
ಉಪನಯನ ಅಂದರೆ ಜ್ಙಾನದ ಕಣ್ಣು ತೆರೆಯುವಂತದ್ದು
: ಪಂ.ರಘುಪ್ರೇಮಾಚಾರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೧೯- ಉಪನಯನ ಅಂದರೆ ಜ್ಞಾನದಕಣ್ಣು ತೆರೆಯುವಂತದ್ದು ವೇದಾಧ್ಯನದ ತಳಹದಿ ಹಾಗೂ ಯಜ್ಞೋಪವೀತ. ಗಾಯತ್ರಿ ಜಪದ ಮಹತ್ವ ಉಪನಯನದ ಮಹತ್ವವನ್ನು ಕುರಿತು ಪಂ.ರಘುಪ್ರೇಮಾಚಾರ್ ಮುಳುಗುಂದ ಹೇಳಿದರು.
ಅವರು ನಗರದ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಜರುಗಿದ ೩೬ನೇ ಸಾಮೂಹಿಕ ಉಪನಯನ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿವರ್ಷದಂತೆ ಈ ವರ್ಷವೂ ಸಾಮೂಹಿಕ ಉಪನಯನ ಬ್ರಹ್ಮೋಪದೇಶ ರವಿವಾರ ಜರುಗಿತು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದತಹ ೩೮ ವಟುಗಳು ಸಾಮೂಹಿಕವಾಗಿ ಬ್ರಹ್ಮೋಪದೇಶ ಪಡೆದರು.ಹಲವರಿಗೆ ಸಮಯದ ಅಭಾವ, ಕೆಲವರಿಗೆ ಆರ್ಥಿಕ ತೊಂದರೆ ಹಾಗೂ ಕೆಲವರು ಸಾಕ್ಷಾತ್ ರಾಯರ ಸನ್ನಿಧಾನದಲ್ಲಿ ಉಪನಯನ ಮಾಡುವ ಅಪೇಕ್ಷೆ ಇರುತ್ತದೆ. ಆದ್ದರಿಂದ ರಾಯರ ಸನ್ನಿಧಾನದಲ್ಲಿ ಶ್ರೀಮಠವೂ ಸಾಮೂಹಿಕ ಉಪನಯನ ಆಯೋಜಿಸಿದೆ. ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮ ಬೆಳಗಿನ ೫.೩೦ ಈ ಪ್ರಾರಂಭಗೊAಡು ನಂತರ ಸಾಮೂಹಿಕ ಅಕ್ಷತಾರೋಹಣ ೧೦-೧೫ ಗಂಟೆಗೆ. ಯಜ್ಞೋಪವೀತ ಧಾರಣೆ. ನಂತರ ಗಾಯತ್ರಿ ಉಪದೇಶ ಮಾತೃ ಭಿಕ್ಷಾ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದ ಪ್ರಧಾನ ಅರ್ಚಕರಾದ ಪಂ.ರಘುಪ್ರೇಮಾಚಾರ ಮುಳುಗುಂದ ಇವರ ಮಾರ್ಗದರ್ಶನದಲ್ಲಿ ನೆರವೇರಿತು. ನಂತರ ಮಧ್ಯಾಹ್ನ ತೀರ್ಥಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಶ್ರೀ ಮಠದ ಅಧ್ಯಕ್ಷರಾದ ಅನಂತಾಚಾರ್ ಹುಲಗಿ, ಶ್ರೀಮಠದ ಪ್ರಧಾನ ಅರ್ಚಕರಾದ ಪಂ.ರಘುಪ್ರೇಮಾಚಾರ ಮುಳುಗುಂದ ಶ್ರೀ ಮಠದ ವ್ಯವಸ್ಥಾಪಕರಾದ ಜಗನ್ನಾಥಾಚಾರ್ ಹುನುಗುಂದ, ನರಸಿಂಹಾಚಾರ್ ಅಗ್ನಿಹೋತ್ರಿ ಇವರುಗಳ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಡಾ.ಡಿ.ಆರ್.ಬೆಳ್ಳಟ್ಟಿ, ಪಂ.ವೇದವ್ಯಾಸಾಚಾರ್ ಜೋಶಿ, ರವಿ ಆಚಾರ್ ಕರಣಂ, ವಸಂತ ಪೂಜಾರ್ ಮಾದಿನೂರು, ಕೃಷ್ಣಾಚಾರ್ ಐಕೂರ್, ನರಹರಿಆಚಾರ್ ಕೊಪ್ಪರ, ಗೋವಿಂದಾಚಾರ್ ಬಾರ‍್ಲಿ, ಕಟ್ಟಿ ಶ್ರೀನಿವಾಸಾಚಾರ್, ಪ್ರಾಣೇಶಾಚಾರ್ ಅಗ್ನಿಹೋತ್ರಿ, ಅನಂತಭಟ್ಟ ಜೋಶಿ, ನಾರಾಯಣ ದಾಸ, ಶ್ರೀನಿವಾಸಾಚಾರ್ ವಡವಿ, ವೆಂಕಣ್ಣಾಚಾರ್ ಗುನ್ನಾಳ, ಕೃಷ್ಣಮೂರ್ತಿ ಕುಲಕರ್ಣಿ, ಮೋಹನ ಕಟ್ಟಿ, ನಾಗರಾಜಾಚಾರ್ ಆಶ್ರೀತ, ರಂಗನಾಥಾಚಾರ್ ಸೊರಟೂರ್, ರವೀಂದ್ರ ಆಚಾರ್ ಆಶ್ರೀತ, ಕೃಷ್ಣ ಸೊರಟೂರ್, ನರಸಿಂಹ ಹುದ್ಧಾರ್ ಬದರಿ ಪುರೋಹಿತ್ ಸೇರಿದಂತೆ ಹಲವರು ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.