
ಬೈಕ ಡಿಕ್ಕಿ ತಂದೆ – ಮಗ ಸಾವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ತಾಲೂಕಿನ ಇರಕಲ್ಲಗಡ ಗ್ರಾಮದ ತಂದೆ – ಮಗ ಕುಕನಪಳ್ಳಿ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಲಾರಿ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಭಾನುವಾರ ಸರಕು ಸಾಗಣೆ ಲಾರಿಗೆ ಡಿಕ್ಕಿ ಹೊಡೆದು ಕೊಪ್ಪಳ ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಮೌನೇಶ್ ಬಡಿಗೇರ (31) ಹಾಗೂ ದೇವೇಂದ್ರಪ್ಪ ಬಡಿಗೇರ (55) ಇಬ್ಬರು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ ಮೌನೇಶ್ ಅವರ ವಿವಾಹ ಇತೀಚಿಗೆ ನ. 24ರಂದು ನಡೆದಿತ್ತು. ಮದುವೆ ನಂತರ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬಂದು ಬಾಸಿಂಗ ಅರ್ಪಿಸಿ ಹೆದ್ದಾರಿ ಮೂಲಕ ಸ್ವಗ್ರಾಮಕ್ಕೆ ತೆರಳುವಾಗ ಮಗ ಬೈಕ್ ಚಲಾಯಿಸುತ್ತಿದ್ದಾಗ ತಂದೆ ಹಿಂದೆ ಕುಳಿತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪ್ರಕರಣ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇರಕಲ್ಲಗಡಾ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು . ಊರಿಗೆ ಊರೇ ದುಖದಲ್ಲಿ ಮುಳುಗಿದೆ.