
ಕನಕಗಿರಿ ಉತ್ಸವಕ್ಕೆ ಮೆರುಗು ತಂದ ಬಣ್ಣ-ಬಣ್ಣದ ರಂಗೋಲಿ ಚಿತ್ತಾರಗಳು
ಕರುನಾಡ ಬೆಳಗು ಸುದ್ದಿ
ಕೊಪ್ಪಳ,1- ಕನಕಗಿರಿ ಉತ್ಸವದ ಪ್ರಯುಕ್ತ ಕನಕಗಿರಿ ಎ.ಪಿ.ಎಂ.ಸಿ ಸಿಸಿ ರಸ್ತೆಯ ಆವರಣದಲ್ಲಿ ಮಾರ್ಚ್ 1ರಂದು ನಡೆದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣ- ಬಣ್ಣದ ರಂಗೋಲಿ ಚಿತ್ತಾರಗಳು ಕನಕಗಿರಿ ಉತ್ಸವಕ್ಕೆ ಮೆರುಗು ತಂದವು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನಕಗಿರಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಸುಮಾರು 40 ಜನ ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು.
ವಿವಿಧ ಬಣ್ಣಗಳ ಬಗೆ-ಬಗೆಯ ರಂಗೋಲಿ ಚಿತ್ತಾರಗಳು ಹಬ್ಬದ ವಾತಾವರಣವನ್ನು ಸೃಷ್ಠಿಸಿದ್ದು, ವಿಶೇಷವಾಗಿತ್ತು.
ಫಲಿತಾಂಶ : ರಂಗೋಲಿ ಸ್ಪರ್ಧೆಯಲ್ಲಿ ಗಿರಿಜಮ್ಮ ವಿರುಪಾಕ್ಷಿ ಪ್ರಥಮ ಸ್ಥಾನ ಪಡೆದುಕೊಂಡರು. ಮಂಜುಳಾ ಶಿವಪ್ಪ ಹೆಳವರ್ ದ್ವಿತೀಯ ಸ್ಥಾನ, ಜಯಲಕ್ಷ್ಮಿ ಪಾಮಣ್ಣ ಅರಳಿಗನೂರ ತೃತೀಯ ಸ್ಥಾನ ಪಡೆದರೆ, ಬಸಮ್ಮ ಶೇಖರಯ್ಯಸ್ವಾಮಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.