
ಮಕ್ಕಳಲ್ಲಿ ಮೊಬೈಲ್ ಚಟಕ್ಕೆ ಸ್ಫೂರ್ತಿಯ ಮದ್ದು
ಓ ನನ್ನ ಚೇತನ ಚಲನಚಿತ್ರ
ಡಿ.15 ಬಿಡುಗಡೆ; ಮಲ್ಲನಗೌಡರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 13- ಕೊಪ್ಪಳದ ಬಿಸರಳ್ಳಿಯ ಪ್ರೀತಮ್ಮ ಕೊಪ್ಪದ. ಪ್ರತಿಕ್ ಕೊಪ್ಪದ್ ಪೂರ್ಣ ಪ್ರಮಾಣದ ನಾಯಕರಾಗಿ ನಟೆಸಿರುವ ಓ ನನ್ನ ಚೇತನ ಚಲನಚಿತ್ರ ಇದೇ ಡಿ. 15 ರಂದು ಕೊಪ್ಪಳದ ಶ್ರೀಲಕ್ಷ್ಮಿ ಚಿತ್ರ ಮಂದಿರ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಗೊಳ್ಳಲಿದೆ ಎಂದು ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಚಿತ್ರದಲ್ಲಿ ಪ್ರತಿಭೆ ಮೊಬೈಲ್ ನೋಡೋ ಮಕ್ಕಳು… ಮಕ್ಕಳ ಮೊಬೈಲ್ ಹಾವಳಿಗೆ ತತ್ತರಿಸೋ ಪೋಷಕರು ನೋಡಲೇ ಬೇಕಾದಂತಹ ಸಿನಿಮಾ ಓ ನನ್ನ ಚೇತನ ದೊಡ್ಡ ತಾರಾಬಳಗವಿಲ್ಲ. ಆದ್ರೆ ದೊಡ್ಡ ತಂತ್ರಜ್ಞರೇ ಕೈ ಜೋಡಿಸಿ ಮಾಡಿರೋ ಅಪ್ಪಟ ರಂಜನೆಯ ಮತ್ತು ಸಂದೇಶವಿರೋ ಸಿನಿಮಾ.
ಗುಣಮಟ್ಟದಲ್ಲಿ ದೊಡ್ಡ ಸಿನಿಮಾ : ಸೂಕ್ಷ್ಮಾಕಥೆಯ ಜೊತೆ ಪ್ರಸ್ತುತತೆಗೆ ತುಂಬಾ ಹತ್ತಿರೋವಿರೋ ವಿಷ್ಯ ಈ ಚಿತ್ರದ ಜೀವಾಳ. ಹೆಸರೇ ಹೇಳುವಂತೆ.. ಓ ನನ್ನ ಚೇತನ ಇಂದಿನ ಪೀಳಿಗೆಯನ್ನ ಎಚ್ಚರಿಸೋ ಸಿನಿಮಾ ಇದಾಗಿದೆ.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನ ಪಡೆದುಕೊಂಡಿದ್ದ ಓ ನನ್ನ ಚೇತನವನ್ನ, ಇದೇ ತಿಂಗಳು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗ್ತಿದೆ. ಡಾ.ಬಿ.ಜಿ ಮಲ್ಲಿಕಾರ್ಜುನ ಸ್ವಾಮಿ ಈ ಚಿತ್ರವನ್ನ ಮೂನಿಪ್ಲಿಕ್ಸ್ ಸ್ಟುಡಿಯೋಸ್ ನ ಕೆ.ಎ ಸುರೇಶ್ ಅವ್ರ ಮೂಲಕ ರಿಲೀಸ್ ಮಾಡ್ತಿದ್ದಾರೆ.
ಓ ನನ್ನ ಚೇತನ ಅಪೂರ್ವ ಖ್ಯಾತಿಯ ನಟಿ ಆಶಾದೇವಿ (ಅಪೂರ್ವ) ನಿರ್ದೇಶನದ ಚೊಚ್ಚಲ ಚಿತ್ರ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್,ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ.
ಓ ನನ್ನ ಚೇತನ ಚಿತ್ರದ ನೀ ಏನೇ ಹೇಳಹ ಅಂಜು ಹಾಡು ರಿಲೀಸ್ ಆಗಿದ್ದು, ಈ ಹಾಡಿಗೆ ಡಿಜಿಟಲ್ ವೇದಿಕೆಯಲ್ಲಿ ಓಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದ್ರ ಜೊತೆಗೆ ಚಿತ್ರದ ಟೈಟಲ್ ಹಾಡು ಕೂಡ ರಿಲೀಸ್ ಆಗಿದ್ದು, ಮ್ಯೂಸಿಕಲಿ ಈ ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಅಪ್ಪಟ ಹಳ್ಳಿ ಹಿನ್ನೆಲೆಯಲ್ಲಿ ಚಿತ್ರಿಸಿರೋ ಓ ನನ್ನ ಚೇತನ ನಾಲ್ಕಾರು ಆಯಾಮಗಳಲ್ಲಿ ಗಮನ ಸೆಳೆಯುತ್ತಿದೆ.
ಎಸ್ ಅಂಡ್ ಎಸ್ ಬ್ಯಾನರ್ ನಡಿಯಲ್ಲಿ ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್,ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಂದೇಶ ಸಾರೋದ್ರ ಜೊತೆಗೆ ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಆಗಿ ಬರ್ತಿರೋ ಓ ನನ್ನ ಚೇತನ ಯಾವುದೇ ಕಮರ್ಷಿಯಲ್ ಎಂಟ್ರಟೈನ್ಮೆಂಟ್ಗೆ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿದ್ದು ಇದೇ ತಿಂಗಳು ರಾಜ್ಯದಾದ್ಯಂತ 15 ರಂದು ರಿಲೀಸ್ ಆಗ್ತಿದ್ದು, ಟ್ರೈಲರ್ ನ ಬಿಡುಗಡೆ ಯಾಗಿ ರಾಜ್ಯದಲ್ಲಿ ಸದ್ದು ಮಾಡಿದೆ.
ಚಲನಚಿತ್ರವನ್ನು ಜಿಲ್ಲೆಯ ಜನತೆ ಚಲನಚಿತ್ರ ವಿಕ್ಷೀಸಿ ಬೆಂಬಲಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಸವರಾಜ ಕೊಪ್ಪಳ .ಮಂಜುನಾಥ ಕೊಪ್ಪದ. ಮಂಜುನಾಥ ಅಂಗಡಿ. ಗ್ರಾ.ಪಂ ಅಧ್ಯಕ್ಷ ರವೀಂದ್ರ ಪಾಟೀಲ್ ಬಿಸರಳ್ಳಿ ಇತರರು ಇದ್ದರು.