
ಕರಟಕ ದಮನಕ ಚಿತ್ರ ತಂಡ ಮತ್ತು ನಾಯಕ ನಟ ಶಿವರಾಜ್ ಕುಮಾರ್ ಹೊಸಪೇಟೆ ಭೇಟಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,11- ಕರಟಕ ದಮನಕ ಚಿತ್ರದ ನಾಯಕ ನಟ ಶಿವರಾಜ್ ಕುಮಾರ್ ಹಾಗೂ ಚಿತ್ರ ನಿರ್ದೇಶಕರ ಯೋಗರಾಜ್ ಭಟ್ ತಂಡ ಹೊಸಪೇಟೆ ನಗರಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದರು.
ನಟ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ರವರು ತೆರೆದ ವಾಹನದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಅಭಿಮಾನಿಗಳಿಗೆ ಕೈಬೀಸುತ್ತಾ ಪುನೀತ್ ರಾಜಕುಮಾರ್ ಪುತ್ತಳಿಗೆ ಹೂಮಾಲೆ ಹಾಕಿ ಗೌರವಸಮರ್ಪಿಸಿ ನಂತರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ” ಕರಟಕ ದಮನಕ” ಚಿತ್ರದ ಕುರಿತು ಮಾತನಾಡಿದರು.
ಚಿತ್ರ ಅದ್ಭೂತವಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಮುಖ್ಯವಾಗಿ ನೀರಿನ ಸಮಸ್ಯೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರ ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ ಜನತೆಯು ಸಿನಿಮಾ ನೋಡಿ ಪ್ರೋತ್ಸಾಹಿಸ ಬೇಕೆಂದು ಕೋರಿದರು. ಹೊಸಪೇಟೆಯನ್ನು ಯಾವ ಕಾಲಕ್ಕೂ ಮರೆತಿಲ್ಲ. ಇದೇ ಭಾಗದಲ್ಲಿ ಹಲವಾರು ಚಿತ್ರಗಳನ್ನು ಚಿತ್ರಕರಿಸಿದ್ದೇವೆ.
ಹೊಸಪೇಟೆಗೂ ನಮಗೂ ಅವಿನಾ ಭಾವ ಸಂಬಂಧವಿದೆ ಎಂದರು. ತಮ್ಮನ್ನು ಅಭಿಮಾನಿಗಳು ನಟರಾಗಿ ನೋಡುತ್ತಿದ್ದಾರೆ ಈಗ ರಾಜಕೀಯಕ್ಕೆ ಬಂದಿದ್ದೀರಿ ರಾಜಕೀಯದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೀರಾ, ತಮ್ಮನ್ನು ಅಭಿಮಾನಿಗಳು ಯಾವರೀತಿ ಒಪ್ಪಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯದಲ್ಲಿ ಗೆಲ್ಲುವ ಭರವಸೆ ಇದೆ. ಸಿನಿಮಾನೇ ಬೇರೆ ರಾಜಕೀಯನೇ ಬೇರೆ ಅಭಿಮಾನಿಗಳ ಅವರವರ ಆಲೋಚನೆಗಳಿಗೆ ಅವರನ್ನು ಬಿಡಬೇಕು. ಅಭಿಮಾನ ಎನ್ನುವುದು ಎಲ್ಲರಲ್ಲೂ ಇರುತ್ತೆ ಅದನ್ನು ನಾವು ಗೌರವಿಸಬೇಕು ಎಂದರು.