
ಎಸ್ಸಿ ಎಸ್ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟದ ರಾಜ್ಯ ಮಟ್ಟದ ಬೃಹತ್ ಜಾಗೃತಿ ಸಮಾವೇಶ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,8- ಎಸ್ಸಿ ಎಸ್ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟ ಬೆಂಗಳೂರು ವತಿಯಿಂದ ಅಲೆಮಾರಿ ಸಮುದಾಯಗಳ ರಾಜ್ಯ ಮಟ್ಟದ ಬೃಹತ್ ಜಾಗೃತಿ ಸಮಾವೇಶ
ಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಜನರಲ್ಲಿ ಅರಿವು ಮೂಡಿಸಲು,ದೇಶ ಕಂಡಂತ ಆದ್ವಿತೀಯ ಚಳುವಳಿಗಾರ ಮತ್ತು ದಾರ್ಶನಿಕರ ತಾತ್ವಿಕ ಹಾಗೂ ಸೈದ್ದಾಂತಿಕ ವಿಚಾರಧಾರೆಗಳು ಹಾಗೂ ವಿವಿಧ ಪ್ರಗತಿಪರ ಕಾರ್ಯಕ್ರಮಗಳನ್ನು ಅನುಸರಿಸಿಕೊಂಡು ರಾಜ್ಯಾದ್ಯಂತ ಎಲ್ಲಾ ವರ್ಗದ ಅಲೆಮಾರಿ ಸಂಘಟನೆಗಳನ್ನು ಒಗ್ಗೂಡಿಸಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಸಂವಿಧಾನಾತ್ಮಕ ದಾರಿಯಲ್ಲಿ ಶ್ರಮಿಸಿ ಅಲೆಮಾರಿಗಳ ಐಕ್ಯತೆಗಾಗಿ ಕಾರ್ಯೋನ್ಮುಖರಾಗಿ ಸಮುದಾಯಗಳನ್ನು ಸಂಘಟಿಸಿ ಸರ್ವಾಂಗೀಣ ಅಭಿವೃದ್ಧಿ ಪಡಿಸಲು, ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡು ವಿವಿಧ ಜನಪರ ಯೋಜನೆಗಳನ್ನು ಕಾರ್ಯಗತಗೊಳಸಿ ಅಲೆಮಾರಿಗಳ ಅತ್ಮ ಗೌರವ ಸ್ವಾಭಿಮಾನ ಮತ್ತು ನೈತಿಕ ಬಲ ಹೆಚ್ಚಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಸ್ಥಾಪಿತವಾದ ಸಂಘಟನೆಯೇ ಎಸ್ಸಿ ಎಸ್ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟ ಬೆಂಗಳೂರು
ಕರ್ನಾಟಕ ರಾಜ್ಯದಲ್ಲಿರುವ 151- ಎಸ್ಸಿ/ಎಸ್ಟಿ ಜಾತಿಗಳ ಪೈಕಿ ಕೇವಲ ಹೊಟ್ಟೆಪಾಡಿಗಾಗಿ ಊರೂರು ಅಲೆಯುವ ಅಸಂಘಟಿತ ಹಾಗೂ ತುಳಿತಕ್ಕೊಳಪಟ್ಟಿರುವ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅವಕಾಶ ವಂಚಿತ ಅಲೆಮಾರಿ ಸಮುದಾಯಗಳು ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದು, ಇವರನ್ನು ಸದೃಢಗೊಳಿಸಿ ಸಮಾನತೆ ಸ್ಥಾಪನೆಗಾಗಿ ಸಾಮಾಜಿಕ ಹೋರಾಟಗಳನ್ನು ಏರ್ಪಡಿಸಿ, ಸಾಮಾಜಿಕ ಅನಿಷ್ಟಗಳವಿರುದ್ಧ ಜಾಗೃತಿ ಮೂಡಿಸಿ, ಸಮುದಾಯದ ಮಕ್ಕಳಿಗೆ ಶಿಕ್ಷಣ ದ ಬಗ್ಗೆ ಆಸಕ್ತಿ ಮೂಡಿಸುವುದೇ ಎಸ್ಸಿ /ಎಸ್ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟ ಪ್ರಮುಖ ಉದ್ದೇಶಕ್ಕಾಗಿ ಪ್ರಮುಖ ಬೇಡಿಕೆಗಳು ಈಡೆರಿಸಲು ಮತ್ತು ಸರ್ಕಾರಕ್ಕೆ ಅರಿವು ಮೂಡಿಸಲು ದಿನಾಂಕ 15-03-2024 ರಂದು ಬೆಳಗ್ಗೆ 11 ಗಂಟೆಗೆ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಅಲೆಮಾರಿ ಸಮುದಾಯಗಳ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಸಮಾವೇಶದಲ್ಲಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು, ಶ್ರೀ ಸತೀಶ್ ಎಲ್ ಜಾರಕಿಹೊಳಿರವರು ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರು, ಜಸ್ಟೀಸ್ ಹೆಚ್ ಎನ್ ನಾಗಮೋಹನ್ ದಾಸ್ ನಿವೃತ್ತ ನ್ಯಾಯಮೂರ್ತಿಗಳು, ಶ್ರೀ ಡಿಕೆ ಶಿವಕುಮಾರ್ ಮಾನ್ಯ ಉಪ ಮುಖ್ಯಮಂತ್ರಿಗಳು, ಮತ್ತು ಮಂತ್ರಿ ವರ್ಗದವರು ಮತ್ತು ರಾಜ್ಯ ಅಲೆಮಾರಿ ಸಮುದಾಯ ಮುಖಂಡರು ಭಾಗವಹಿಸಿವರು.
ಈ ಪತ್ರಿಕೆ ಗೋಷ್ಠಿಯಲ್ಲಿ ಶ್ರೀ ಆದರ್ಶ ಯಲ್ಲಪ್ಪ, ರಾಜ್ಯಧ್ಯಕ್ಷರು, ಶ್ರೀ ಬಿ ಹೆಚ್ ಮಂಜುನಾಥ ದಾಯತಕರ್, ಮಾರೆಪ್ಪ, ಡಾಕ್ಟರ್ ಕೆ ಹನುಮಂತಪ್ಪ,ರಮಣಪ್ಪ ಭಜಂತ್ರಿ, ಶಂಕರ್ ಬಂಡೆ ವೆಂಕಟೇಶ್, ಸುಬ್ಬಣ್ಣ, ರಂಗಸ್ವಾಮಿ, ಹನುಮಂತ ಇನ್ನೂ ಅಲೆಮಾರಿ ಸಮುದಾಯ ಮುಖಂಡರು ಭಾಗವಹಿಸಿದ್ದರು.