
ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಜೆಡಿಎಸ್ ಮತ್ತು ಬಿಜೆಪಿ ಸೇರಿಕೊಂಡು ಕಾಲು ಕೆರೆದು ಜಗಳ ಮಾಡುತ್ತಲೇ ಬಂದಿದೆ, ಇದಕ್ಕೆ ಬಹುಮುಖ್ಯ ಕಾರಣ ಎರಡೂ ಪಕ್ಷಗಳಿಗೆ ಸೋಲು ಅರಗಿಸಿ ಕೊಳ್ಳಲು ಸಾದ್ಯವಾಗದೇ ಇರುವದು. ಅಷ್ಟಕ್ಕೂ ಕರ್ನಾಟಕದಲ್ಲಿ ಈ ಪಲಿತಾಂಶ ಬಂದಿರುವದು ಬಿಜೆಪಿ ಆಡಳಿತದ ವಿರುದ್ದ, ಆದರೆ ಹೆಚ್.ಡಿ.ಕುಮಾರಸ್ವಾಮಿ ಹತಾಶ ರಾಗಿರುವದು ನೋಡಿ ದರೆ ಸೋಲು ಅರಗಿಸಿ ಕೊಳ್ಳುವ ಶಕ್ತಿ ಅವರಿಗಿಲ್ಲ ಎನ್ನುವದು ಕಾಣುತ್ತಿದೆ, ಯಾಕೆಂದರ ಅವರೇನು ಹೋರಾಟ ಮಾಡಿ ಸಂಘಟನೆ ಮಾಡಿ ಮುಖ್ಯ ಮಂತ್ರಿಯಾದ ವರು ಅಲ್ಲವಲ್ಲ.
ಹೆಚ್.ಡಿ. ಕುಮಾರಸ್ವಾಮಿ ಮೊದಲ ಸಲ ಮುಖ್ಯಮಮತ್ರಿ ಯಾದಾಗ ಸಾಕಷ್ಟು ಜನಪರ ಕೆಲಸ ಮಾಡಿದದಾರೆ, ಆದರೆ ಒಂದು ಸರಕಾರವನ್ನು ಆಯ್ಕೆ ಮಾಡುವಾಗ ಜನತೆ ಹಲವು ಆಯಾಮಗಳಲ್ಲಿ ವಿಚಾರ ಮಾಡುತ್ತಾರೆ, ಕೇವಲ ಅಭಿವೃದ್ದಿ ಒಂದೇ ನೋಡಿ ಮತ £Ãಡುವದಿಲ್ಲ, ಒಂದು ವೇಳೆ ಹಾಗಾಗಿದ್ದರೆ ಡಾ.ಮಲ್ಲಿ ಕಾರ್ಜುನ ಖರ್ಗೆಯಂತಹ ವರು, ಹೆಚ್.ಡಿ. ದೇವೆಗೌಡ ಅಂತ ಹವರು, ಜೆ.ಹೆಚ್. ಪಟೇಲರು, ರಾಮಕೃಷ್ಟಣ ಹೆಗಡೆ ಅಂತ ಹವರು ಸೋಲ ಬಾರದಿತ್ತು, ಆದರೆ ಜನತೆ ಹತ್ತು ಹಲವು ವಿಚಾರಗಳ ಆಧಾರದ ಮೇಲೆ ಸರಕಾರವನ್ನು ಆಯ್ಕೆ ಮಾಡುತ್ತಾರೆ. ಇಷ್ಟು ಸಣ್ಣ ವಿಷಯ ಕುಮಾರಸ್ವಾಮಿ ಯವರು ಅರ್ಥ ಮಾಡಿ ಕೊಳ್ಳದೇ ಹೋದದ್ದು ದುರಂತ ವೇ ಸರಿ, ನೆಗಡಿ ಯಾಗಿದೆ ಎಂದು ಮೂಗು ಕತ್ತರಿಸಲು ಮುಂದಾಗಿರುವದು ಅವರ ಕರ್ಮ ಅದು. ಕುಮಾರಸ್ವಾಮಿ ಯವರು ನಡುವಳಿಕೆ ನೋಡಿ ದರೆ, ರಾಜ್ಯದ ಮುಸ್ಲಿಂ ರಿಗೆ ಬುದ್ದಿ ಕಲಿಸಲು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂ ಡಂತಿದೆ.
ಮಾಜಿ ಪ್ರಧಾನಿ ದೇವೆಗೌ ಡರು ಇನ್ನೂ ಮುಂದೆ ಹೋಗಿ ಪಕ್ಷದ ರಾಜ್ಯಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಹೊರ ಹಾಕಿದ್ದೀರಿ, ಅವರನ್ನು ತೆಗೆದು ಯಾರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೀರಿ, ಅದು ತಮ್ಮ ಮಗ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರನ್ನು. ದೇವೆಗೌಡರು ಪಕ್ಷದ ರಾಷ್ಟಿçÃಯ ಅಧ್ಯಕ್ಷರು, ಅವರ ಮಗ ಕುಮಾರಸ್ವಾಮಿಯವರು ರಾಜ್ಯ ಅಧ್ಯಕ್ಷರು ಹಾಗೂ ಅವರ ಮೊಮ್ಮಗ £ಖಿಲ್ ಯುವ ಜನತಾದಳ ರಾಜ್ಯ ಅಧ್ಯಕ್ಷರು, ಈಗ ಉಳಿದಿರು ವದು ಮಹಿಳಾ ಘಟಕದ ಅಧ್ಯಕ್ಷ ಸ್ಥಾನ, ಅದನ್ನೂ ತಮ್ಮ ಮನೆಯವರಿಗೆ ಕೊಟ್ಟರೆ ಜನತಾ ದಳ (ಜಾತ್ಯಾತೀತ) ಮನೆಗೆ ಸಿಮೀತವಾಗುತ್ತದೆ.
ಇದು ಪಕ್ಷ ಸಂಘಟನೆ ಮಾಡುವ ರೀತಿಯೇ ಅವ ರನ್ನು ನಂಬಿ ಹಾಳಾದವರು ಸಾಕಷ್ಟು ಜನ ಈ ರಾಜ್ಯದಲ್ಲಿ ಇದ್ದಾರೆ, ಅದರ ಪಟ್ಟಿಯಲ್ಲಿ ಈಗ ಸಿ.ಎಂ.ಇಬ್ರಾಹಿA ಅವರು, ಇದೇ ಮೊದಲಲ್ಲ, ಇದು ಕೊನೆಯೂ ಅಲ್ಲ ಎನ್ನುವ ಸ್ಥಿತಿ ಇದೆ.
ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಯಾಕೆ ಇಷ್ಟೊಂದು ಕೆಳಮಟ್ಟಕ್ಕೆ ಹೋಗಿದೆ ಎಂದು ಆತ್ಮಾವ ಲೋಕನ ಮಾಡಿಕೊಂಡು ಪಕ್ಷ ಕಟ್ಟಬೇಕಾದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊ ಳ್ಳುತ್ತಿರುವದು ಆ ಪಕ್ಷದ ಅಧಪತನಕ್ಕೆ ಕಾರಣ ವಾಗಲಿದೆ. ಪಕ್ಷ ಕಟ್ಟುವ ಮನಸ್ಥಿತಿಯೇ ಇಲ್ಲದ ಕುಮಾರಸ್ವಾಮಿಯವರು ಹತಾಶೆಯ ಹಂತ ತಲುಪಿರುವ ರೀತಿಯಲ್ಲಿ ಮಾತನಾಡುವದು, ನನಗೆ ರಾಜ್ಯದ ಜನ ಅಧಿಕಾರ ಕೊಟ್ಟರೆ ಎಲ್ಲಾ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹಲಬುವದು, ಇವರಿಗಿಂತ ಉತ್ತಮ ಆಡಳಿತ £Ãಡುವ ಸಾಮರ್ಥ್ಯ ಇರುವ ಸಾವಿರಾರು ಜನ ರಾಜ್ಯದಲ್ಲಿ ಇದ್ದಾರೆ, ಅವರಿಗೆ ಇನ್ನೂ ಶಾಸಕರಾಗಿ ಆಯ್ಕೆ ಆಗಲು ಸಾದ್ಯವಾಗಿಲ್ಲ, ಅಧಿಕಾರ ಪಡೆಯಲು ಕಷ್ಟ ಪಡಬೇಕು, ಹೋರಾಡಬೇಕು, ಎಲ್ಲವನ್ನೂ ಸಹಿಸಿಕೊಳ್ಳುವ ಸಾಮಾರ್ಥ್ಯ ಇರಬೇಕು, ಅದು ಕುಮಾರ ಸ್ವಾಮಿಯವರಲ್ಲಿಲ್ಲ ಎಂದು ಕಾಣುತ್ತದೆ.
ಕುಮಾರಸ್ವಾಮಿಯವರೇ ಮುಸ್ಲಿಂರು ಜೆಡಿಎಸ್ ಪಕ್ಷಕ್ಕೆ ಮತ £Ãಡಲಿಲ್ಲ ಎಂದು ಆರೋಪಿ ಸುತ್ತೀರಿ, ಆದರೆ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಪಕ್ಷ ಸೋತಿದೆ, ಅಂದರೆ ಅಲ್ಲಿ ಕೇವಲ ಮುಸ್ಲಿಂ ಮತಗಳಿಂದ ಸೋತಿದ್ದಿ Ãರಾ ಆ ಜಿಲ್ಲೆಯಲ್ಲಿ ಒಕ್ಕಲಿಗರೂ ಜೆಡಿಎಸ್ ಪಕ್ಷಕ್ಕೆ ಮತ £Ãಡಿಲ್ಲವಲ್ಲ, ಅವರ ಬಗ್ಗೆ ಕುಮಾರಸ್ವಾಮಿಯವರು ನಿಲುವೇನು? ಅಂದರೆ ಒಕ್ಕಲಿಗರೂ ಕುಮಾರಸ್ವಾಮಿ ಯವರನ್ನು ನಂಬುತ್ತಿಲ್ಲ. ಇದನ್ನು ಅರ್ಥ ಮಾಡಿ ಕೊಂಡು, ಅವರ ವಿಶ್ವಾಸ ಗಳಿಸಿಕೊಳ್ಳುವದು ಬಿಟ್ಟು, ಬಿಜೆಪಿ ಜೊತೆ ಸೇರಿದರೆ ಅವರೆಲ್ಲ ಮತ £Ãಡುತ್ತಾರಾ? ಅಲ್ಲಿಯ ಮತದಾರರು ಬಿಜೆಪಿ ಪರವಾ ಗಿದ್ದು, ಅವರ ಜೊತೆಗೆ ಮೈತ್ರಿ ಬೆಳೆಸಿದರೆ ಜೆಡಿಎಸ್ ಉಳಿಯು ತ್ತದೆ ಎನ್ನುವ ಹಾಗಿದ್ದರೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬದಲಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಿತ್ತಲ್ಲ, ಅಂದರೆ ಒಕ್ಕಲಿಗರೂ ಬಿಜೆಪಿ ಪರ ವಾಗಿಲ್ಲ ಎಂದು ಅರ್ಥ ಅಲ್ಲವೇ? ಅಂದರೆ ಸಮಸ್ಯೆ ಇರುವದು £ಮ್ಮ ನಡು ವಳಿಕೆಯಲ್ಲಿ ವಿನಃ ಯಾವುದೇ ಸಮುದಾಯ ಅಥವಾ ವ್ಯಕ್ತಿಗಳಲ್ಲಿ ಅಲ್ಲ.
ಮುಸ್ಲಿಂರು ಜೆಡಿಎಸ್ ಪಕ್ಷಕ್ಕೆ ಯಾಕೆ ಮತ ನೀಡಲಿಲ್ಲ ಎಂದು ಮುಸ್ಲಿಂರನ್ನು ಪ್ರಶ್ನೆ ಮಾಡುತ್ತಿರುವ ಕುಮಾರಸ್ವಾಮಿ ಯವರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡರೆ ಸಾಕಿತ್ತು, ಉತ್ತರ ಸಿಗುತ್ತಿತ್ತು, ಕುಮಾರ ಸ್ವಾಮಿಯವರು ಚುನಾವಣೆಯ ನಂತರ ಅವಕಾಶ ಸಿಕ್ಕರೆ ಈ ರೀತಿ ಬಿಜೆಪಿ ಜೊತೆಗೆ ಸಖ್ಯ ಬೆಳೆಸುತ್ತೀರಿ ಎನ್ನುವ ಅನುಮಾ ನದಿಂದಲೇ ಮುಸ್ಲಿಂ ರು ಜೆಡಿಎಸ್ ಪಕ್ಷಕ್ಕೆ ಮತ ನೀಡಲಿಲ್ಲ.
ಯಾಕೆಂದರೆ ಕುಮಾರ ಸ್ವಾಮಿಯವರಿಗೆ ಒಂದು ಸೈದ್ದಾಂತಿಕ ಬದ್ದತೆ ಇಲ್ಲ, ಸಿದ್ದಾಂತನೇ ಗೊತ್ತಿಲ್ಲದ ರಾಜಕಾರಣಿ ಎಂದರೆ ಕುಮಾರ ಸ್ವಾಮಿಯವರು ಮಾತ್ರ ಎಂದು ಕಾಣುತ್ತದೆ. ಪಕ್ಷದ ಬೇರೆ ಬೇರೆ ನಾಯಕರು ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವದು ಸಾಮಾನ್ಯ ಆದರೆ ಪಕ್ಷದ ನೇತೃತ್ವ ವಹಿಸಿದ ನಾಯಕರೇ ಬೇರೆ ಪಕ್ಷದ ಸಖ್ಯ ಬೆಳಿಸಿದರೆ ಹೇಗೆ? ಕುಮಾರ ಸ್ವಾಮಿಯವರು ೨೦೦೬ರಲ್ಲಿ ಬಿಜೆಪಿ ಜೊತೆಗೆ ಸೇರಿ ಸರಕಾರ ರಚಿಸಿದಾಗಲೇ ಅವರ ಸೈದ್ದಾಂತಿ ಕ ಪಾವಿತ್ರö್ಯತೆ ಹಾಳಗಿದೆ, ಅದನ್ನು ಮರುಸ್ಥಾಪಿಸಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ, ಆದರೆ ಕುಮಾರಸ್ವಾಮಿಯವರು ಆ ವಿಷಯದಲ್ಲಿ ಪದೇ ಪದೇ ಸೋಲುತ್ತಿದ್ದಾರೆ, ಕಾರಣ ಕುಮಾರಸ್ವಾಮಿಯವರಿಗೆ ಸೈದ್ದಾಂತಿಕ ಬದ್ದತೆ ಬಗ್ಗೆ ಸ್ಪಷ್ಟತೆಯಿಲ್ಲ.
ಕುಮಾರಸ್ವಾಮಿ ಯವರ ತಂದೆಯವರಿಗೆ ಇರುವಂತಹ ಸ್ಪಷ್ಟತೆ ಇವರಿಗಿಲ್ಲ. ಅಂದು ಬಿಜೆಪಿ ಜೊತೆಗೆ ಸರಕಾರ ರಚಿಸಿದ ನಂತರ ಎಂದಾ ದರೂ ಬಿಜೆಪಿ ವಿರುದ್ದ ಹೋರಾಟ ಮಾಡಿದ್ದೀರಾ ಕುಮಾರಸ್ವಾಮಿ ಯವರೇ? ಮಮತಾ ಬ್ಯಾನರ್ಜಿ, ನಿತೀಶ ಕುಮಾರ, ಅಖಿಲೇಶ ಯಾದವ ಇತ್ಯಾದಿ ನಾಯಕರ ಬಗ್ಗೆ ಮಾತನಾ ಡುತ್ತಿದ್ದೀರಿ, ಅವರು ಬಿಜೆಪಿ ಜೊತೆ ಸರಕಾರ ಮಾಡಿರ ಲಿಲ್ಲವಾ ಎಂದು, ಹೌದು ಅವರು ಸರಕಾರ ಮಾಡಿದ್ದರು, ಆದರೆ ಹೊರ ಬಂದ ನಂತರ ಅವರು ಅದೇ ಬಿಜೆಪಿ ಜೊತೆಗೆ ತೀರ್ವ ಹೋರಾಟ ಮಾಡುತ್ತಿ ದ್ದಾರೆ, ಕುಮಾರಸ್ವಾಮಿಯವರ ಹಾಗೆ ಬಿಜೆಪಿಯ ದುರಾಡಳಿತ ಬಗ್ಗೆ ಮೃದ ಧೋರಣೆ ತೋರಿಲ್ಲ.
ಕುಮಾರಸ್ವಾಮಿಯವರು ಬಿಜೆಪಿ ಜೊತೆಗೆ ಸೇರಿ ಮುಸ್ಲಿಂರನ್ನು ನಾನೇ ಕಾಪಾಡ ಬೇಕು, ಯಾರು ಬರುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ, £Ãವು ಯಾರು ಅವರನ್ನು ಕಾಪಾ ಡಲು, ಮುಸ್ಲಿಂರನ್ನು ಕಾಪಾಡಲು ಈ ದೇಶದ ಸಂವಿಧಾನವಿದೆ, ಕಾನೂನಿದೆ. ಅಂದರೆ ಕುಮಾರ ಸ್ವಾಮಿ ಯವರು ಬಿಜೆಪಿ ಪಕ್ಷದ ನಾಯಕರ ನಡುವಳಿಕೆಗಳನ್ನು ಸರಿಮಾಡುವ ಗುತ್ತಿಗೆ ಪಡೆದಿದ್ದಾರಾ? ಇಲ್ಲ ಅವರೇ ನಾದರೂ ಬದಲಾವಣೆ ಯಾಗುತ್ತೆವೆಂದು ಬರೆದು ಕೊಟ್ಟಿದ್ದಾರೆಯೇ? ಕುಮಾರ ಸ್ವಾಮಿಯವರನ್ನು ಜಾತ್ಯಾತೀತ ಮನಸ್ಥಿತಿ ಇರುವ ಯಾರೂ ಕೂಡ ರಾಜ್ಯದಲ್ಲಿ ನಂಬುವ ದಿಲ್ಲ, ಕಾರಣ ಇಷ್ಟೇ, ಕುಮಾರಸ್ವಾಮಿಯವರು ತಮ್ಮ ಪಕ್ಷದ ವಿರೋಧಿ ಯಾರೂ ಎನ್ನುವದು ಅರ್ಥ ಮಾಡಿಕೊ ಂಡಿಲ್ಲ, ರಣರಂಗದಲ್ಲಿ ನಿಂತು ವಿರೋಧಿ ಯಾರು ಎಂದು ಗೊತ್ತಿರದ ಸೇನಾನಿ ಏನು ಮಾಡಲು ಸಾದ್ಯ ಮತ್ತು ಅಂತಹ ಸೇನಾನಿಯನ್ನು ಯಾರು ನಂಬುತ್ತಾರೆ.
ಚುನಾವಣೆಗೂ ಮುಂಚೆ ಕುಮಾರಸ್ವಾಮಿಯವರು ಒಮ್ಮೆ ಕೇಂದ್ರ ಸರಕಾರವನ್ನು ಹೊಗಳಿದ್ದೀರಿ, ಒಮ್ಮೆ ೪೦% ಭ್ರಷ್ಟಾಚಾರದ ಬಗ್ಗೆ ಮಾತನಾ ಡುವದಿಲ್ಲ ಎಂದು ಹೇಳಿದ್ದೀರಿ, ಬಿಜೆಪಿಯ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತ, ಕೇಂದ್ರ ಸರಕಾರದ ವೈಫಲ್ಯಗಳ ಬಗ್ಗೆ, ಪ್ರಧಾ£ಯವರ ವೈಫಲ್ಯಗಳ ಬಗ್ಗೆ ಎಂದಾದರೂ ಮಾತನಾ ಡಿದ್ದೀರಾ? ಆ ಸರಕಾರಗಳ ವಿರುದ್ದ ಹೋರಾಟ ಮಾಡಿ ದ್ದೀರಾ? ಹಾಗಿದ್ದಲ್ಲಿ ಜನ ಕುಮಾರಸ್ವಾಮಿಯವರಿಗೆ ಹೇಗೆ ನಂಬುವದು.
ಕುಮಾರಸ್ವಾಮಿಯವರು ಪದೇ ಪದೇ ಮುಸ್ಲಿಂ ರನ್ನು ತಮ್ಮ ಸೋಲಿಗೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನ ಪಡುತ್ತಿರುವದು ಹಾಸ್ಯಾಸ್ಪದವಾ ಗಿದೆ, ಜೆಡಿಎಸ್ ಪಕ್ಷ ಈ ರಾಜ್ಯದಲ್ಲಿ ಎಂದೂ ಬಹುಮ ತದಲ್ಲಿ ಗೆದ್ದಿಲ್ಲ, ಆ ಪಕ್ಷ ಸ್ಥಾಪನೆ ಯಾದ ನಂತರ ಗೆದ್ದಿರುವ ಅತೀ ಹೆಚ್ಚು ಸೀಟುಗಳು ೫೮, ಅದು ೨೦೦೪ರಲ್ಲಿ, ಅದಕ್ಕೂ ಮೊದಲು ೨೮ ಸೀಟುಗಳು, ಅದರ ನಂತರ ಹೆಚ್ಚೆಂದರೆ ೪೦ ಸೀಟುಗಳು ಮಾತ್ರ, ಈಗ ೧೯ ಕ್ಕೆ ಕುಸಿದಿದ್ದಾರೆ. ಬಿಜೆಪಿಯನ್ನು ವಿರೋಧಿಸುವವರು ಕೇವಲ ಮುಸ್ಲಿಂರು ಮಾತ್ರವಲ್ಲ ಎನ್ನುವ ಸತ್ಯ ಅವರಿಗೆ ಗೊತ್ತಿಲ್ಲ, ಇಲ್ಲಿಯವರಗೆ ರಾಜ್ಯದಲ್ಲಿ ಬಿಜೆಪಿಗೆ ಮತ £Ãಡಿರುವವರ ಸಂಖ್ಯೆ ಕೇವಲ ಶೇ ೩೬ರಷ್ಟು, ಅಂದರೆ ಇನ್ನುಳಿದ ಶೇ ೬೪ ರಷ್ಟು ಮತಗಳು ಬಿಜೆಪಿ ವಿರುದ್ದವಿದ್ದಾರೆ, ಅಂತಹ ಮತಗಳನ್ನು ಒಗ್ಗೂಡಿಸುವ ಶಕ್ತಿ ಇಲ್ಲದೇ ಕೇವಲ ಮುಸ್ಲಿಂರನ್ನು ಟಾರ್ಗೆಟ್ ಮಾಡುವದರಲ್ಲಿ ಯಾವ ಅರ್ಥವಿದೆ ಕುಮಾರ ಸ್ವಾಮಿಯವರೇ?
ಪದೇ ಪದೇ ಕುಮಾರ ಸ್ವಾಮಿಯವರು ಮುಸ್ಲಿಂರನ್ನು ನಾನು ಕಾಪಾಡುತ್ತೇನೆ ಎಂದು ಹೇಳುತ್ತಿರುವದು ಅವರ ಘನೆತೆಗ ತಕ್ಕುದಾದ ವಿಷಯವಲ್ಲ, ಅಷ್ಟಕ್ಕೂ ಮುಸ್ಲಿಂರನ್ನು ಕಾಪಾಡಲೂ ಇರ‍್ಯಾರು, ರಾಜ್ಯ ಮುಖ್ಯಮಂತ್ರಿಯಾದವರೂ ಎಲ್ಲಾ ಸಮುದಾಯಗಳನ್ನೂ ಕಾಪಡಬೇಕಲ್ಲವೇ? ಕೇವಲ ಮುಸ್ಲಿಂರನ್ನು ಮಾತ್ರ ಕಾಪಾ ಡಲು ಸಾದ್ಯವೇ? ಹಿಂದಿನ ಬಿಜೆಪಿ ಸರಾರದಲ್ಲಿ ಆಗಿರುವ ಮುಸ್ಲಿಂರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಇವರು ಮಾದ್ಯಮ ಹೇಳಿಕೆ £Ãಡಿದ್ದು ಬಿಟ್ಟರೆ ಕಾಪಾಡುವ ಯಾವ ಕೆಲಸ ಮಾಡಿದ್ದರು, ಆದರೂ ಮುಸ್ಲಿಂರನ್ನು ಕಾಪಾಡಲು ಈ ದೇಶದ ಸಂವಿಧಾನವಿದೆ, ಕಾನೂನು ಇದೆ, ಪೋಲಿಸ್ ವ್ಯವಸ್ಥೆ ಇದೆ, ನ್ಯಾಯಾಲಯ ಗಳು ಇವೆ, ಕುಮಾರಸ್ವಾಮಿ ಯವರ ಅವಶ್ಯಕತೆ ಮುಸ್ಲಿಂ ರಿಗಿಲ್ಲ. ಕುಮಾರಸ್ವಾಮಿ ಯವರು ಏಷ್ಟು ಮುಸ್ಲಿಂ ದ್ವೇಷಿಗಳು ಎನ್ನುವದು £ಮ್ಮ ೨೦೧೮ರ ಸರಕಾರದಲ್ಲಿಯೇ ಗೊತ್ತಾಗಿದೆ, ಆ ಸರಕಾರದಲ್ಲಿ ಸಚಿವ ಸ್ಥಾನ ಖಾಲಿ ಇದ್ದರೂ ಜೆಡಿಎಸ್ ಪಕ್ಷ ಮುಸ್ಲಿಂ ಸಮುದಾಯದಿಂದ ಒಬ್ಬರನ್ನೂ ಸಚಿವರನ್ನಾಗಿ ಮಾಡಲಿಲ್ಲ, ಅವರ ಸರಕಾರದಲ್ಲಿಯೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅನುದಾನ ಕಡಿತ ಗೊಳಿಸಲಾಗಿದೆ, ಅದನ್ನು ಅಂದಿನ ಶಾಸಕರಾದ ಹೆಚ್.ಕೆ. ಪಾಟೀಲ್ ರವರು ಸಧನದಲ್ಲಿ ಪ್ರಶ್ನಿಸಿದ್ದಾರೆ, ಬೇಕಿದ್ದರೆ ವಿಧಾನಸಭಾ ಕಲಾಪಗಳ ಕಡತ ತೆಗೆದು ನೋಡಿಕೊಳ್ಳಲಿ.
ಹಾಗಾಗಿ ಕುಮಾರಸ್ವಾಮಿ ಯವರು ಬಿಜೆಪಿ ಜೊತೆಗೆ ಹೋಗುವದಿದ್ದರೆ ಹೋಗಲಿ, ಅದು ಅವರ ಹಣೆಬರಹ, ಬಿಜೆಪಿ ಜೊತೆಗೆ ಹೋಗುವಾಗ ಒಂದು ಸಮುದಾಯವನ್ನು ಹೊಣೆ ಮಾಡುವದು ಏಷ್ಟು ಸರಿ? ಪದೇ ಪದೇ ಹೆಚ್.ಡಿ. ದೇವೆಗೌಡರು ಮುಸ್ಲಿಂರಿಗೆ ಶೇ೪ ರಷ್ಟು ಮೀಸಲಾತಿ £Ãಡಿದ್ದಾರೆ, ಮುಸ್ಲಿಂರು ಅದನ್ನು ಮರೆತಿ ದ್ದಾರೆ ಎಂದು ಋಣಭಾರದ ರೀತಿ ಹೇಳುತ್ತಿದ್ದಾರೆ, ಕುಮಾರ ಸ್ವಾಮಿಯವರ ಗಮನಕ್ಕೆ ಮುಸ್ಲಿಂರಿಗೆ ರಾಜ್ಯದಲ್ಲಿ ಶೇ ೪ ಮೀಸಲಾತಿ ನೀಡಿದ್ದು ಹೆಚ್.ಡಿ. ದೇವೆಗೌಡರು ಎನ್ನುವದು ಸತ್ಯವಲ್ಲ, ನ್ಯಾ.ಚಿನ್ನಪ್ಪರೆಡ್ಡಿ ಆಯೋಗವು ೧೯೯೦ ರಲ್ಲಿ ಮೂರನೇ ಹಿಂದುಳಿದ ವರ್ಗಗಳ ಆಯೋಗದ ವರದಿ £Ãಡಿದೆ, ಅದರ ಆಧಾರದಲ್ಲಿ ವೀರಪ್ಪ ಮೋಯಿಲಿ ಯವರು ಮುಖ್ಯಮಂತ್ರಿಯಾಗಿದ್ದಾಗ ಜುಲೈ ೨೫, ೧೯೯೪ರಲ್ಲಿ ಮುಸ್ಲಿಂರಿಗೆ ಶೇ ೬ರಷ್ಟು ಮೀಸಲಾತಿ ನೀಡಿ ಆದೇಶಿಸ ಲಾಗಿತ್ತು, ಒಟ್ಟಾರೆ ಮೀಸಲಾತಿ ಪ್ರಮಾಣ ಶೇ ೫೦ ಕ್ಕಿಂತ ಹೆಚ್ಚಾಗಿರುವದರಿಂದ ಸದರಿ ವಿಷಯ ಸುಪ್ರೀಂ ಕೋರ್ಟಿಗೆ ಹೋಗಿರುವ ಕಾರಣ ತಡವಾಗಿ ಜಾರಿಗೆ ಬಂದಿದೆ, ಅದು ಜಾರಿಗೆ ಬರುವಾಗ ಹೆಚ್.ಡಿ. ದೇವೇ ಗೌಡರು ಮುಖ್ಯ ಮಂತ್ರಿಯಾಗಿ ರುವದು ಕಾಕತಾಳೀಯವೇ ಹೊರತು ಅವರೇ ಮೀಸಲಾತಿ ನೀಡಿದ್ದಾರೆ ಎನ್ನುವದು ತಪ್ಪು ಮತ್ತು ಮೀಸಲಾತಿ ಪ್ರಮಾಣ ಶೇ ೫೦ ಮೀರಬಾರದೆನ್ನುವ ಕಾರಣಕ್ಕೆ ಅದು ಶೇ ೪ ಕ್ಕೆ ನಿಗದಿಗೊಳಿ ಸಲಾಗಿದೆ.
ಅನಗತ್ಯವಾಗಿ ಪದೇ ಪದೇ ಮುಸ್ಲಿಂರಿಗೆ ಮೀಸಲಾತಿ ಹೆಚ್.ಡಿ.ದೇವೆಗೌಡರು ನೀಡಿ ದ್ದಾರೆ ಎಂದು ರಾಜ್ಯದ ಜನರಿಗೆ ಅರ್ಧ ಸತ್ಯ ಹೇಳುವ ದನ್ನು ಬಿಡುವದು ಒಳ್ಳೆಯದು ಮತ್ತು ಕರ್ನಾಟಕ ಮೀಸಲಾತಿ ಇತಿಹಾಸ ಕುಮಾರ ಸ್ವಾಮಿಯವರು ಓದಬೇಕು.
* ಡಾ.ರಝಾಕ ಉಸ್ತಾದ
ರಾಜಕೀಯ ಚಿಂತಕರು, ರಾಯಚೂರು