WhatsApp Image 2024-07-07 at 6.12.52 PM

ಇನ್ನರ್ ವ್ಹೀಲ್ ಕ್ಲಬ್ ನ ನ್ಯೂತನ ಅಧ್ಯಕ್ಷರಾಗಿ ಶೆಂಕುತಲಾದೇವಿ ಮಾಲಿಪಾಟೀಲ ಆಯ್ಕೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 7- ಹಿಂದಿನ ಕಾಲದಲ್ಲಿ ಮಹಿಳೆಯರು ಹೊರಗಡ ಬರುತ್ತಿರಲಿಲ್ಲ ಆದರೆ ಈಗ ಕಾಲ ಬದಲಾಗಿದೆ ಮಹಿಳೆಯರು ಎಲ್ಲಾ ರಂಗದಲ್ಲಿ ಹಂತ ಹಂತವಾಗಿ ಮುಂದೆ ಬಂದಿದ್ದಾರೆ ಮಹಿಳೆಯರು ಅಬಲೆ ಅಲ್ಲಾ ಸಬಲೆ ಎಂದು ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ನಡೆದ ಇನ್ನರ್ ವ್ಹೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಿಳೆಯರು ಸಮಯಕ್ಕೆ ತುಂಬಾ ಬೆಲೆ ಕೊಡಬೇಕು ಪಟ್ಟಣದಲ್ಲಿ ಹಿಂದಿನಿಂದ ಇನ್ನರ್ ವ್ಹೀಲ್ ಕ್ಲಬ್ ನ ವತಿಯಿಂದ ಒಳ್ಳೆಯ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಇವರಿಂದ ಇನ್ನೂ ಉತ್ತಮ ಜನಪರ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶೆಂಕುತಲಾದೇವಿ ಮಾಲಿ ಪಾಟೀಲ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಹಲವಾರು ಸಂಘ. ಸಂಘಟನೆಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಅವರಿಂದ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಇನ್ನೂ ಹೂಸ ಹೂಸ ಜನಪರ ಕಾರ್ಯಕ್ರಮ ನೆಡಯಲಿ ಎಂದರು ಹೆಣ್ಣು ಸಂಸಾರದ ಕಣ್ಣು. ಸಂಸಾರದ ಜವಾಬ್ದಾರಿ ಮತ್ತು ಸಮಾಜಸೇವೆ.ಇನ್ನೂ ಹಲವಾರು ರಂಗಗಳಲ್ಲಿ ಕೆಲಸ ಮಾಡಿ ದಣಿವು ಇಲ್ಲದಂತೆ ದುಡಿದು. ತಾಯಿಯಾಗಿ. ಮಡದಿಯಾಗಿ.ಸಹೋದರಿಯಾಗಿ. ಎಲ್ಲಾದರೂ ವಾತ್ಸಲ್ಯ ತೋರಿಸುವವರು ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುತ್ತಾರೆ. ಎಂದು ಹೇಳಿದರು.

ನಂತರ ಕೂಪ್ಪಳ ಜಿಲ್ಲಾ ಮಾಜಿ ಅಧ್ಯಕ್ಷ ಪ್ರತಿಮಾ ಪಟ್ಟಣಶೆಟ್ಟಿ. ಲತಾ ಕಲ್ಯಾಣಿ. ಆರೋಗ್ಯ ಅಧಿಕಾರಿ ಡಾಕ್ಟರ್ ಮೀನಾ. ಸವಿತಾ ಓಜ್ಜಿನಹಳ್ಳಿ. ಚನ್ನಮ್ಮ ಪಾಟೀಲ. ಕಿತಿ೯ ಜಕ್ಕಲಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ನಂತರ ಇನ್ನರ್ ವ್ಹೀಲ್ ಕ್ಲಬ್ ನ ನ್ಯೂತನ ಅಧ್ಯಕ್ಷರಾಗಿ ಶೆಂಕುತಲಾದೇವಿ ಮಾಲಿ ಪಾಟೀಲ. ಕಾರ್ಯದರ್ಶಿಯಾಗಿ ಚನ್ನಮ್ಮ ಪಾಟೀಲ. ಖಂಜಾಚಿಯಾಗಿ ಶೋಭಾ ಬೆಲೇರಿ.ಐಎಸ್ಓಯಾಗಿ ಜೋತಿ ಪಲ್ಲೇದ.ಎಡಿಟರ್ ಯಾಗಿ ಮಂಜುಳಾ ಚಲುವಾದಿ. ನ್ಯೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

ಈ ವೇಳೆ ಇನ್ನರ್ ವ್ಹೀಲ್ ಕ್ಲಬ್ ನ ವತಿಯಿಂದ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು ಮತ್ತು ಕ್ಲಬ್ ನ ವಿವಿಧ ಮಹಿಳೆಯರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಡಾಕ್ಟರ್ ನಂದಿತಾ ದಾನರೆಡ್ಡಿ. ಸುನೀತಾ ಪತಂಗರಾಯ. ಗೀತಾ ರಾಠೋಡ.ಉಮಾ . ಮಲಿಕಾಬಿ ತಾಳಕೇರಿ. ಮತ್ತು ಕ್ಲಬ್ ನ ಸವ೯ಸದಸ್ಯರು ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!