9ce470b7-76f9-4623-bec5-ea08ab058fa0

ಆನೆಗುಂದಿ ಪದ್ಮನಾಭ ತೀರ್ಥರ ಆರಾಧನೆ

ತಲಾ ಒಂದು ವರೆ ದಿನ ಅವಕಾಶ ನೀಡಿದ  ಸುಪ್ರೀಂ ಕೋರ್ಟ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 09- ಮಧ್ವ ಮಠದ ಐತಿಹಾಸಿಕ ಕ್ಷೇತ್ರ ನವವೃಂದಾವನ‌ಗಡ್ಡೆಯಲ್ಲಿ ರಾಯರಮಠ ಹಾಗೂ ಉತ್ತರಾಧಿ ಮಠಕ್ಕೆ ತಲಾ ಒಂದೂವರೆ ದಿನ ಪದ್ಮನಾಭ ತೀರ್ಥರ ಆರಾಧನೆ ನಡೆಸಲು ಅನು ಮತಿ ದೊರೆತಿದೆ.
ಈ ಕುರಿತು ಮಧ್ಯತಂರ ತೀರ್ಪು ನೀಡಿ ಆದೇಶ ನೀಡಿರುವ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ಆರಾಧನೆಗೆ ಉಭಯ ಮಠಗಲಿಗೆ ಅನುಮತಿ‌ ನೀಡಿದ್ದು ಮತ್ತೆ ಗೊಂದಲ ಮುಂದು ವರೆದಿದೆ.

ತೀರ್ಪು; ಪದ್ಮನಾಭ ತೀರ್ಥರ ಪೂಜೆಗಾಗಿ ರಾಯರಮಠ ಹಾಗೂ ಉತ್ತರಾದಿ ಮಠದವರ ನಡುವೆ ಭಿನ್ನಮತವಿದೆ. ಈ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿದ್ದು ಆರಾಧನೆ ಇರುವ ಕಾರಣ ಮಧ್ಯಂತರ ತೀರ್ಪು ನೀಡಿ ಆದೇಶ ಹೊರಡಿಸಿದೆ.

ರಾಯರಮಠ ; ಇದೇ ಡಿಸೆಂಬರ್‌ 10 ಹಾಗೂ 11ರ ಮಧ್ಯಾಹ್ನದ ತನಕ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದವರಿಂದ ಆರಾಧನೆ ಅಂಗವಾಗಿ ಪೂಜೆ ನಡೆಯಲಿದೆ.

ಉತ್ತರಾದಿ ಮಠ; ಡಿಸೆಂಬರ 11 ಮಧ್ಯಾಹ್ನದ ಬಳಿಕದಿಂದ ಡಿ. 12ರ ರವರೆಗೆ ಉತ್ತರಾದಿ ಮಠದವರಿಗೆ ಆರಾದನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

ಸ್ವಾಗತ ; ಮೊದಲ ಒಂದೂವರೆ ದಿನ ಆರಾಧನೆ ನಡೆಸಲು ನಮಗೆ ಅವಕಾಶ ನೀಡಿರುವುದನ್ನು ಸ್ವಾಗತಿಸಿ ಆರಾಧನಾ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ರಾಯರ ಮಠದ ಪ್ರಮುಖರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!