
ಕರುನಾಡ ಬೆಳಗು ವರದಿ ಫಲ ಶೃತಿ
*ವರದಿಗೆ ಸ್ಪಂದಿಸಿ ಕೂಡಲೇ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಜಿಲ್ಲಾಆಡಳಿತ *
*ಹಂಪಿ ಉತ್ಸವ ಕಳೆಗೆ ಮೆರಗು ಬಂದಂತಾಯಿತು *
ಎಲ್. ಮಂಜುನಾಥ
ಹಂಪಿ (ವಿಜಯನಗರ )ಫೆ 26: “ಹಂಪಿ ಉತ್ಸವ-2025ರಲ್ಲಿ “ಕೃಷ್ಣ ಬಜಾರ” ಪರಿಸರ ಸ್ವಚ್ಛತೆಗೆ ಜಿಲ್ಲಾಡಳಿತಕ್ಕೆ ಭಾರವಾಯಿತೇ..?” ಎನ್ನುವ ಶೀರ್ಷಿಕೆ ಅಡಿ “ಕರುನಾಡ ಬೆಳಗು” ಕನ್ನಡ ದಿನ ಪತ್ರಿಕೆಯಲ್ಲಿ 26.02.2025ರಂದು ಸುದ್ದಿ ಪ್ರಕಟಿಸಲಾಗಿತ್ತು.
ಉತ್ಸವ ವೀಕ್ಷಿಸಲು ಲಕ್ಷೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕಮಲಾಪುರದಿಂದ ಹಂಪಿಗೆ ಪ್ರವೇಶಿಸುವ ಮುಖ್ಯ ದ್ವಾರದ ರಸ್ತೆಯ ಬಲಭಾಗದಲ್ಲೇ ಇರುವ “ಕೃಷ್ಣ ಬಜಾರ” ಪ್ರವಾಸಿಗರಿಗೆ ಮೊದಲ ದರ್ಶನವಾಗುತ್ತದೆ. ಇಂತಹ ಪ್ರಮುಖ ಸ್ಥಳವನ್ನು ಸ್ವಚ್ಛತೆ ಗೊಳಿಸದೇ ನಿರ್ಲಕ್ಷಿಸಿದರೆ ಉತ್ಸವ ಸಾರ್ಥಕ ಎನಿಸದು ಕೂಡಲೇ ಈ ಸ್ಥಳವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಕಾಣುವಂತೆ ಮಾಡಬೇಕೆನ್ನುವುದು ಪ್ರವಾಸಿಗಾರ ಅಭಿಪ್ರಾಯವಾಗಿದೆ ಎಂದು ವಿಸ್ತಾರವಾದ ವರದಿ ಬಿತ್ತರಿಸಲಾಗಿತ್ತು.
ಜಿಲ್ಲಾಡಳಿತ ವರದಿಗೆ ಸ್ಪಂದಿಸಿ “ಕೃಷ್ಣ ಬಜಾರ” ಪರಿಸರದಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದ್ದು ‘ಪ್ರವಾಸಿಗರ’ ಅಭಿಪ್ರಾಯಕ್ಕೆ ಜಿಲ್ಲಾಡಳಿತದಿಂದ ಸ್ಪಂದನೆ ಸಿಕ್ಕಂತಾಯಿತು ಇದರಿಂದ ಉತ್ಸವಕ್ಕೆ ಮೆರಗು ಬಂದಂತಾಗಿದೆ.
‘ “ಕೃಷ್ಣ ಬಜಾರ”ದ ಸಾಲು ಮಂಟಪಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ 5ಅಡಿಗಳ ದೂರದಿಂದ ಜೆಸಿಬಿ ಮೂಲಕ ಸಾಧ್ಯವಾದಷ್ಟು ಸ್ವಚ್ಛತೆಗೊಳಿಸಿ, ಉಳಿದ ಗಿಡ-ಗಂಟೆ, ಹುಲ್ಲನ್ನು ಕಾರ್ಮಿಕರಿಂದ ಮತ್ತು ಗ್ಯಾಸ್ ಕಟ್ಟರ್ ನಿಂದ ಸಂಪೂರ್ಣ ಸ್ವಚ್ಛ ಗೊಳಿಸಲಾಗುವುದು’.
-ಮಧು ಅಭಿಯಂತರರು, ನಿರ್ಮಿತಿ ಕೇಂದ್ರ ವಿಜಯನಗರ.