gupta4

ಉದ್ಯಮಿ ಶ್ರೀನಿವಾಸ ಗುಪ್ತಾರಿಗೆ ಕನ್ನಡ
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೦೬-  ಬೆಂಗಳೂರಿನ ದಿ ನ್ಯೂಸ್ ಪೇಪರ್ಸ
ಅಸೋಸಿಯೇಷನ್ ಆಫ್ ಕರ್ನಾಟಕವತಿಯಿಂದ ನೀಡಲಾಗುವ
೨೦೨೩ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು
ಜಿಲ್ಲೆಯ ಖ್ಯಾತ ಉದ್ಯಮಿ ಶ್ರೀನಿವಾಸ ಗುಪ್ತಾರಿಗೆ ಪ್ರದಾನ
ಮಾಡಲಾಯಿತು.
ಇತ್ತೀಚಿಗೆ ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ
ಪುರಭವನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ
ಶ್ರೀನಿವಾಸ ಗುಪ್ತಾರವರ ಉದ್ಯಮ ಸೇವೆ ಹಾಗೂ ಸಾಮಾಜಿಕ
ಸೇವೆಯನ್ನು ಪರಿಗಣಿಸಿ “೨೦೨೩ನೇ ಸಾಲಿನ ಕನ್ನಡ
ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಈ
ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ
ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ,
ಸಂಘಟನೆಯ ಅಧ್ಯಕ್ಷರಾದ ಗಣೇಶ ಕಾಸರಗೋಡ,
ಗೌರವಾಧ್ಯಕ್ಷ ಎ.ನಾರಾಯಣಮೂರ್ತಿ, ಸಂಸ್ಥಾಪಕ ಶ್ರಾವಣ
ಲಕ್ಷö್ಮಣ, ಡಿಮ್ಯಾಕ್ಸ್ ಸಂಸ್ಥೆಯ ಎಸ್.ಪಿ.ದಯಾನಂದ,
ಡಾ.ವಿಶ್ವಾಸ್,ಸುಬೇದಾರ್ ಬಿ.ಕೆ.ಕುಮಾರಸ್ವಾಮಿ, ವಿವೇಕ
ಸುಬ್ಬಾರೆಡ್ಡಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!