
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ : 3 ರಂದು ಮತದಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವನ್ನು ಜೂನ್ 03 ರಂದು ನಿಗದಿಪಡಿಸಿದ್ದು, ಇದಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಒಟ್ಟು 24 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಮತದಾರರ ವಿವರ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ 5 ಮತದಾನ ಕೇಂದ್ರಗಳಿದ್ದು, 1583 ಪುರುಷ ಹಾಗೂ 641 ಮಹಿಳೆಯರು ಸೇರಿದಂತೆ ಒಟ್ಟು 2224 ಪದವೀಧರ ಮತದಾರರಿದ್ದಾರೆ. ಕಾರಟಗಿ ತಾಲ್ಲೂಕಿನಲ್ಲಿ 2 ಮತದಾನ ಕೇಂದ್ರಗಳಿದ್ದು, 795 ಪುರುಷ ಹಾಗೂ 363 ಮಹಿಳೆಯರು ಸೇರಿದಂತೆ ಒಟ್ಟು 1158 ಪದವೀಧರ ಮತದಾರರಿದ್ದಾರೆ. ಕನಕಗಿರಿ ತಾಲ್ಲೂಕಿನಲ್ಲಿ 3 ಮತದಾನ ಕೇಂದ್ರಗಳಿದ್ದು, 485 ಪುರುಷ ಹಾಗೂ 183 ಮಹಿಳೆಯರು ಸೇರಿದಂತೆ 668 ಪದವೀಧರ ಮತದಾರರಿದ್ದಾರೆ.
ಗಂಗಾವತಿ ತಾಲ್ಲೂಕಿನಲ್ಲಿ 4 ಮತದಾನ ಕೇಂದ್ರಗಳಿದ್ದು, 1937 ಪುರುಷ ಹಾಗೂ 1257 ಮಹಿಳೆಯರು ಸೇರಿದಂತೆ ಒಟ್ಟು 3194 ಪದವೀಧರ ಮತದಾರರಿದ್ದಾರೆ. ಯಲಬುರ್ಗಾ ತಾಲ್ಲೂಕಿನಲ್ಲಿ 2 ಮತದಾನ ಕೇಂದ್ರಗಳಿದ್ದು, 945 ಪುರುಷ ಹಾಗೂ 387 ಮಹಿಳೆಯರು ಸೇರಿದಂತೆ ಒಟ್ಟು 1332 ಪದವೀಧರ ಮತದಾರರಿದ್ದಾರೆ. ಕುಕನೂರು ತಾಲ್ಲೂಕಿನಲ್ಲಿ 2 ಮತದಾನ ಕೇಂದ್ರಗಳಿದ್ದು, 724 ಪುರುಷ ಹಾಗೂ 359 ಮಹಿಳೆಯರು ಸೇರಿದಂತೆ ಒಟ್ಟು 1083 ಪದವೀಧರ ಮತದಾರರಿದ್ದಾರೆ. ಕೊಪ್ಪಳ ತಾಲ್ಲೂಕಿನಲ್ಲಿ 6 ಮತದಾನ ಕೇಂದ್ರಗಳಿದ್ದು, 2693 ಪುರುಷ ಹಾಗೂ 1391 ಮಹಿಳೆಯರು ಸೇರಿದಂತೆ ಒಟ್ಟು 4084 ಪದವೀಧರ ಮತದಾರರಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 24 ಮತದಾನ ಕೇಂದ್ರಗಳಿದ್ದು, 9162 ಪುರುಷ ಮತದಾರರು ಹಾಗೂ 4581 ಮಹಿಳಾ ಮತದಾರರು ಸೇರಿದಂತೆ ಒಟ್ಟು 13743 ಪದವೀಧರ ಮತದಾರರಿದ್ದಾರೆ.
ಜೂನ್ 02 ರಂದು ಆಯಾ ತಾಲ್ಲೂಕು ತಹಶೀಲ್ದಾರ ಕಛೇರಿಗಳಲ್ಲಿ ಮಸ್ಟರಿಂಗ್ ಕಾರ್ಯವನ್ನು ನಿಗದಿಪಡಿಸಲಾಗಿದ್ದು, ಮಸ್ಟರಿಂಗ್ ನಂತರ ಮತದಾನ ಸಿಬ್ಬಂದಿಗಳು ಮತಪೆಟ್ಟಿಗೆ ಮತ್ತು ಮತದಾನ ಸಾಮಗ್ರಿಗಳೊಂದಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳುವರು. ಜೂನ್ 03 ರಂದು ಬೆಳಿಗ್ಗೆ 08 ಗಂಟೆಯಿAದ ಸಂಜೆ 04 ಗಂಟೆಯವರೆಗೆ ಮತದಾನ ನಡೆಯಲಿದೆ.
ಜೂನ್ 03 ರಂದು ಮತದಾನ ಮುಕ್ತಾಯವಾದ ನಂತರ ಆಯಾ ತಾಲ್ಲೂಕು ತಹಶೀಲ್ದಾರರ ಕಛೇರಿಯಲ್ಲಿ ಡಿ-ಮಸ್ಟರಿಂಗ್ ಕಾರ್ಯವನ್ನು ಕೈಗೊಂಡು ಜಿಲ್ಲೆಯ ಎಲ್ಲಾ ಮತದಾನ ಕೇಂದ್ರಗಳ ಮತಪೆಟ್ಟಿಗೆ ಮತ್ತು ದಾಖಲಾತಿಗಳನ್ನು ತೆಗೆದುಕೊಂಡು ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯ ಹೇಮರಡ್ಡಿ ಮಲ್ಲಮ್ಮ ಕಟ್ಟಡ ಸಭಾಂಗಣದಲ್ಲಿ ನಿರ್ಮಿಸಿರುವ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗುವುದು.
ಮತದಾನ ಕೇಂದ್ರಗಳ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ಪದವೀಧರ ಮತದಾರರ ಹೆಸರುಗಳು ನೋಂದಣಿಯಾಗಿರುವ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮತ್ತು ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಮತದಾರರ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಮತದಾರರ ಸೌಲಭ್ಯ ಕೇಂದ್ರದ ದೂರವಾಣಿ ಸಂಖ್ಯೆಗಳ ವಿವರ : ಮತದಾರರ ಸಹಾಯವಾಣಿ ಕೇಂದ್ರ, ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ: 1950(ಟೋಲ್ ಫ್ರೀ), ತಹಶೀಲ್ದಾರ ಕಛೇರಿ, ಕುಷ್ಟಗಿ: 08536-267031, ತಹಶೀಲ್ದಾರ ಕಛೇರಿ, ಕಾರಟಗಿ: 08533-200321, ತಹಶೀಲ್ದಾರ ಕಛೇರಿ, ಕನಕಗಿರಿ: 080-23900982, ತಹಶೀಲ್ದಾರ ಕಛೇರಿ, ಗಂಗಾವತಿ: 08533-230929, ತಹಶೀಲ್ದಾರ ಕಛೇರಿ, ಯಲಬುರ್ಗಾ: 08534-220130, ತಹಶೀಲ್ದಾರ ಕಛೇರಿ, ಕುಕನೂರು: 08534-200115, ತಹಶೀಲ್ದಾರ ಕಛೇರಿ, ಕೊಪ್ಪಳ: 08539-220381 ಗೆ ಸಂಪರ್ಕಿಸಿ ಜಿಲ್ಲೆಯ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಣಿಯಾಗಿರುವ ಬಗ್ಗೆ ಮತ್ತು ಮತದಾನ ಕೇಂದ್ರಗಳ ಬಗ್ಗೆ ಮಾಹಿತಿ ಪಡೆಯಬಹುದು.
ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾದ ಎಲ್ಲಾ ಮತದಾರರಿಗೆ ವೋಟರ್ ಸ್ಲಿಪ್‌ಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಮತದಾರರಿಗೆ ವೋಟರ್ ಸ್ಲಿಪ್ ತಲುಪಿರದಿದ್ದಲ್ಲಿ ಮೇಲ್ಕಾಣಿಸಿದ ಮತದಾರರ ಸೌಲಭ್ಯ ಕೇಂದ್ರಗಳಿAದ ಮಾಹಿತಿ ಪಡೆಯಬಹುದು ಮತ್ತು ಮತದಾನದ ದಿನದಂದು ಮತಗಟ್ಟೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದು.
ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನದ ಮಾಹಿತಿ : ಚುನಾವಣೆಯ ಮತದಾನವು ಪ್ರಾಶಸ್ತö್ಯ ಮತದಾನವಾಗಿರುತ್ತದೆ. ಮತದಾರರು ಮತಪತ್ರದಲ್ಲಿ ಅಭ್ಯರ್ಥಿಗೆ ಪ್ರಾಶಸ್ತö್ಯ ಮತವನ್ನು ನೀಡಬೇಕು. ಪ್ರಾಶಸ್ತö್ಯ ಮತಗಳನ್ನು ಯಾವುದೇ ಭಾಷೆಯ ಸಂಖ್ಯೆಗಳಲ್ಲಿ ನೀಡಬಹುದು. ಮೊದಲನೇ ಪ್ರಾಶಸ್ತö್ಯ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು. (ಮೊದಲನೇ ಪ್ರಾಶಸ್ತö್ಯ ಮತವನ್ನು ಸಂಖ್ಯೆ 01 ರಿಂದ ಗುರುತಿಸಬೇಕು). ಉಳಿದ ಅಭ್ಯರ್ಥಿಗಳಿಗೆ ಸಂಖ್ಯೆ 2 ರಿಂದ ಆಯ್ಕೆಯನುಸಾರ ನೀಡಬೇಕು. ಒಬ್ಬ ಅಭ್ಯರ್ಥಿಗೆ ನೀಡಿದ ಸಂಖ್ಯೆಯನ್ನು ಇನ್ನೊಬ್ಬ ಅಭ್ಯರ್ಥಿಗೆ ಪುನರಾವರ್ತಿಸಬಾರದು. ಮತದಾನ ಮಾಡುವಾಗ ಕಡ್ಡಾಯವಾಗಿ ಗೌಪ್ಯತೆಯನ್ನು ಕಾಪಾಡಬೇಕು. ಮತಗಟ್ಟೆಯಲ್ಲಿ ಮತದಾರರು ಮೊಬೈಲ್ ಮತ್ತು ಇತರೆ ಯಾವುದೇ ಎಲೆಕ್ಟಾçನಿಕ್ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಯಾವುದೇ ಕಾರಣಕ್ಕೂ ಮತಪತ್ರದಲ್ಲಿ ಸಹಿ, ಹೆಸರು, ಪಕ್ಷದ ಗುರುತು ಅಥವಾ ಯಾವುದೇ ಚಿತ್ರದ ಗುರುತು ಮಾಡಬಾರದು. ಮತಗಟ್ಟೆಯಲ್ಲಿ ನೀಡಲಾಗುವ ಪೆನ್ನಿನಿಂದ ಮಾತ್ರ ಮತ ಚಲಾಯಿಸಬೇಕು.
ಮತಗಟ್ಟೆಗಳಲ್ಲಿ ವಿಡಿಯೋಗ್ರಾಫಿ ಮತ್ತು ವೆಬ್‌ಕಾಸ್ಟಿಂಗ್ ವ್ಯವಸ್ಥೆ : ಕೊಪ್ಪಳ ಜಿಲ್ಲೆಯ 24 ಮತಗಟ್ಟೆಗಳ ಪೈಕಿ 18 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಹಾಗೂ ಉಳಿದ 06 ಮತಗಟ್ಟೆಗಳಲ್ಲಿ ವಿಡಿಯೋಗ್ರಾಫಿ ವ್ಯವಸ್ಥೆಯನ್ನು ಮಾಡಲಾಗಿದೆ.
ಮೇಲಿನ ಮತದಾನ ಕೇಂದ್ರಗಳಿಗೆ 17 ಸೆಕ್ಟರ್ ರೂಟ್‌ಗಳನ್ನು ಗುರುತಿಸಲಾಗಿದೆ ಮತ್ತು ಚುನಾವಣಾ ಪ್ರಕ್ರಿಯೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಮತದಾನದ ದಿನದಂದು ಕರ್ನಾಟಕ ವಿಧಾನ ಪರಿಷತ್ ಮತಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟಿçÃಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳಲ್ಲಿ, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಇsಣಚಿbಟishmeಟಿಣ ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲಿರುವ ಮತದಾರರಿಗೆ ಸರ್ಕಾರ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದ್ದು, ಅರ್ಹ ಮತದಾರರು ಈ ಸೌಲಭ್ಯವನ್ನು ಪಡೆಯಬಹುದು.
ಜಿಲ್ಲೆಯಲ್ಲಿ ನೋಂದಾಯಿತರಾದ ಎಲ್ಲಾ ಪದವೀಧರ ಮತದಾರರು ಜೂನ್ 03 ರಂದು ತಪ್ಪದೇ ನಿಗದಿತ ಮತದಾನ ಕೇಂದ್ರಗಳಲ್ಲಿ ಮತ ಚಲಾಯಿಸಲು ಮತ್ತು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆ ಮತದಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.