
ಕನ್ನಡವನ್ನು ಮರೆತರೆ ಹೆತ್ತ ತಾಯಿಯನ್ನು ಮರೆತಂತೆ
ಪದವೀಧರ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ. 01- ನಗರದ ಸರದಾರಗಲ್ಲಿ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು
ಎಂಬ ನುಡಿಯಂತೆ ನಾವೆಲ್ಲರೂ ಮೊದಲನೆಯದಾಗಿ ಕನ್ನಡವನ್ನು ಕಲಿಯಬೇಕು ಹಾಗೂ ಕನ್ನಡವನ್ನು ಬೆಳೆಸಬೇಕು, *೧೮೯೦ ರಲ್ಲಿ ಆರ್,ಎಚ್, ದೇಶಪಾಂಡೆ ರವರು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸುವುದರ ಮೂಲಕ ಕನ್ನಡ ನಾಡ ನುಡಿ ರಕ್ಷಣೆಗೆ ಮುಂದಾದರು.
೧೯೪೭ ರಿಂದ ೧೯೫೨ ವರೆಗಿನ ಕಾಲದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಕೆ ಸಿ ರೆಡ್ಡಿ ರವರು ಆಗಿದ್ದರು ನಂತರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಲ್ಲಿ ೧೯೫೬ ನವಂಬರ್ ೧ ರಂದು ಮೈಸೂರ ರಾಜ್ಯ ಉದಯವಾಯಿತು. ಎಸ್ ನಿಜಲಿಂಗಪ್ಪ ರವರು ಮುಖ್ಯಮಂತ್ರಿಗಳಾದರುನಂತರ ೧೯೭೩ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ಮರುಣಮಕರಣ ಮಾಡಲಾಯಿತು,
ಡಿ ದೇವರಾಜ ಅರಸು ರವರು ಮುಖ್ಯಮಂತ್ರಿಗಳಾದರು ಕನ್ನಡ ನಾಡ ನುಡಿ ರಕ್ಷಣೆಗಾಗಿ ಹಲವಾರು ಮಹಾನ್ ವ್ಯಕ್ತಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ನಾವು ನಮ್ಮ ವ್ಯವಹಾರಕ್ಕಾಗಿ ಹಾಗೂ ಜ್ಞಾನಕ್ಕಾಗಿ ಹಲವಾರು ಭಾಷೆಗಳನ್ನು ಕಲಿಯಬೇಕು ಆದರೆ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುತ್ತಾ ಕನ್ನಡವನ್ನು ಹಾಗೂ ಕರ್ನಾಟಕವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಕನ್ನಡ ಭಾಷೆ ಅತಿ ಪುರಾತನ ಹಾಗೂ ಪ್ರಾಚೀನ ಭಾಷೆಯಾಗಿದೆ ಜೊತೆಗೆ ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವುದು ವಿಶೇಷ ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಎಂದು ಹೇಳಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ್ ಬಿ ರವರು ಕನ್ನಡ ರಾಜ್ಯೋತ್ಸವ ಕುರಿತು ಮಾತನಾಡಿದರು.ಶಿಕ್ಷಕರಾದ ನರಸಿಂಗರಾವ್ ಶಿಕ್ಷಕಿಯರಾದ ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ರತ್ನಮ್ಮ, ಕುಮಾರಿ ಸಮೀರ ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಸಹನ ಹಾಗೂ ಸಾನಿಯಾ ಪ್ರಾರ್ಥನೆ ಗೀತೆಯನ್ನು ಹಾಡಿದರು ಬಸವರಾಜ ಹೊಸಮನಿ ಸ್ವಾಗತಿಸಿದರು, ಮಾರುತಿ ಮ್ಯಾಗಳಮನಿ ನಿರೂಪಿಸಿದರು, ಕುಮಾರಿ ದೀಪ ವಂದಿಸಿದರು.