WhatsApp Image 2024-07-13 at 4.32.03 PM (1)

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುಲು ವೈದ್ಯರ ಪಾತ್ರ  ಮಹತ್ವದ್ದು : ಕ್ಯಾವಟರ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ,13- ಇಂದಿನ ದಿನಗಳಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ವೈದ್ಯರ ಪಾತ್ರ ಬಹಳ ಮಹತ್ವದಾಗಿದೆ ಮತ್ತು ವೈದ್ಯರ ಪ್ರಾಮಾಣಿಕ ಪ್ರಯತ್ನವೂ ಅತ್ಯಗತ್ಯಯವಾಗಿದೆ. ಇಂದು ವರ್ತಮಾನ ಸಮಯದಲ್ಲಿ ಶರೀರದ ರೋಗಗಳಿಗಿಂತ ಜಾಸ್ತಿ ಮನಸ್ಸಿನ ರೋಗಗಳು ಹೆಚ್ಚಾಗಿವೆ. ಚಿಂತೆ,ಆಸೆ ಇವು ದೊಡ್ಡ ಕಾಯಿಲೆಗಳು ಈ ರೋಗಗಳನ್ನು ದೂರ ಮಾಡಿಕೊಳ್ಳಲು ಇಂತಹ ಆಧ್ಯಾತ್ಮ ಕೇಂದ್ರದ ಲಾಭವನ್ನು ಜನರು ಪಡೆದುಕೊಳ್ಳಬೇಕು ಎಂದು ಡಾ.ಬಸವರಾಜ್ ಕ್ಯಾವಟರ್ ಅಭಿಪ್ರಾಯಪಟ್ಟರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮೆಡಿಕಲ್ ವಿಂಗ್ ಅಡಿಯಲ್ಲಿ ಏರ್ಪಡಿಸಿದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತ ಇಂದು ನಾವೆಲ್ಲ ಕುಟುಂಬ ಉದ್ಯೋಗ ವ್ಯವಹಾರ ಎಲ್ಲದಕ್ಕೆ ಸಮಯವನ್ನು ಕೊಡುತ್ತೇವೆ ಆದರೆ ಸ್ವಯಂಗಾಗಿ ಸಮಯವನ್ನ ತೆಗೆದಿಟ್ಟು ಇಂತಹ ಶಾಂತಿಯ ವಾತಾವರಣದಲ್ಲಿ ಬಂದು ಶಾಂತಿಯ ಅನುಭೂತಿಯನ್ನು ಮಾಡಬೇಕು ಎಂದು ಕರೆ ನೀಡಿದರು.

ಹಿರಿಯ ವೈದ್ಯರಾದ ಡಾ.ಕೆಜಿ ಕುಲಕರಣಿಯವರು ಮಾತನಾಡುತ್ತಾ ನಮ್ಮ ಮಾನಸಿಕ ಸ್ಥಿತಿ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಮನೋ ದೈಹಿಕ ಕಾಯಿಲೆಗಳು ದೂರವಾಗಲು ಆಧ್ಯಾತ್ಮ ಜ್ಞಾನ ಮತ್ತು ಮೆಡಿಟೇಶನ್ ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿ ಮಾತನಾಡಿದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ವೈದ್ಯ ನಾರಾಯಣೊ ಹರಿ ಎಂಬಂತೆ ಜನ ರೋಗಗಳಲ್ಲಿ ನರಳುವಾಗ ವೈದ್ಯರನ್ನು ದೇವರ ಸಮಾನ ಪೂಜ್ಯ ಭಾವನೆಯಲ್ಲಿ ನೋಡುತ್ತಾರೆ ವೈದ್ಯಕೀಯ ವೃತ್ತಿ ಪವಿತ್ರ ವೃತ್ತಿ ವೈದ್ಯರು ಪ್ರಾಮಾಣಿಕವಾಗಿ ರೋಗಿಗಳ ಶರೀರದ ನೋವನ್ನು ಕಾಯಿಲೆಯನ್ನು ಗುಣಪಡಿಸುವುದರ ಜೊತೆಗೆ ಆತ್ಮದ ರೋಗವನ್ನು ದೂರ ಮಾಡುವಂತಹ ಡಬಲ್ ಡಾಕ್ಟರ್ ಆಗಬೇಕು ರೋಗಿಗಳಿಗೆ ಪ್ರೀತಿಯಿಂದ ಕಾಳಜಿಯಿಂದ ಚಿಕಿತ್ಸೆ ನೀಡುವುದರ ಜೊತೆಗೆ ಅವರು ಆಂತರಿಕ ಶಕ್ತಿ ಮಾನಸಿಕ ಸಶಕ್ತರಾಗಲು ಮಾರ್ಗದರ್ಶನ ನೀಡಬೇಕು ಎಂದರು.

ಡಾ.ರೇಖಾ ಮಾತನಾಡುತ್ತ ರೋಗಿಗಳು ರೋಗ ಬಂದಮೇಲೆ ಆಸ್ಪತ್ರೆಗೆ ಬರುತ್ತಾರೆ ಆದರೆ ರೋಗ ಬರುವ ಮೊದಲೇ ಕೆಲವು ಎಚ್ಚರಿಕೆ ವಹಿಸಬೇಕು ಜೀವನ ಶೈಲಿಯನ್ನು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಿಕೆಯ ಮೇಲೆ ಡಾ. ಪ್ರಭು ಡಾ. ಅಜಯ್ ಬಾಚಲಾಪುರ ಡಾ. ವೀರೇಶ್ ಹಿರೇಮಠ್ ಡಾ. ಹೇಮಾ ಉಪಸ್ಥಿತರಿದ್ದರು ಬ್ರಹ್ಮಕುಮಾರಿ ಸ್ನೇಹ ಅಕ್ಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವೈದ್ಯರನ್ನು ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.‌

Leave a Reply

Your email address will not be published. Required fields are marked *

error: Content is protected !!