
ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಧಾರ್ಮಿಕ ಶ್ರದ್ದಾಕೇಂದ್ರ
ಕರುನಾಡ ಬೆಳಗುಸುದ್ದಿ
ಗಂಗಾವತಿ,22- ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಧಾರ್ಮಿಕ ಶ್ರದ್ದಾಕೇಂದ್ರವಾಗಿದೆ ಎಂದು ಗ್ರಾಮೀಣ ಅಭಿವೃದ್ದಿ ಪಂಚಾಯತ ರಾಜ್ಯ ಹಾಗೂ ಕಾರ್ಮಿಕ ಇಲಾಖೆ ಸಚಿವ ಕೇಂದ್ರದ ಮಾಜಿ ಸಚಿವ ಪ್ರಲ್ಹಾದಸಿಂಗ ಪಾಟೀಲ ಮಧ್ಯ ಪ್ರದೇಶ ಹೇಳಿದರು.
ನಗರದ ಬಿಜೆಪಿ ಮುಖಂಡ ಸಂತೋಷ ಕೆಲೋಜಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾವು ಹಿಂದೆ ಉಮಾಭಾರತಿಯವರೊಂದಿಗೆ ಹುಬ್ಬಳಿ ಈದ್ಗಾ ಮೈದಾನ ಹೋರಾಟಕ್ಕೆ ಬಂದಾಗ ಅಂಜನಾದ್ರಿಗೆ ಬಂದು ಆಂಜನೇಯನ ದರ್ಶನ ಪಡೆದಿದ್ದವು. ಈಗ ಎರಡನೇ ಬಾರಿ ಪವಿತ್ರವಾದ ರಾಮನ ಭಕ್ತ ಹನುಮಂತ ದರ್ಶನ ಪಡೆದು ಪಾವನವಾಗಿದ್ದವೆ. ಪ್ರಧಾನಮಂತ್ರಿ ನರೆಂದ್ರಮೋದಿಯವರ ಅಭಿವೃದ್ದಿ ಯೋಜನೆಗಳು ಜನರಪವಾಗಿ ದೇಶ ಸರ್ವ ಜನರಿಗೂ ತಿಳಿದಿವೆ ಮೂರನೇ ಬಾರಿಯೂ ನರೆಂದ್ರ ಮೋದಿಯವರು ಪ್ರಧಾನಮಂತ್ರಿಯಾಗುವುದು ಖಚಿತವಾಗಿದೆ.
ಮಧ್ಯ ಪ್ರದೇಶದಲ್ಲಿ ಜನಪರ ಕಾರ್ಯಗಳು ನಿರಂತರ ನಡದಿವೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ. ಕಳೇಧ ಸಲ ಕರ್ನಾಟಕದಲ್ಲಿ ಕಾಂಗ್ರೇಸ ಸರಕಾರ ಅಧಿಕಾರ ಬಂತು. ಆದರೆ ಈಬಾರಿ ಮತ್ತೇ ಕಳೇದ ಸಲ ಬಂದಂತೆ ಲೋಕಸಭಾ ಚುನಾವಣೆಯಲ್ಲಿ ೨೮ ಸ್ಥಾನದಲ್ಲೂ ಬಿಜೆಪಿ ಗೆಲುವಿಗೆ ಕರ್ನಾಟಕ ಮತದಾರರು ಬೆಂಬಲಿಸುವುದು ಗ್ಯಾರಂಟಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಮುಖಂಡರುಗಳಾದ ಸಂತೋಷ ಕೆಲೋಜಿ, ನರಸಿಂಗರಾವ ಕುಲಕರ್ಣಿ, ನಗರಸಭಾ ಸದಸ್ಯ ವಾಸುದೇವ ನವಲಿ, ಸಂಗಯ್ಯಸಂಶೀಮಠ ,ಅಮರಜೋತ್ಯಿ ವೆಂಕಟೇಶ ಮುಂತಾದವರು ಉಪಸ್ಥೀತರಿದ್ದರು.