
ಕರಡೋಣಿ : ಸಮಯಕ್ಕೆ ಸರಿಯಾಗಿ ಬಸ್ ಬಿಡಲು SFI ಆಗ್ರಹ
ಕರುನಾಡ ಬೆಳಗು ಸುದ್ದಿ
ಕನಕಗಿರಿ, 29- ತಾಲೂಕಿನ ಕರಡೋಣಿ,ಕಾಟಪುರ, ಗುಡುದೂರು, ಹೀರೆಖೇಡ, ಚಿಕ್ಕಖೇಡ, ನೀರಲೂಟಿ ಗ್ರಾಮದ ಸುಮಾರು 200 ಕ್ಕೂ ಅಧಿಕ ವಿದ್ಯಾರ್ಥಿಗಳು ದಿನನಿತ್ಯ ಕನಕಗಿರಿ,ಗಂಗಾವತಿ, ಕೊಪ್ಪಳ ಶಾಲಾ-ಕಾಲೇಜ್ ಗಳಿಗೆ ಮುಂದಿನ ಉನ್ನತ ಶಿಕ್ಷಣಕ್ಕಾಗಿ ವಿದ್ಯಾಭ್ಯಾಸ ಮಾಡಲು ಹೋಗುತ್ತ ಇದ್ದಾರೆ.
ವಿವಿಧ ಗ್ರಾಮಗಳಿಂದ ಶಾಲಾ-ಕಾಲೇಜ್ ಗೆ ಹೋಗುವ ವಿದ್ಯಾರ್ಥಿಗಳು ಎಲ್ಲಾರು ಬಸ್ ಗಳ ಮೇಲೆ ಅವಲಂಬನೆ ಆಗಿದ್ದಾರೆ ಬಸ್ ತಡವಾಗಿ ಬಂದರೆ ಅಥವಾ ಒಂದು ದಿನ ಬಸ್ ಬರದಿದ್ದರೆ ಅಂದು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜ್ ಗೆ ಹೋಗಲು ಆಗುವುದಿಲ್ಲ ಅಂದಿನ ಪಾಠಗಳನ್ನು ಅಧ್ಯಯನ ಮಾಡಲು ತೊಂದರೆ ಆಗುತ್ತದೆ ಕರಡೋಣಿ ಮಾರ್ಗವಾಗಿ ಕನಕಗಿರಿಗೆ ಬೆಳ್ಳಗೆ 7:20 ಕ್ಕೆ ಬರಬೇಕಾದ ಬಸ್ ಸಮಯಕ್ಕೆ ಸರಿಯಾಗಿ ಬರವುದಿಲ್ಲ ಪ್ರತಿದಿನ. 8:00, 8:30 ಕ್ಕೆ ಈಗೆ ತಡವಾಗಿ ಬರುತ್ತಾರೆ.
ಇದರಿಂದಾಗಿ ನಮ್ಮ ವಿದ್ಯಾಭ್ಯಾಸಕ್ಕೆ ಶಾಲಾ-ಕಾಲೇಜ್ ಗೆ ಹೋಗಲು ತುಂಬಾ ತೊಂದರೆ ಆಗುತ್ತದೆ ಮತ್ತು ಒಂದೆ ಬಸ್ ಬರವುದರಿಂದ ನೂರಾರು ವಿದ್ಯಾರ್ಥಿಗಳು ಅದೇ ಬಸ್ ಗೆ ಹತ್ತುವುದರಿಂದ ಕೆಲವು ವಿದ್ಯಾರ್ಥಿಗಳಿಗೆ ನಿಲ್ಲಲು ಸ್ಥಳ ಇಲ್ಲದೆ ಗ್ರಾಮದಲ್ಲಿ ಊಳಿದು ಬಿಡುತ್ತಾರೆ ಆದ್ದರಿಂದ ಈ ಕೂಡಲೇ ಬಸ್ ಘಟಕ ವ್ಯವಸ್ಥಾಪಕರಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ತಾಲ್ಲೂಕು ಸಮಿತಿ ಸಾಂಕೇತಿಕವಾಗಿ ಮನವಿ ಪತ್ರ ಕೊಡುವ ಮೂಲಕ ಆಗ್ರಹ ಮಾಡುವುದೇನೆಂದರೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೂಡಲೇ ಕರಡೋಣಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಂದ ಕನಕಗಿರಿ, ಗಂಗಾವತಿ, ಕೊಪ್ಪಳಕ್ಕೆ ಶಾಲಾ-ಕಾಲೇಜ್ ಗೆ ಹೋಗವು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪ್ರತಿದಿನ ಬೆಳ್ಳಗ್ಗೆ 7:30 ಕ್ಕೆ ಒಂದು ಮತ್ತು 8:30 ಕ್ಕೆ ಒಂದು ಎರಡು ಬಸ್ ಬಿಡಬೇಕು ಎಂದು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ SFI ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ, ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ್, ಹನುಮೇಶ ವಿದ್ಯಾರ್ಥಿಗಳಾದ ಬಸವರಾಜ,ಅನ್ಸಾರಿ, ಶಶಿಕಲಾ, ಪದ್ದಮ್ಮ,ವಿಜಯಲಕ್ಷ್ಮಿ, ದುರಗಮ್ಮ, ಅಂಜನಮ್ಮ ಇತರರು ಇದ್ದರು.