WhatsApp Image 2024-05-10 at 4.01.22 PM

ಎಲ್ಲಾ ಧರ್ಮಗಳು ಒಂದೇ ಎಂದು ಹೇಳಿದವರು ಬಸವಣ್ಣನವರು : ಶಾಸಕ ಗವಿಯಪ್ಪ

ಕರುನಾಡ ಬೆಳಗು ಸುದ್ದಿ

ವಿಜಯನಗರ, 10- ಶ್ರೀ ಜಗಜ್ಯೋತಿ ವಿಶ್ವ ಗುರು ಬಸವಣ್ಣನವರ 891ನೇ ಜಯಂತಿ ಅಂಗವಾಗಿ ನಗರದ ಬಸವಣ್ಣ ವೃತ್ತದಲ್ಲಿ ಪುತ್ತಳಿಗೆ ಶಾಸಕರಾದ ಹೆಚ್.ಆರ್. ಗವಿಯಪ್ಪನವರು ಭಕ್ತಿ ಪೂರ್ವಕವಾಗಿ ಪುತ್ತಳಿಗೆ ಮಾಲರ್ಪಣೆ ಮಾಡಿ ಗೌರವಸಲ್ಲಿಸಿ ಮಾತನಾಡಿದ ಅವರು ಬಸವಣ್ಣನವರು ಸಾಮಾಜಿಕ ನ್ಯಾಯ ಎಲ್ಲಧರ್ಮಗಳು ಒಂದೇ ಎಂದು ಹೇಳಿದವರು ಗುರು ಬಸವಣ್ಣನವರು. ಇಲ್ಲಿಯವರೆಗೂ ಅದೇ ರೀತಿ ನಡೆಯುತ್ತಿದೆ ಮುಂದೆಯೂ ನಡೆಯುತ್ತಿರುತ್ತದೆ ಎಲ್ಲಾ ಮಾನವರು ಒಂದೇ ಎಂದು ತೋರಿಸಿಕೊಟ್ಟವರು ಹಾಗಾಗಿ ಆ ಧರ್ಮ ಯಾವತ್ತಿಗೂ ಉಳಿಯುತ್ತದೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀ ಕೊಟ್ಟೂರು ಸ್ವಾಮಿ ಮಠದ ಪೂಜ್ಯಶ್ರೀ ಶ್ರೀ ಬಸವಲಿಂಗ ಸ್ವಾಮಿಯವರು ಮಾತನಾಡಿ ವಿಶ್ವಗುರು ಮಹಾ ಮಾನವತವಾದಿ ಬಸವೇಶ್ವರರ ಮತ್ತು ಮಹಾ ಸಾದ್ವಿ ಹೇಮರೆಡ್ಡಿ ಮಲ್ಲಮ್ಮರ 602ನೇ ಜಯಂತೋತ್ಸವವನ್ನು ಆಚರಿಸುತ್ತಿರುವುದು ಸಂತೋಷದಾಯಕವಾಗಿದೆ.

ಬಸವಣ್ಣನವರು ಏನೆಂದು ಜಗತ್ತಿಗೆ ಗೊತ್ತಿದೆ ಸಮಾನತೆ,ಸ್ವಾತಂತ್ರ್ಯ,ಬ್ರಾತೃತ್ವ ,ಸ್ತ್ರೀ ಸಮಾನತೆ ಜನೋಪಯೋಗಿಯಾಗಿರುವಂತಹ ಸರ್ವಕಾಲಿಕವಾಗಿ ಎಲ್ಲರೂ ಒಪ್ಪಿಕೊಳ್ಳುವಂತಹ ವಿಚಾರಧಾರೆಗಳನ್ನು ಮಹಾ ಮಾನವತವಾದಿ ಬಸವಣ್ಣನವರ ಜಗತ್ತಿಗೆ ಕೊಟ್ಟಿದ್ದಾರೆ. ಅವರ ವಾರಸುದಾರರೇ ನಾವು ಎನ್ನುವವಂತದ್ದೇ ನಮಗೆ ಬಹುದೊಡ್ಡ ಹೆಮ್ಮೆ. ಅವರು ಎಲ್ಲ ಕನ್ನಡಿಗರಿಗೆ ಸೇರಿರುವಂತಹವರು, ಬಸವಣ್ಣನವರು ಎಂದರೆ ಕೇವಲ ಲಿಂಗಾಯಿತರಲ್ಲ ಇಡೀ ಮನುಕುಲಕ್ಕೆ ಗುರುವಾಗಬಲ್ಲವರು ಎಂದು ಮನವರಿಕೆ ಮಾಡಿಕೊಳ್ಳಬೇಕು.

ಬಸವಣ್ಣನವರ ಆದರ್ಶದೊಳಗೆ ವಿಜಯನಗರ ಜಿಲ್ಲೆಯು ವಿಜಯ ಕಲ್ಯಾಣ ಎಂದು ಹೆಸರು ಪಡೆದುಕೊಳ್ಳಬೇಕಾದರೆ ಬಸವಣ್ಣನವರ ಆದರ್ಶಗಳು ಎಷ್ಟು ದೊಡ್ಡದಿವೆ ಎಂದು ನಾವು ತಿಳಿದುಕೊಳ್ಳಬೇಕಾದ ವಿಚಾರ. ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ 51 ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಂಡು ಬಂದಿದ್ದು ಇಂದು ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು . ಈ ಸಂದರ್ಭದಲ್ಲಿ ತ್ರೈಮಾಸಿಕ ‘ಹೇಮಕೂಟ ಪತ್ರಿಕೆ’ಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೊಟ್ಟೂರು ಸ್ವಾಮಿ ಮಠದ ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು ಹಾಗೂ ಸಮಾಜದ ಮುಖಂಡರಿಂದ ಶಾಸಕರಿಗೆ ಶಾಲು ಹಾಕಿ ಸನ್ಮಾನ ಮಾಡಿ ಬಸವೇಶ್ವರರ ಭಾವಚಿತ್ರವನ್ನು ಉಡುಗೊರೆಯಾಗಿ ಕೊಟ್ಟು ಗೌರವಿಸಿದರು. ಸಮಾಜದ ಹಲವಾರು ಮುಖಂಡರುಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!