IMG-20231025-WA0023
  1. ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ

ಕರುನಡ ಬೆಳಗು ಸುದ್ದಿ
ಕುಕನೂರ. 25- ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1ರಂದು ತಹಸಿಲ್ದಾರ್ ಕಚೇರಿಯಲ್ಲಿ ಆಚರಿಸಲಾಗುವುದು ಎಂದು ಗ್ರೇಡ್ – 2 ತಹಶೀಲ್ದಾರ ಮುರಳಿಧರ ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ತಹಸಿಲ್ದಾರ್ ಕಚೇರಿಯಲ್ಲಿ ನವಂಬರ್ 1ನೇ ತಾರೀಖು ಬುಧವಾರ ಆಚರಿಸಲಾಗುವುದು.
ತದ ನಂತರ ಕೆ ಎಸ್ ಆರ್ ಟಿ ಸಿ ಬಸ್ ಮೂಲಕ ಕನ್ನಡ ರಾಜ್ಯೋತ್ಸವದ ಘೋಷಣೆ ಕೂಗುತ್ತಾ ತಹಸಿಲ್ದಾರ್ ಕಚೇರಿಯಿಂದ ವೀರಭದ್ರಪ್ಪ ಸರ್ಕಲ್, ಅಂಬೇಡ್ಕರ್ ಸರ್ಕಲ್, ತೇರಿನ ಗಡ್ಡೆ ಮೂಲಕ ತಹಸೀಲ್ದಾರ್ ಕಚೇರಿಗೆ ಬರುವುದು . ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಗುವುದು ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ ಮಾಡಲಾಗುವುದು ಎಂದು ಮುರಳಿಧರ್ ಕುಲಕರ್ಣಿ ಗ್ರೇಡ್ -2 ತಹಶೀಲ್ದಾರ್ ಅವರು ಹೇಳಿದರು.
ತದನಂತರ ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಶ್ರೀಕಾಂತ್ ಚಲವಾದಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಪೂರ್ವ ಬಾವಿ ಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬರಬೇಕಿತ್ತು ಆದರೆ ಕೆಲವು ಇಲಾಖೆ ಅಧಿಕಾರಿಗಳು ಬಂದಿರುವುದು ನೋಡಿದರೆ ನಮಗೆ ಬೇಸರವಾಗಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಈ ಒಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಕಚೇರಿಯ ಸಿರಿಸ್ತೇದಾರ್ ಮುಸ್ತಾಫ್, ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಕೃಷ್ಣ ಗಾವರಾಳ, ಶ್ರೀಕಾಂತ್ ಚಲವಾದಿ, ಶಿವುಕುಮಾರ ಆದಿ, ಜೆಸ್ಕಾಂ ಇಲಾಖೆಯ ಶರಣಪ್ಪ, ಕೆ ಎಸ್ ಆರ್ ಟಿ ಸಿ ಇಲಾಖೆಯ ಸುನಿಲ್ ಕುಮಾರ ಹೈದ್ರಿ, ಶಿಕ್ಷಣ ಇಲಾಖೆ ನಿಂಗಪ್ಪ ಹೈದ್ರಿ, ನಾನಾ ಇಲಾಖೆಯ ಅಧಿಕಾರಿಗಳು ತಹಶೀಲ್ದಾರ್ ಸಿಬ್ಬಂದಿ ವರ್ಗ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!