
ಮಂಗಳೂರು ಐಟಿಐ : ಪ್ರವೇಶಕ್ಕೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಮಂಗಳೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐ.ಎಂ.ಸಿ ಕೋಟಾದಡಿಯಲ್ಲಿ 2024-25ನೇ ಸಾಲಿಗಾಗಿ 2 ವರ್ಷ ಅವಧಿಯ ಎನ್.ಸಿ.ವಿ.ಟಿ ಸಂಯೋಜನೆ ಹೊಂದಿದ ಎಲೆಕ್ಟಿçಷಿಯನ್ ಹಾಗೂ ಫಿಟ್ಟರ್ ವೃತ್ತಿಗಳಲ್ಲಿ ತಲಾ 4 ಸ್ಥಾನಗಳಿಗೆ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.
ಪ್ರವೇಶ ಪ್ರಕ್ರಿಯೆಯು ಜೂನ್ 27 ರಿಂದ ಪ್ರಾರಂಭವಾಗಲಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆ ನಿಯಮದ ಮೇರೆಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಪ್ರವೇಶ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಸ್ಥೆಗೆ ಭೇಟಿ ನೀಡಬಹುದಾಗಿದೆ ಎಂದು ಸಂಸ್ಥೆಯ ತರಬೇತಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.