30e9b6a5-7af1-4f68-b517-c0323e67f92f

ಕನ್ನಡ ಸಾಹಿತ್ಯ ಪರಿಷತ್ತ್‌

ದತ್ತಿ ಪ್ರಶಸ್ತಿಗೆ ಯಲ್ಲಪ್ಪ ಹರನಾಳಗಿ, ಜಹಾನ್ ಆರಾ ಕೋಳೂರು ಕೃತಿ ಆಯ್ಕೆ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೨- ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ದತ್ತಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ.
ಈ ವರ್ಷದ ಡಾ. ಮಹಾಂತೇಶ ಮಲ್ಲನಗೌಡರ ಅವರು ಸ್ಥಾಪಿಸಿರುವ ದಿ. ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಯಲ್ಲಪ್ಪ ಹರ್ನಾಳಗಿ ಅವರ ಕವನ ಸಂಕಲನ ‘ಬಿಸಿಲು ಬಾಯಾರಿದಾಗ’ ಹಾಗೂ ದಿ. ಅಂದಮ್ಮ ಮಲ್ಲನಗೌಡರ ಮಹಿಳಾ ಬರಹಗಾರರಿಗೆ ಮೀಸಲಿರುವ ದತ್ತಿ ಪ್ರಶಸ್ತಿಗೆ ಜಹಾನ್ ಆರಾ ಕೋಳೂರು ಅವರ ‘ನನ್ನೂರ ಕೌದಿ’ ಕೃತಿಗಳು ಆಯ್ಕೆಯಾಗಿವೆ.


ಇವರಿಗೆ ದಿ. ೨೫ ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರ ನೀಡಲಾಗುವುದು ಎಂದು ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರಾಮಚಂದ್ರಗೌಡ ಬಿ. ಗೊಂಡಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!