
ಕರಕುಶಲ ಮತ್ತು ನೇಯ್ಗೆ ಮಹೋತ್ಸವ ಉದ್ಘಾಟನೆ.
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ನಗರದ ತಾಲೂಕ ಕ್ರೀಡಾಂಗಣದಲ್ಲಿ ಇಂದು ಅ.25 ರಂದು ಬುಧವಾರ ಸಂಜೆ 4ಕ್ಕೆ ಕರಕುಶಲ ಮತ್ತು ನೇಯ್ಗೆ ಮಹೋತ್ಸವ ಕಿರು ಪ್ರದರ್ಶನ ಮತ್ತು ಮಾರಾಟ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟನೆ ಯಾಗಲಿದೆ.
ಮಂಗಳೂರು – ಕರ್ನಾಟಕ ಕರಕುಶಲ ಹಸ್ತಕಲಾ ಸೇವಾ ಕೇಂದ್ರ ದಿಂದ ಈ ಪ್ರದರ್ಶನ ಆಯೋಜಿಸಲಾಗಿದ್ದು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಲಿದ್ದಾರೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ. ಶಾಸಕ ಕೆ. ರಾಘವೇಂದ್ರ ಹಿಟ್ನಾಳ. ಹೆಮಲತಾ ನಯಕ್ .ನಗರಸಭೆ ಅಧ್ಯಕ್ಷೆ ಶವಗಂಗಮ್ಮ ಭೂಮಕ್ಕನವರ . ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ ಎಸ್. ಕೊಪ್ಪಳ ಜಿಲ್ಲಾಧಿಕಾರಿಗಳು“ . ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಇತರರು ಆಗಮಿಸಲಿದ್ದಾರೆ ಎಂದು ಆಸೀಫ್ ಹಸನ ವಿ.ಪಿ ತಿಳಿಸಿದ್ದಾರೆ.