
ಇಂದರಿಗಿ
ಶುಕ್ರವಾರ ರಾತ್ರಿ ರೈತನ ಮೇಲೆ ಕರಡಿ ದಾಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 25- ತಾಲೂಕಿನ ಇಂದರಿಗಿ ಗ್ರಾಮದಲ್ಲಿ ರೈತ ಶರಣಪ್ಪ ಹಿರೇ ಕುಂಬಾರ ಮೇಲೆ ಕರಡಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ.
ಶುಕ್ರವಾರ ರಾತ್ರಿ ಹೊಲಕ್ಕೆ ತೆರಳಿದಾಗ ಕರಡಿ ದಾಳಿ ನಡೆಸಿದೆ ಎನ್ನಲಾಗಿದ್ದು. ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡ ರೈತ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೈತನ ತೆಲೆ ಹಾಗೂ ಕಿವಿಗೆ ಬಲವಾಗಿ ಕಚ್ಚಿದ್ದು ಗಂಭೀರ ಗಾಯಗಳಾಗಿವೆ. ಕರಡಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದಾಳಿಯಿಂದಾಗಿ ಗಾಯ ಗೊಂಡ ರೈತನ ತೆಲೆ ಹಾಗೂ ಕಿವಿಗೆ ಹೊಲಿಗೆ ಹಾಕಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ. ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಹಾರ ವಿತರಣೆಗೆ ಕ್ರಮವಹಿಸುವುದಾಗಿ ಆರ್ಎ್ಒ ಪ್ರಕಾಶ ಪವಾಡಿಗೌಡರ್ ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.