
ಎಲ್ಲಾ ಸೇವೆಗಳಿಗಿಂತ ಸಮಾಜಸೇವೆ ದೊಡ್ಡದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,30- ಎಲ್ಲಾ ಸೇವೆಗಳ ಕನ್ನ ಸಮಾಜಸೇವೆ ಬಹಳ ದೊಡ್ಡದು ಎಂದು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು, ಸಂಗನಕಲ್ಲು ಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ಬಳ್ಳಾರಿಯ ಶ್ರೀಮೇಧ ಕಾಲೇಜಿನ ವಿದ್ಯಾರ್ಥಿಗಳು ಸಂಗನಕಲ್ಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎನ್ ಎಸ್ ಎಸ್ ಕ್ಯಾಂಪ್, ಕಾರ್ಯಕ್ರಮದಲ್ಲಿ, ಗ್ರಂಥಾಲಯದಲ್ಲಿ ನಡೆದ ಸಮಾವೇಶವಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಮಾಜ ಸೇವ ಮಾಡುವುದರಿಂದ ಭಗವಂತನೂ ಕೂಡ ಸಂತೋಷ ಪಡುತ್ತಾನೆ ಎಂದು, ಮತ್ತಷ್ಟು ಬೆಳೆಯುತ್ತದೆ ಎಂದರು.
ವಿದ್ಯಾವಂತರು ಎಷ್ಟೋ ಶ್ರಮ ಪಟ್ಟು ಗ್ರಾಮಗಳಲ್ಲಿ ಇಂಥ ಸಾಮಾಜಿಕ ಸೇವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷಕರ ಎಂದರು. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಚೆನ್ನಾಗಿ ಓದಿಕೊಂಡು ದೊಡ್ಡ ದೊಡ್ಡ ಉದ್ಯೋಗಗಳನ್ನು ಪಡೆದು ಬಡ ಜನಕ್ಕೆ ಸಹಾಯ ಮಾಡಲು ಸಾಮಾಜಿಕ ಸೇವೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭವಾಗಿ ಶ್ರೀಮೇಧ ಕಾಲೇಜಿನ, ಪ್ರಾಚಾರ್ಯರು ಡಾಕ್ಟರ್ ರವಿಕಿರಣ್, ಕಾಲೇಜಿನ ಹೆಚ್ಓಡಿ, ಜೆ ಸಿ ಮಂಜುನಾಥ್, ಅಸಿಸ್ಟೆಂಟ್ ಪ್ರೊಫೆಸರ್ ರಾಮದಾಸ್, ಸಂಗನಕಲ್ಲು ಗ್ರಾಮದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ, ಸಂಗನಕಲ್ಲು ಕೃಷ್ಣಪ್ಪನ ಜೊತೆಗೆ, ಗ್ರಾಮದ ಮುಖಂಡರಾದ ವೆಂಕಟೇಶಪ್ಪ ಹನುಮಂತ ಅವರನ್ನು ಸನ್ಮಾನಿಸಲಾಯಿತು.