
ಆಪ್ತ ಸಚಿವರ ಜೊತೆಯಲ್ಲಿ ಸಿಎಂ ಸಿದ್ಧರಾಮಯ್ಯ ರಹಸ್ಯ ಸಭೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 20- ಬಳಿಯ ಬಸಾಪುರ ವಿಮಾನ ನಿಲ್ದಾಣದಲ್ಲಿ ಆಪ್ತ ಸಚಿವರ ಜೊತೆಯಲ್ಲಿ ಸಿಎಂ ಸಿದ್ಧರಾಮಯ್ಯ 30 ನಿಮಿಷಗಳ ಕಾಲ ರಹಸ್ಯ ಸಭೆ.
ಸೋಮವಾರ ವಿಜಯಪುರದ ಕಾರ್ಯಕ್ರಮ ಮುಗಿಸಿ ಬಂದಿದ್ದ ಸಿಎಂ ಸಚಿವರು ಗೌಪ್ಯ ಸಭೆ ನಡೆಸಿದರು.
ಸಿಎಂ ಜೊತೆ ಚರ್ಚೆಯ ಬಳಿಕ ಹೊರಬಂದ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ ಪಾಟೀಲ್. ಸಮಯ ಇರುವ ಕಾರಣ ಹಲವು ನಿಮಿಷ ಕಾಲ ಸಿಎಂ ಜೊತೆ ಚರ್ಚೆ ಮಾಡಿದೆ.ದೆಹಲಿ ನಾಯಕರಿಂದ ಯಾವುದೇ ಫೋನ್ ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.ನಿಮಗೆ ಯಾರು ಹೇಳಿದ್ರು ಗೊತ್ತಿಲ್ಲ ನಮಗೆ ಯಾವುದೇ ದೆಹಲಿ ಫೋನ್ ಬಂದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ನಕಾರ ಃ ರಹಸ್ಯ ಸಭೆ ಕುರಿತು ಪ್ರತಿಕ್ರಿಯೆ ನೀಡಲು ಸಿಎಂ ಸಿದ್ಧರಾಮಯ್ಯ ನಿರಾಕರಿಸಿದರು. 2018ರಲ್ಲಿ ನಮ್ಮ ಮನೆಗೆ ಯಾವ ನಾಯಿ ಬಂದಿತ್ತು ಎಂದಿರುವ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ಮೌನಕ್ಕೆ ಜಾರಿ ಸಿಎಂ. ಪ್ರತಿಕ್ರಿಯೆ ನೀಡದೆ ವಿಶೇಷ ವಿಮಾನದ ಮೂಲಕ ಬೆಂಗಳುರ ಕಡೆ ಪ್ರಯಾಣ ಬೆಳಸಿದರು.