
ರಾಯಚೂರ ; ಏಮ್ಸಗೆ ಆಗ್ರಹಿಸಿ 16 ರಂದು ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕಲ್ಯಾಣ ಕರ್ನಾಟಕದ ರಾಯಚೂರನಲ್ಲಿ ಏಮ್ಸಗೆ ಆಗ್ರಹಿಸಿ ಇದೇ 16 ರಂದು ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಏಮ್ಸ ಹೊರಾಟ ಸಮಿತಿ ಸದಸ್ಯ ಅಶೋಕ ಕುಮಾರ ಜೈನ್ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಯಚೂರನಲ್ಲಿ ಕಳೆದ 726 ದಿನಗಳಿಂದ ಏಮ್ಸಗಾಗಿ ಹೋರಾಟ ಮಾಡುತ್ತಿದ್ದು ಇದೇ 16 ರಂದು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸಂಸದರು ಲೋಕಸಭೆಯ ಒಳಗೆ ಹೋರಾಟ ಮಾಡುವ ಭರವಸೆ ನೀಡಿದ್ದು , ದೇಹಲ್ಲಿಯ ಜಂತರ್ ಮಂತರ್ ನಲ್ಲಿ ಅಗಸ್ಟ 6 ರಿಂದ 12 ರ ವರೆಗೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರಾವೇ ಮುಖಂಡ ರಾಜಶೇಕರ ಶ್ಯಾಗೋಟಿ , ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಧ್ಯಕ್ಷ ರಮೇಶ ತುಪ್ಪದ ಇತರರು ಇದ್ದರು.