
ಕನಕಗಿರಿ ಪಟ್ಟಣ ಪಂಚಾಯತಿ : ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಕನಕಗಿರಿ ಪಟ್ಟಣ ಪಂಚಾಯತಿ ವತಿಯಿಂದ ನಗರ ಬಡತನ ನಿರ್ಮೂಲನಾ ಕಾರ್ಯಕ್ರಮಗಳಾದ ಶೇ. 24.10 ರಡಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಜನಾಂಗದರಿಗೆ ಹಾಗೂ ಶೇ. 7.25 ರಡಿಯಲ್ಲಿ ನಗರದ ಇತರೆ ಬಡಜನರಿಗಾಗಿ ವಿವಿಧ ಸೌಲಭ್ಯಗಳಿಗಾಗಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಸನ್ 2023-24ನೇ ಸಾಲಿಗೆ ಸಂಬಂಧಿಸಿದ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಅರ್ಹ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಹಾಗೂ ನಗರದ ಇತರೆ ಬಡ ಜನಾಂಗದವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ.ಪಂ. ಕಲ್ಯಾಣ ಕಾರ್ಯಕ್ರಮಗಳಡಿ ಕನಕಗಿರಿ ಪಟ್ಟಣದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮತ್ತು ಇತರೆ ಬಡ ಜನಾಂಗದವರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕಕ್ಕೆ ಶುಲ್ಕವನ್ನು ಭರಿಸುವುದು ಮತ್ತು ಕನಕಗಿರಿ ಪಟ್ಟಣದ ಪರಿಶಿಷ್ಠ ಜಾತಿ ಜನಾಂಗದ ಎಲ್.ಎಲ್.ಬಿ. ಪದವಿ ಹೊಂದಿದ ವೃತ್ತಿ ನಿರತ ವಕೀಲರುಗಳಿಗೆ ಪುಸ್ತಕ ಖರೀದಿಸಲು ಸಹಾಯಧನ ನೀಡಲಾಗುವುದು.
ಅರ್ಹ ಫಲಾನುಭವಿಗಳು ಕನಕಗಿರಿ ಪಟ್ಟಣದ ನಿವಾಸಿಯಾಗಿರಬೇಕು ಮತ್ತು ಪಡಿತರ ಚೀಟಿ, ಗುರುತಿನ ಚೀಟಿ, ವಾಸಸ್ಥಳ ಹಾಗೂ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 2024-25ನೇ ಸಾಲಿನ ಮನೆಯ ಕಂದಾಯ ರಶೀದಿ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಇವುಗಳೊಂದಿಗೆ ವೃತ್ತಿ ನಿರತ ವಕೀಲರು ಪುಸ್ತಕ ಖರೀದಿಗಾಗಿ ಕಾನೂನು ಪದವಿ ಹೊಂದಿದ್ದು, ವೃತ್ತಿ ನಿರತರಾದ ಬಗ್ಗೆ ವಕೀಲರ ಅಸೋಸಿಯೇಷನ್‌ನಿಂದ ದೃಢೀಕೃತ ಪ್ರತಿ ಹಾಗೂ ಎಲ್.ಎಲ್.ಬಿ. ಪದವಿ ವ್ಯಾಸಂಗ ಮಾಡಿದ ಅಂತಿಮ ವರ್ಷದ ಅಂಕಪಟ್ಟಿಯನ್ನು ಸಲ್ಲಿಸಬೇಕು.
ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಜೂನ್ 29 ಕೊನೆಯ ದಿನವಾಗಿದೆ. ಅಪೂರ್ಣ ದಾಖಲಾತಿ ಸಲ್ಲಿಸಿದ ಹಾಗೂ ನಿಗದಿತ ಅವಧಿ ನಂತರ ಬಂದ ಅರ್ಜಿಗಳನ್ನು ಯಾವುದೇ ರೀತಿಯ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಾತ್ ಕಾರ್ಯಾಲಯ, ಕನಕಗಿರಿ ರವರನ್ನು ಕಛೇರಿಯ ವೇಳೆಯಲ್ಲಿ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು ಎಂದು ಪ.ಪಂ. ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.