
ಕರಕುಶಲ ಮತ್ತು ನೇಯ್ಗೆ ಮಹೋತ್ಸವ ಕಿರುಪ್ರದರ್ಶನ ಮತ್ತು ಮಾರಾಟ ಸ್ಥಳಕ್ಕೆ ಮಾಜಿ ಸಚಿವ ರಾಮದಾಸ ಭೇಟಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,೨೭- ನಗರದ ತಾಲೂಕ ಕ್ರೀಡಾಂಗಣದಲ್ಲಿ ಜರುಗುತ್ತಿರುವ ಕರಕುಶಲ ಮತ್ತು ನೇಯ್ಗೆ ಮಹೋತ್ಸವ ಕಿರುಪ್ರದರ್ಶನ ಮತ್ತು ಮಾರಾಟ ಸ್ಥಳಕ್ಕೆ ಮಾಜಿ ಸಚಿವ ರಾಮದಾಸ ಭೇಟಿ ನೀಡಿದರು.
ಶುಕ್ರವಾರ ಸಂಜೆ ಭೇಟಿ ನೀಡಿದ ಅವರು ೨೫ ಮಳಿಗೆಯಲ್ಲಿ ಪ್ರದರ್ಶನಗೊಂಡ ಕಲಾಕೃತಿಗಳನ್ನು ವೀಕ್ಷಿಸಿ ಸಂತಸಪಟ್ಟರು.
ಪತ್ತ್ರಿಕೆ ಜೋತೆ ಮಾತನಾಡಿದ ಅವರು ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಈ ಮೇಳ ರಾಜ್ಯ ಮಟ್ಟದ ಮೇಳದಂತಿದ್ದು, ನಮ್ಮ ಕಲೆ-ಸಂಸ್ಕೃತಿ ಪ್ರದರ್ಶನ ಮತ್ತು ಗುಡಿ ಕೈಗಾರಿಕೆ ಉತ್ತೇಜನ ಮಾಡುವ ಕೇಂದ್ರ ಸರ್ಕಾರದ ಕೆಲಸ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ, ಬಿಜೆಪಿ ಮುಖಂಡ ಕಳಕಪ್ಪ ಜಾಧವ ಸೇರಿದಂತೆ ಇತರರು ಇದ್ದರು.