
ನಾಲ್ಕು ಕರಡಿ ದಾಳಿ ಗಂಭೀರ ಗಾಯ
ಕರುನಾಡು ಬೆಳಗು ಸುದ್ದಿ
ಕೊಪ್ಪಳ, 27- ತಾಲೂಕಿನ ಹೊಸೂರು ಗ್ರಾಮದ ವ್ಯಕ್ತಿಯೋರ್ವನ ಮೇಲೆ ನಾಲ್ಕು ಕರಡಿಗಳು ಏಕಕಾಲಕ್ಕೆ ಮಾರಣಾಂತಿಕವಾಗಿ ದಾಳಿ ಮಾಡಿದ ದಾರುಣ ಘಟನೆ ಜರುಗಿದೆ.
ರವಿವಾರ ಸಂಜೆ ಹೊಸೂರು ಗ್ರಾಮದಿಂದ ಹುಲಗಿಯ ಹುಲಿಗೆಮ್ಮ ದೇವಸ್ಥಾನ ಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ಈರಣ್ಣ ಜಾಲಿಗಿಡ ಕರಡಿ ದಾಳಿಯಿಂದ ಗಂಭೀರ ಗಾಯಗೊಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಕರಣ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ದೂರು ದಾಖಲಾದ ಬಗ್ಗೆ ಮಾಹಿತಿ ಲಬ್ತವಾಗಿಲ್ಲಾ.