋಗಿ,ಮೈನಳ್ಳಿ,ಬಿಕನಳ್ಳಿ,ಹಂದ್ರಾಳ ಗ್ರಾಮಗಳಲ್ಲಿನ ಭೂಸ್ವಾಧಿನವಾದ 173 ಫಲಾನುಭವಿಗಳಿಗೆ 8 ಕೋಟಿ 70 ಲಕ್ಷದ ಪರಿಹಾರ ಚೆಕ್ ವಿತರಣೆ ಮಾಡಿದರು. ಪ್ರಥಮ ದರ್ಜೆ ಕಾಲೇಜ್ ಕಟ್ಟಡಕ್ಕೆ ಅಡಿಗಲ್ಲು : ಅಳವಂಡಿ ಗ್ರಾಮದಲ್ಲಿ 90 ಲಕ್ಷ ಅನುಧಾನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅಡಿಗಲ್ಲು ನೆರವೇರಿಸಿದರು.

ಈ ಸಂದರ್ಧದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಂಕ್ರಮ್ಮ ಜೋಗಿನ್,ಉಪಾಧ್ಯಕ್ಷರಾದ ಶಾರಮ್ಮ ಈಳಿಗೇರ,ಭರಮಪ್ಪ ಹಟ್ಟಿ,ಕ್ರುಷ್ಣರೆಡ್ಡಿ ಗಲ್ಬಿ,ಗಾಳೆಪ್ಪ ಪೂಜಾರ,ವೆಂಕನಗೌಡ್ರು ಹಿರೇಗೌಡ್ರು,ಬಾಲಚಂದ್ರನ ಮುನಿರಬಾದ್,ಕೆ.ಎಂ ಸೈಯದ್,ಬಸವರೆಡ್ಡೆಪ್ಪ,ಚೌಡಪ್ಪ ಜಂತ್ಲಿ,ಅರವಿಂದಪ್ಪ ಬಿರಾದರ್,ರಂಗಪ್ಪ ಕರಡಿ,ಯಲ್ಲಪ್ಪ ಜೀರ್ ಅನ್ವರ್ ಗಡಾದ,ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ,ತಹಶೀಲ್ದಾರ್ ವಿಠ್ಠಲ್ ಚೌಗಲೇ,ತಾಲೂಕು ಪಂಚಾಯತ ಇಓ ದುಂಡೇಶ ತುರಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!