
ಒಂದೇ ಕುಟುಂಬದ ಮೂವರು ಸಾವು
ಹೊಸಲಿಂಗಾಪೂರದಲ್ಲಿ ಸ್ಮಶಾನ ಮೌನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28 – ತಾಲೂಕಿನ ಹೊಸಲಿಂಗಾಪುರ ಗ್ರಾಮದ ಯಾದವ್ ಕುಟುಂಬದಲ್ಲಿ ಮೂರು ಜನರ ನಿಗೂಢವಾಗಿ ಮೃತ ಪಟ್ಟ ದಾರುಣ ಘಟನೆ ಜರುಗಿದ.
ಮೃತರು ರಾಜೇಶ್ವರಿ( 50), ವಸಂತಾ (32) ಸಾಯಿಧರ್ಮ ತೇಜ(5) ನಿಗೂಢವಾಗಿ ಮೃತಪಟ್ಟಿದ್ದಾರೆ.
ಘಟನೆ ಕುರಿತು ಪೊಲೀಸರು ತನಿಕೆ ನಡೆಸುತ್ತಿದ್ದು ಸಾವಿಗೆ ಕಾರಣ ಹುಡುಕುತ್ತಿದ್ದು, ಏಕ ಕಾಲಕ್ಕೆ ತಾಯಿ, ಮಗಳು, ಮೊಮ್ಮಗ ಮೃತ ಪಟ್ಟಿರುವುದಾಗಿ ತುಳಿದು ಬಂದಿದೆ.
ರಾಜೇಶ್ವರಿ ಹಾಗೂ ವಸಂತಾ ತಾಯಿ-ಮಗಳಾಗಿದ್ದು,
ವಸಂತಾಳ ಮಗ ಸಾಯಿಧರ್ಮ ಕೂಡ ಅಸುನೀಗಿದ್ದಾನೆ ಎಂದು ತಿಳಿದು ಬಂದಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜೇಶ್ವರಿ, ಆಕೆಯ ಮಗಳು ವಸಂತಾ ಹಾಗೂ ಸಾಯಿಧರ್ಮ ತೇಜ ಅವರು ಹೊಸ ಲಿಂಗಾಪುರದ ಆಶ್ರಯ ಕಾಲೋನಿಯ ಮೂರನೇ ವಾರ್ಡಿನಲ್ಲಿ ವಾಸವಾಗಿದ್ದರು.
ಇವರು ಅನುಮಾನಸ್ಪದ ಸಾವು ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.ಪೋಲಿಸರು ತನಿಖೆ ನಡೆಸುತ್ತಿದ್ದಾರೆ.