
ಕನ್ನಡ ಜ್ಯೋತಿ ರಥ ಯಾತ್ರೆಯಲ್ಲಿ ಕಾಂಗ್ರೆಸ್ ಪ್ರಚಾರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 02- ಕನ್ನಡ ಜ್ಯೋತಿ ರಥ ಯಾತ್ರೆಯಲ್ಲಿ ಕಾಂಗ್ರೆಸ ಪಕ್ಷದ ಪ್ರಚಾರ ಮಾಡಿಕೊಂಡಿದಿಯಾ.
ಹೌದು ಹೀಗೊಂದು ಪ್ರಶ್ನೆ ಸಾರ್ವಜನಿಲರಲ್ಲಿ ಮೂಡಿದೆ .
ಕನ್ನಡ ಜೋತಿ ರಥ ಯಾತ್ರೆಯಲ್ಲಿ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಯಾವೊಂದು ಸಂದೇಶ, ಮಾಹಿತಿ, ಚಿತ್ರ, ವಿಡಿಯೋ ಕಾಣಿಸಲೆ ಇಲ್ಲಾ. ಬದಲಿಗೆ ರಥದಲ್ಲಿನ ಎಲ್ ಇಡಿ ಪರದೆಯಲ್ಲಿ ಸರ್ಕಾರದ ಬಜೆಟ್ ಅಂಶಗಳು, ಗ್ಯಾರಂಟಿ ಯೋಜನೆಗಳು ರಾರಾಜಿಸಿದ್ದು ಕಂಡುಬಂತು.
ಸ್ವಾಗತ ; ರಾಜ್ಯ ಸುವರ್ಣ ಕರ್ನಾಟಕ ಸಂಭ್ರಮ ಅಂಗವಾಗಿ ಹಮ್ಮಿಕೊಂಡ ಕನ್ನಡ ಜ್ಯೋತಿ ಯಾತ್ರೆಗೆ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಗ್ರಾಮ ಹಾಗೂ ಸುತ್ತಮುತ್ತಲಿನ ನೂರಾರು ಮಹಿಳೆಯರು ಆರತಿ ಹಿಡಿದು, ಕುಂಭದೊಂದಿಗೆ ನಾಡ ದೇವತೆ ರಥ ಬರ ಮಾಡಿಕೊಂಡರು. ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಕನ್ನಡಾಂಬೆಗೆ ಜಯಘೋಷ ಕೂಗುವ ಮೂಲಕ ರಥಕ್ಕೆ ಚಾಲನೆ ದೊರೆಯಿತು. ಯುವಕ, ಯುವತಿಯರು ಕನ್ನಡ ಹಾಡುಗಳಿಗೆ ಕೋಲಾಟದೊಂದಿಗೆ ಹೆಜ್ಜೆ ಹಾಕಿ ಮೆರಗು ಹೆಚ್ಚಿಸಿದರು. ಶಾಲಾ ಮಕ್ಕಳು ಕನ್ನಡ ಬಾವುಟ ಹಿಡಿದು ಸಾಗುವ ಮೂಲಕ ಕನ್ನಡ ಅಭಿಮಾನ ಮೆರೆದರು.