
ಎಸ್ ಎ ನಿಂಗೋಜಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಟ್ರಸ್ಟ್ ನಿಂದ
ಶಾಸಕ ಬಸವರಾಜ ರಾಯರೆಡ್ಡಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೦೪- ಎಸ್ ಎ ನಿಂಗೋಜಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಟ್ರಸ್ಟ್ ವತಿಯಿಂದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸನ್ಮಾನಿಸಿ ಗೌರವಿಸದರು.
ಕೊಪ್ಪಳದಲ್ಲಿ ನೂತನವಾಗಿ ಎಸ್ಎ ನಿಂಗೋಜಿ ಆಯುರ್ವೇದಿಕ್ ಮಹಾವಿದ್ಯಾಲಯ ನಿಮಿತ್ಯ ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಲಯದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು ನಂತರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಎಸ್. ಎ ನಿಂಗೋಜಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ.ಕಾಲೇಜು ಟ್ರಸ್ಟ್ ಅಧ್ಯಕ್ಷರು ಮತ್ತು ವಕೀಲರಾದ ಎಸ್.ಎ.ನಿಂಗೋಜಿ .ಅಂಬೇಡ್ಕರ್ ಫೌಂಡೇಶನ್ ಅಧ್ಯಕ್ಷರು ಹಾಗೂ ವಕೀಲರು ಜಗದೀಶ್ ತೊಂಡಿಹಾಳ ಹಾಲುಮತ ಸಮಾಜದ ಯುವ ಮುಖಂಡ ಕಳಕಪ್ಪ ಆರ್ ಬೆಟಗೇರಿ ವಕೀಲರಾದ ಹುಚ್ಚೀರಪ್ಪ ನಡುಲಮನಿ ಮುಖಂಡರಾದ ಅಕ್ತರಶ್ರಸಾಬ್ ಖಾಜಿ ಸಿದ್ದಪ್ಪ ಕಟ್ಟಿಮನಿ ಹನುಮಂತಪ್ಪ ತೊಂಡಿಹಾಳ ಮಲ್ಲೇಶಪ್ಪ ಗಂಗಾವತಿ ಮತ್ತು ಇತರರು ಭಾಗವಹಿಸಿದ್ದರು