
ಕರಮುಡಿಯಲ್ಲಿ ಗಣಿತ ಕಲಿಕಾ ಆಂದೋಲನ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 31 ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಗಣಿತ ಕಲಿಕೆ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು ಅದು ಮುಂದೆ ನಿಮ್ಮ ಜೀವನಕ್ಕೆ ದಾರಿದೀಪ ವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣನವರು ಹೇಳಿದರು
ತಾಲೂಕಿನ ಕರಮುಡಿ ಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಂಡಿಹಾಳ ಮತ್ತು ತೂಂಡಿಹಾಳ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳ ಹಂಚುವುದರ ಮೂಲಕ ಗ್ರಾಪಂ ಅಧ್ಯಕ್ಷರಾದ ಕಲ್ಲಿನಾಥ ಲಿಂಗಣ್ಣನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗಣಿತ ಕಲಿಯುವುದರಿಂದ ಮುಂದೆ ನೀವು ಭವಿಷ್ಯದಲ್ಲಿ ಎಂಜಿನಿಯರ್, ಡಾಕ್ಟರ್ ಹಾಗೂ ಅಂತರಿಕ್ಷ ತಜ್ಞರಾಗಲು ಅತ್ಯುತ್ತಮವಾದ ಅವಕಾಶವನ್ನು ಗಣಿತ ಒದಗಿಸಿಕೊಡುತ್ತದೆ ಮತ್ತು ಸಣ್ಣ ವಯಸ್ಸಿನಲ್ಲಿ ವಿದ್ಯಕಡೇ ಗಮನಹರಿಸಿ ವಿದ್ಯ ಕಲಿತರೆ ಮುಂದೆ ನಿಮ್ಮಗೆ ಬದುಕು ಕಟ್ಟಿ ಕೊಡುತ್ತದೆ ಮತ್ತು ನಿಮ್ಮಗೆ ಕಲಿಸಿದ ಗುರುಗಳ ಹೆಸರು ಬರುತ್ತದೆ ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ದೇಶದ ಉತ್ತಮ ಪ್ರಜೆಯಾಗಬೇಕು ಎಂದರು,
ನಂತರಎಸ್ ಡಿ ಎಂ ಸಿ ಅಧ್ಯಕ್ಷ ಗೌಡಪ್ಪ ಬಲ ಕುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳ ಜೀವನದ ಪ್ರತಿ ಹಂತ ಹಂತದಲ್ಲಿ ಲೆಕ್ಕಾಚಾರಗಳ ಭಾವನೆಗಳನ್ನು ಎದುರಿಸುತ್ತೇವೆ. ಆದ್ದರಿಂದ ಗಣಿತ ವಿಷಯ ಕುರಿತಂತೆ ಹೆಚ್ಚಿನ ಗಮನ ಹರಿಸಬೇಕಾದ್ದು ಪ್ರತಿ ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ಗಣಿತ ವಿಷಯದ ಆಸಕ್ತಿಯಿಂದ ವಿದ್ಯಾರ್ಥಿಗಳು ತಮ್ಮ ಬುದ್ಧಿಮಟ್ಟವನ್ನು ಸಹ ಇನ್ನೊ ಹೆಚ್ಚು ಹೆಚ್ಚು ಬೆಳೆಯಲಿ ಎಂದರು,
ಈ ಸಂದರ್ಭದಲ್ಲಿ ಮಾತಾನಾಡಿದ ಸಿ ಆರ್ ಪಿ ಮುಧೋಳ್ ಗ್ರಾಮ ಶಿಕ್ಷಕರಾದ ಶಾಂತಪ್ಪ ಜುಮ್ಮನ್ನವರ್ ಮಾತನಾಡಿ “4, 5 ಹಾಗೂ 6ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಗಣಿತ ವಿಷಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಗಣಿತ ಕಲಿಕಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು ಇದರಿಂದ ಸತತ ಅಭ್ಯಾಸದಿಂದ ಗಣಿತದ ಲೆಕ್ಕಗಳನ್ನು ನಿರಾಳವಾಗಿ ಮಾಡಬಹುದು” ಎಂದು ಹೇಳಬಹುದು ಎಂದರು,
ಕರಮುಡಿ ಬಂಡಿಹಾಳ ತೊಂಡಿಹಾಳ ವಿದ್ಯಾರ್ಥಿಗಳು ಗಣಿತ ಪರೀಕ್ಷೆಯಲ್ಲಿ 150 ವಿದ್ಯಾರ್ಥಿಗಳು ಹಾಜರಿದ್ದರು, ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್ ಸಿಳ್ಳಿಕ್ಯಾತರ ಮುಖಂಡರಾದ ಗಂಗಪ್ಪ ಹವಳಿ ಅವರು ಮಾತನಾಡಿದರು, ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಣ್ಣ ಹೊಕ್ಕಳದ, ಮೈಲಾರಪ್ಪ ಪಲ್ಲೇದ, ಕರಮುಡಿ ಶಾಲೆಯ ಶಿಕ್ಷಕರಾದ ಹನುಮಪ್ಪ ಬಂಡಿಹಾಳ ತಿರುಗಣೆಪ್ಪಾ ದೇವಕ್ಕಿ ಜಗದೀಶಪ್ಪ ಅಂಗಡಿ ಹನುಮಪ್ಪ ತಳವಾರ ಮುತ್ತಣ್ಣ ಬಡಿಗೇರ ಪ್ರಸನ್ನ ಉಳ್ಳಾಗಡ್ಡಿ ಮಂಜುನಾಥ ರಾಂಪುರ್ ರಾಜೇಶ್ವರಿ, ವಿಜಯಲಕ್ಷ್ಮಿ ಬಂಡಿಹಾಳ ಗ್ರಾಮದ ಶಾಲೆ ಶಿಕ್ಷಕರಾದ ಆನಂದ್ ಕೆರಳ್ಳಿ ನಾಗರಾಜ್ ಭಜಂತ್ರಿ, ತೊಂಡಿಹಾಳ ಗ್ರಾಮದ ಶಾಲೆಯ ಶಿಕ್ಷಕಿಯರಾದ ಯಲ್ಲಮ್ಮ ತಳವಾರ್ ಮತ್ತು ಇತರರು ಸೇರಿದಂತೆ ಭಾಗವಹಿಸಿದ್ದರು, ಶಿಕ್ಷಕರಾದ ಮರ್ತುಜಾ ಮುಜಾವರ್ ನಿರೂಪಣೆ ಮಾಡಿದರು, ರವಿಚಂದ್ರ ಕೆಂಚರೆಡ್ಡಿ ವಂದನಾರ್ಪಣೆ ಮಾಡಿದರು,