
ಇಂದು ಶ್ರೀ ಗುದ್ನೇಶ್ವರ ಸ್ವಾಮಿಯ
ಪಂಚ ಕಳಸದ ರಥೋತ್ಸವ
ರವಿಕುಮಾರ ಹಳ್ಳಿಕೇರಿ
ಕರುನಾಡ ಬೆಳಗು ಸುದ್ದಿ
ಕುಕನೂರ 25- ಪಟ್ಟಣದ ಗುದ್ನೇಪ್ಪನಮಠದ ಗ್ರಾಮದಲ್ಲಿ ದಿ -26-12-2023ರಂದು ಮಂಗಳವಾರ ಶ್ರೀ ಗುದ್ನೇಶ್ವರ ಸ್ವಾಮಿಯ ಪಂಚ ಕಳಸ ರಥೋತ್ಸವ ಬಿನ್ನಾಳ ಗ್ರಾಮದ ಶ್ರೀ ಬಸವೇಶ್ವರ ನಂದಿ ಕೋಲು ಸೇವೆ ಹಾಗೂ ಕಕ್ಕಿಹಳ್ಳಿ ಶ್ರೀ ಅಳಿಯ ಚನ್ನಬಸವೇಶ್ವರ ಪಲ್ಲಕ್ಕಿ ಸೇವಾದಂದಿಗೆ ಭಜನಾ ಸಂಘದವರಿಂದ, ಕರಡಿ ಮಜಲು ಸಂಘದವರಿಂದ,ಗ್ರಾಮದ ಅನೇಕ ಸಂಘ ಸಂಸ್ಥೆಗಳಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಗುದ್ನೇಶ್ವರ ಸ್ವಾಮಿಯ ಪಂಚ ಕಳಸ ರಥೋತ್ಸವ ವಿಜೃಂಭಣೆಯಿಂದ 5 ಗಂಟೆಗೆ ಜರಗಲಿದೆ ಗುದ್ನೇಶ್ವರ ಸ್ವಾಮಿಗೆ 800 ವರ್ಷಗಳ ಕಾಲ ಇತಿಹಾಸವಿದೆ.
ಗುದ್ನೇಶ್ವರ ಸ್ವಾಮಿ ಒಂದು ಘಳಿಗೆಯಲ್ಲಿ 188 ಎಕ್ಕರೆ ಹುಣಸಿ ಮರಗಳನ್ನು ಬಿತ್ತಿದ ಪವಾಡ ಇದೆ. ಆ ಮರಗಳು ಇನ್ನೂ ಈಗಲು ಹಾಗೆ ಉಳಿದಿವೆ. ಹಾಗೆ ಬಿತ್ತನೆ ಮಾಡಿದ ಜೋಡು ಬಸವಣ್ಣ ಗಳು ಶಿಲೆಯಾಗಿ ಇವಾಗಲು ಕೂಡ ಇವೆ ಇವಾಗಲು ಜೋಡು ಬಸವಣ್ಣ ಗಳನ್ನು ಇರುವುದು ನೋಡಿದರೆ ಗುದ್ನೇಶ್ವರನ ಪವಾಡದ ಶಕ್ತಿ ಇನ್ನೂ ಹೆಚ್ಚಾಗುತ್ತದೆ.
ಗುದ್ನೇಶ್ವರ ಸ್ವಾಮಿಯ ಪಂಚ ಕಳಸ ರಥೋತ್ಸವಕ್ಕೆ ನವ ದಂಪತಿಗಳು ಮೊದಲ ಸಾರಿ ಬಂದು ಗುದ್ನೇಶ್ವರನ ರಥೋತ್ಸವಕ್ಕೆ ಮಕ್ಕಳ ಭಾಗ್ಯ ಕೊಡು ಎಂದು ಬೇಡಿಕೊಂಡು ಉತ್ತತ್ತಿ, ಬಾಳೆಹಣ್ಣು, ಎಸೆಯುವುದರಿಂದ ಮುಂದಿನ ವರ್ಷ ಬರುವಾಗ ಮಕ್ಕಳ ಭಾಗ್ಯ ಕೊಡುವ ಶಕ್ತಿ ಈ ಗುದ್ನೇಶ್ವರ ಸ್ವಾಮಿಗೆ ಇದೆ .
ಮಹಾ ರಥೋತ್ಸವ ದಿನದಿಂದ 5 ದಿನಗಳ ವರೆಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಶ್ರೀ ಪ್ರಭುಲಿಂಗ ದೇವರು ಗುದ್ನೆಪ್ಪನ ಮಠ ಹಾಗೂ ಶ್ರೀ ಷ.ಬ್ರ .108 ಶಿವ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಬೇದಬಟ್ಟಿ ಶ್ರೀ ಷ. ಬ್ರ.108 ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀಧರ್ ಮುರುಡಿ ಹಿರೇಮಠ ಯಲಬುರ್ಗಾ,ಶ್ರೀ ಮ. ನಿ. ಪ್ರ. ಡಾ. ಮಹಾದೇವ ಮಹಾಸ್ವಾಮಿಗಳು ಮುಂಡರಗಿ ಅನ್ನದಾನೇಶ್ವರ ಶಾಖ ಮಠ ಕುಕನೂರು ಇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ . ಅಧ್ಯಕ್ಷತೆ ತಹಸಿಲ್ದಾರ್ ಕುಕನೂರು ಗುದ್ನೇಶ್ವರ ಟ್ರಸ್ಟ್ ಕಮಿಟಿ ಸಲಹಾ ಸಮಿತಿ ಗುದ್ನಪ್ಪನ ಮಠ ಕುಕುನೂರು ತಾಲೂಕಿನ ಎಲ್ಲಾ ಗ್ರಾಮದ ಗುರು ಹಿರಿಯರು ಮತ್ತು ಸಮಸ್ತ ಸದ್ಭಕ್ತರು ಈ ಒಂದು ಮಹಾ ರಥೋತ್ಸವದಲ್ಲಿ ಬಂದು ಪಾಲ್ಗೊಳಿರಿ ಎಂದು ಚನ್ನಬಸಯ್ಯ ದೂಪಾದ ಮಾಜಿ ಪಪಂ ಸದಸ್ಯರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ .