
ಎಲ್ಲಾ ಕ್ಷೇತ್ರಗಳಿಂದ ಆರ್‌ಪಿಐ ಸ್ಪರ್ಧೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,25- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ( ಆರ್ ಪಿ ಐ ) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಡಾ. ಎನ್.. ಮೂರ್ತಿ ಹೇಳಿದ್ದಾರೆ.
ಅವರು ಇಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಭಾರತ ರಾಜಾಂಗವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಡಾ. ಬಿಆರ್ ಅಂಬೇಡ್ಕರ್ ಅವರ ಆರ್‌ಬಿಐ ಪಕ್ಷ, ಚುನಾವಣೆಗಳಲ್ಲಿ ಗೆಲುವು ಸೋಲುಗಳಿಗೆ ಪ್ರಾಧಾನ್ಯತೆ ನೀಡದೆ, ಸಾಮಾನ್ಯ ಬಡ ಜನರ ಸಮಸ್ಯೆಗಳ ಪರಿಷ್ಕಾರಕ್ಕಾಗಿ ರಾಜಕೀಯ ಮಾಡುತ್ತಿರುವುದಾಗಿ ತಿಳಿಸಿದರು.
ಅವರು ರೂಪಿಸಿರುವ ಸಂವಿಧಾನ ಎಲ್ಲ ಜಾತಿಗಳ ಹಕ್ಕುಗಳನ್ನು ರಕ್ಷಣೆ ಮಾಡುತ್ತದೆ ಎಂದು ಸ್ಪಷ್ಟನೆ ಮಾಡಿದರು.
ಡಾಕ್ಟರ್ ಬಿಆರ್ ಅಂಬೇಡ್ಕರ್ ರಾಷ್ಟ್ರೀಯ ನಾಯಕ ಹೊರತು ಒಂದು ಸಮಾಜಕ್ಕೆ ನಾಯಕ ಅಲ್ಲ ಎಂದು ಹೇಳಿದರು.
ಸಂವಿಧಾನ ಆಸೆಗಳನ್ನು ಸಾಧನೆ ಮಾಡದಕ್ಕಾಗಿ ತಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ 60 ಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ, ಆದರೆ ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳ ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದರು.
ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವುದಾಗಿ, ಸ್ವಾತಂತ್ರ್ಯ ನಂತರ ಎಪ್ಪತ್ತು ವರ್ಷ ಕಳೆದರೂ ದೇಶವನ್ನು ಆಳಿದ ಕಾಂಗ್ರೆಸ್ ಮತ್ತು ಬಿಜೆಪಿ ಉತ್ತಮ ಪಾಲನೆ ನೀಡಲಿಲ್ಲ ಎಂದರು.
ಇವರ ಆಡಳಿತಗಳಲ್ಲಿ ಕೋಮು ಮತ್ತು ಜಾತಿವಾದ, ಸ್ವಜನ, ಪಕ್ಷಪಾತ, ಭ್ರಷ್ಟಾಚಾರ ಭಯೋತ್ಪಾದನೆಯಿಂದ ದೇಶ ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ, ಇದರ ಜೊತೆಗೆ ಸಾಮಾನ್ಯರ ತಲೆಗಳ ಮೇಲೆ ಸಾಲ ಉಳಿಸಿವೆ ಎಂದರು.
ಜಿ ಎಸ್ ಟಿ ತರಿಗೆ ಬೆಲೆ ಏರಿಕೆಯಿಂದ ನಾಗರಿಕರ ಜೀವನ ದುರಸ್ತಿಯಾಗಿದೆ. ಬಂಡವಾಳಿಗರು ಮತ್ತು ಭೂಮಾಲೀಕರ ಹಣ ದುಪ್ಪಟ್ಟಾಗಿ ಶ್ರೀಮಂತರು ಮತ್ತು ಬಡವರ ಅಂತರ ಹೆಚ್ಚಳ ಆಗಿದೆ ಎಂದರು.
ಆರ್ ಬಿ ಐ ( ಬಿ) ದೇಶ ಮತ್ತು ಸಂವಿಧಾನ ರಕ್ಷಣೆ ಜಾರಿಗಾಗಿ ಶ್ರಮಿಸುತ್ತಿದೆ. ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಮಕಾಲಿನ ರಾಷ್ಟ್ರ ನಾಯಕರಾದ ತತ್ವ ಸಿದ್ಧಾಂತ ಮತ್ತು ಆದರ್ಶಗಳನ್ನು ನಂಬಿ ಕೆ ಇಟ್ಟಿದೆ ಎಂದರು.
ಸಂಸತ್ ನಲ್ಲಿ ಈ ಎಲ್ಲಾ ಹೋರಾಟದ ಅಂಶಗಳ ಮೇಲೆ ಧ್ವನಿ ಮಾಡಲು ಜನತೆ ನಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದಾನಪ್ಪ, ವಿಭಾಗೀಯ ಕಾರ್ಯದರ್ಶಿ ಕೊಂಡಯ್ಯ ಎಲ್ಲಪ್ಪ ಈಶ್ವರ ನಾಗಲಿಂಗಪ್ಪ ಮೊದಲಾದವರು ಇದ್ದರು.