2e4d7dcf-9bf1-4580-ba1a-edd89bffb17e

ಸರ್ಕಾರಿ ಇಂಜಿನಿಯರಿಂಗ ಕಾಲೇಜುಗಳ ಅರೆಕಾಲಿಕ ಉಪಾಸಕರಿಂದ 

ಕಾಯಂಗೊಳಿಸಲು ಆಗ್ರಹಿಸಿ ಧರಣಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೫- ರಾಜ್ಯದ ಸರ್ಕಾರಿ ಇಂಜಿನಿಯರಿಂಗ ಕಾಲೇಜುಗಳ ಅರೆಕಾಲಿಕ ಉಪಾಸಕರನ್ನು ಕಾಯಂ ಗೋಳಿಸಬೇಕು ಹಾಗೂ ನಮ್ಮ ವಿವಿಧ ಬೇಡಿಕೆಗಳ ಇಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವದಿ ಧರಣಿ ಮಾಡುತ್ತಿರುವುದಾಗಿ ಸರ್ಕಾರಿ ಇಂಜಿನಿಯರಿಂಗ ಕಾಲೇಜುಗಳ ಅರೆಕಾಲಿಕ ಉಪಾಸಕರ ಸಂಘದ ಅಧ್ಯಕ್ಷ ವೀರನಗೌಡ ಹಾಗೂ ಪ್ರಧಾನ  ಕಾರ್ಯದರ್ಶಿ ವಿರೇಶ ಕಬಾಡಿ ಹೇಳಿದರು.

ಅವರು  ಮಂಗಳವಾರದಂದು ಕೊಪ್ಪಳ ಮೀಡಿಯಾಕ್ಲಬ್‌ ನಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾನತಾಡುತ್ತಿದ್ದರು. ಸರ್ಕಾರ ಪದವಿ ಕಾಲೇಜ ಅರೆಕಾಲಿಕ ಉಪನ್ಯಾಸಕರಿಗೆ ವೇತನ ಹೆಚ್ಚು ಮಾಡಿ ನಮಗೆ ಅನ್ಯಾಯ ಮಾಡಿದೆ ಅವರಿಗೆ ನೀಡುವ ಸೌಲಭ್ಯಗಳನ್ನು ನಮಗೆ ನೀಡಿ ಎಂದು ಆಗ್ರಹಿಸಿದರು.

ಪ್ರಸ್ತುತ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರು ಕಾರ್ಯಭಾರ ವೇತನ, ಕೃಪಾಂಕ, ಸೇವಾ ಪ್ರಮಾಣ ಪತ್ರ ನೀಡುತ್ತಿರುವ ರೀತಿಯಲ್ಲೆ ಸರ್ಕಾರಿ ಇಂಜಿನಿಯರಿಂಗ ಕಾಲೇಜುಗಳ ಅರೆಕಾಲಿಕ ಉಪಾಸಕರ  ವಿಸ್ತರಿಸಿ.

ಸರ್ಕಾರಿ ಇಂಜಿನಿಯರಿಂಗ ಕಾಲೇಜುಗಳ ಅರೆಕಾಲಿಕ ಉಪಾಸಕರಿಗೆ ಪ್ರತಿತಿಂಗಳು ವೇತನ ನೀಡಬೇಕು ಅಂದು ಆಗ್ರಹಿಸಿದರು.

ರಾಜ್ಯದಲ್ಲಿ ಒಟ್ಟು ೧೬ ಇಂಜನಿಯರಿಂಗ ಕಾಲೇಜುಗಳಿದ್ದು ೨೬೦ ಅರೇಕಾಲಿಕ ಉಪನ್ಯಸಕರಿದ್ದಾರೆ, ಕೊಪ್ಪಳ ಜಿಲ್ಲೆಯಲ್ಲಿ ಎರಡು ಕಾಲೇಜುಗಳಿದ್ದು ೬೩ ಅರೆಕಾಲಿಕ ಉಪನ್ಯಾಸಕರು ಸೇವೆ ಸಲ್ಲಿಸುತ್ತುದ್ದಾರೆ.

ಹೋರಾಟ : ಸರ್ಕಾರ ನಮ್ಮ ಬೇಡಿಕೆಗಲನ್ನು ಇಡೆರಿಸುವವರೆಗು ನಿರಂತರವಾಗಿ ಕ್ಲಾಸ್ ಬಹಿಷ್ಕರಿಸಿ ಧರಣಿ ಮಾಡುತ್ತಿದ್ದು ಸರ್ಕಾರ ತಕ್ಷಣ ಕ್ರಮಕೈಗೋಳ್ಳಬೇಕು ನಿರ್ಲಕ್ಷದಿಂದ ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ ಎಂದರು.

ಈ ಸಂರ್ಭದಲ್ಲಿ ರೇಣುಕಾ ಅಡವಿ, ಉಮಾ ಮಹೇಶ್ವರಿ ಹಿರೇಮಠ, ತನುಜಾ ಡಿ,ಕೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!