
ಏಪಿಎಂಸಿ ಮಾರುಕಟ್ಟೆಗೆ ಮೂಲಭೂತ ಸೌಲಭ್ಯ ಕಲ್ಪಿಸುವದು, ನಮ್ಮ ಆದ್ಯತೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30- ರಾಜ್ಯದಲ್ಲಿ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಬಳ್ಳಾರಿ ಎಪಿಎಂಸಿ ಮಾರುಕಟ್ಟೆ ಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನನ್ನ ಅಧಿಕಾರದ ಮೊದಲನೇ ಆದ್ಯತೆ ನೀಡುವುದಾಗಿ, ನೂತನವಾಗಿ ಅಧಿಕಾರವನ್ನು ವಹಿಸಿಕೊಂಡಿರುವ ಎಪಿಎಂಸಿ ಅಧ್ಯಕ್ಷ, ಕಟ್ಟೆಮನೆ ನಾಗೇಂದ್ರ ಮತ್ತು ಉಪಾಧ್ಯಕ್ಷರು ಬಿ. ಹುಲೆಪ್ಪ ಹೇಳಿದರು.
ತಮ್ಮ ಕಾರ್ಯಾಲಯದಲ್ಲಿ, ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಮುಖಂಡರು, ರಾಜ್ಯ ಸರ್ಕಾರ ಬಳ್ಳಾರಿ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಗಾಗಿ ನಮಗೆ ಅವಕಾಶ ಕೊಟ್ಟಿರುವುದು ಸಂತೋಷದ ವಿಷಯ, ಹಾಗಾಗಿ ನಾವು ಸದಸ್ಯರು ಮತ್ತು ಇಲ್ಲಿನ ವ್ಯಾಪಾರಸ್ಥರ ಸಹಾಯ ಸಹಕಾರದಿಂದ, ಮಾರುಕಟ್ಟೆಯ ಅಧಿಕಾರಿಗಳು ಸಿಬ್ಬಂದಿಯ ಜೊತೆಗೆ ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುವುದಾಗಿ ತಿಳಿಸಿದರು.
ಪ್ರಧಾನವಾಗಿ ಮಾರುಕಟ್ಟೆಯಲ್ಲಿ, ಓಪನ್ ಡ್ರೈವಿಂಗ್ ಕಾಲ್ವೆಗಳು, ರಸ್ತೆಗಳು ಹೆದೆ ಗೆಟ್ಟಿರುವದಾಗಿ, ಡ್ರೈನೇಜ್ ನೀರು ರಸ್ತೆಗಳ ಮಾಲೆ ಹರಿಯುವ ದೃಷ್ಟಿತೆ ಇದೆ ಎಂದರು, ಇನ್ನ ಇಲ್ಲಿ ನ ವ್ಯಾಪಾರಸ್ಥರಿಗೆ ಸೊಳ್ಳೆಗಳ ಕಾಟ, ರಾತ್ರಿ ಬೀದಿ ಲೈಟ್ ಗಳು ಇಲ್ಲದೆ ಪಡುವ ಅವಸ್ಥೆಗಳನ್ನು ಗಮನಿಸಿರುವದಾಗಿ ಮೊಟ್ಟ ಮೊದಲನೇ ಆದ್ಯತೆಯ ಕೆಳಗೆ ಮಾರುಕಟ್ಟೆಯಲ್ಲಿರುವ ಡ್ರೈನೇಜೀ ರಿಪೇರಿ ಕಾಮಗಾರಿ ಕೈಗೆತ್ತಿಕೊಳ್ಳುವದಾಗಿ ತಿಳಿಸಿದರು.
ಈಗಾಗಲೇ ಕಾಲುಗಳಲ್ಲಿ ತುಂಬಿರುವ ಮಣ್ಣನ್ನು ತೆಗೆಯುವುದರ ಜೊತೆಗೆ ಜೇಸಿಬಿ ಗಳು ಟ್ರ್ಯಾಕ್ಟರ್ ಗಳನ್ನು ಬಳಸಿ ಪ್ರಾಂತ ಅನ್ನು ಸ್ವಚ್ಛಗೊಳಿಸುತ್ತಿರುವದಾಗಿ ತಿಳಿಸಿದರು. ನಂತರ ಕೆಲಸವನ್ನು ಸರ್ವಾರ್ ಮತದಿಂದ ಟೆಂಡರ್ ಗಳನ್ನು ಕರೆದು ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ರಾಜ್ಯದ ಗಡಿ ಭಾಗವಾದ ಆಂಧ್ರ, ನಾನಾ ಭಾಗಗಳಿಂದ ರೈತರು ತಮ್ಮ ಸರಕು ಮಾರಲು ಇಲ್ಲಿಗೆ ಬರುತ್ತಿರುವುದಾಗಿ ಅವರಿಗೆ ಬೇಕಾಗುವ ಸೌಲಭ್ಯಗಳು ಕಲ್ಪಿಸಲು, ಅದರ ಜೊತೆಗೆ ವ್ಯಾಪಾರಸ್ಥರ ಪರಿಹರಿಸಲು ಶ್ರಮಿಸುವುದಾಗಿ ತಿಳಿಸಿದರು. ಪ್ರತಿ ವರ್ಷ ಮೂರು ಕೋಟಿಗೂ ಹೆಚ್ಚು ಆದಾಯ ತರುವ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಗೆ, ಅಧಿಕಾರ ಸಿಬ್ಬಂದಿಯ ಸಮಸ್ಯೆಗಳ ಪರಿಷ್ಕಾರಕ್ಕೆ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾರುಕಟ್ಟೆಯ ಸದಸ್ಯರು ವಿಶ್ವನಾಥ್, ಮತ್ತು ಮಾರುಕಟ್ಟೆಯ ಸಹ ಕಾರ್ಯದರ್ಶಿಗಳು, ಬಸವರಾಜ್, ಶರಣಬಸವ, ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.