
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ, ಪೆನ್ನು ಮತ್ತು ಪ್ಯಾಡ್ ವಿತರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,9- ಬಳ್ಳಾರಿಯ ಉದ್ಯಮಿ ಜೋಳದರಾಶಿ ತಿಮ್ಮಪ್ಪ ಮತ್ತು ಅವರು ಕುಟುಂಬ ದಿವಂಗತ ಜೋಳದ ರಾಶಿ ಬಿ ಅರ ಸ್ವಾಮಿ ಅವರ ಸ್ಮರಣೆ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಪೆಟ್ರೋಲ್ ಬಂಕ್ ಮೂರನೇ ವಾರ್ಷಿಕ ಉತ್ಸವ ಅಂಗವಾಗಿ ಪೂರ್ವ ಪಶ್ಚಿಮ ವಲಯಗಳಿಗೆ ಸೇರಿದ ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈ ವರ್ಷ ಪರೀಕ್ಷೆಗೆ ಅನುಕೂಲವಾಗಲು ಪೆನ್ನು ಮತ್ತು ಪ್ಯಾಡ್ ಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯಮ ತಿಮ್ಮಪ್ಪ ಮಾತನಾಡುತ್ತಾ ತಾನು ಕೂಡ ಬಡಕುಟುಂಬದಲ್ಲಿ ಹಿಂದೆ ಬೆಳೆದಿದ್ದು, ಆ ಮನೆಗಳ ಕಷ್ಟ ನನಗೆ ಬಹಳ ಚೆನ್ನಾಗಿ ಗೊತ್ತು ಎಂದು, ಅದಕ್ಕಾಗಿ 6732 ಮಂದಿ ವಿದ್ಯಾರ್ಥಿಗಳಿಗೆ ಪೆನ್ನುಗಳು ಮತ್ತು ಪ್ಯಾಡ್ ಕೊಡಲು ನಿರ್ಧರಿಸಲಾಗಿದೆ ಎಂದು ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಂದಿನ ದಿನಗಳಲ್ಲಿ ಬಡವಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೇಕಾದ ನೆರವು ನೀಡಲು ಸಹ ನಮ್ಮ ಕುಟುಂಬ ಸಿದ್ಧವಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಿಗಿಂತ ಕಡಿಮೆ ಅಲ್ಲ ಅವರಲ್ಲೂ ಅಪಾರಜ್ಞಾನ ಮತ್ತು ಸಾಧನೆ ಮಾಡುವ ಶಕ್ತಿಯು ಇದೆ. ಶಿಕ್ಷಣಕ್ಕೆ ಒಂದಿಷ್ಟು ನೆರವು ನೀಡಲು ನಿಶ್ಚಯಿಸಿರುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ ಯರಿಸ್ವಾಮಿ, ಬಿ ಚಂದ್ರಶೇಖರ್, ಸೇಕ್ಷಾ ವಲಿ, ಸುಧಾಕರ್ ಮೊದಲದವರು ಇದ್ದರು.