IMG_20231101_142421

                ರಾಜ್ಯ ಪಿಕಾರ್ಡ ಬ್ಯಾಂಕ್ ನೌಕರರ ಒಕ್ಕೂಟ

       ಖಜಾಂಚಿಯಾಗಿ ಎಂ.ವಿಜಯಕುಮಾರ ಆಯ್ಕೆ ಸನ್ಮಾನ

      ಕರುನಾಡ ಬೆಳಗು ಸುದ್ದಿ       

    ಕೊಪ್ಪಳ, 01- ಇತ್ತೀಚಿಗೆ ನಡೆದ ರಾಜ್ಯ ಪಿಕಾರ್ಡ ಬ್ಯಾಂಕ ನೌಕರರ ಒಕ್ಕೂಟ ಬೆಂಗಳೂರು ಇದರ 2023-24 ರಿಂದ 2028-29 ರ 5 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ ಮೆಣಸಗಿ ರಾಜ್ಯ ಪಿಕಾರ್ಡ ಖಜಾಂಚಿಯಾಗಿ ಆಯ್ಕೆ ಅವಿರೋಧವಾಗಿ ಯಾಗಿದ್ದಾರೆ.

ರಾಜ್ಯ ಪಿಕಾರ್ಡ ಬ್ಯಾಂಕಿನ ನೌಕರರ ಒಕ್ಕೂಟಕ್ಕೆ ಆಯ್ಕೆ ಯಾಗಿದ್ದಕ್ಕೆ ಪಿಕಾರ್ಡ ಬ್ಯಾಂಕಿನ ಅಧ್ಯಕ್ಷ ಗವಿಸಿದ್ದಪ್ಪ ಹುಳ್ಳಿ ಮತ್ತು ಉಪಾದ್ಯಕ್ಷರಾದ ಶ್ರೀಮತಿ ಲಕ್ಷ್ಮೀದೇವಿ ನಿಂಗಜ್ಜ ಹಾಗೂ ಪರುಶರಾಮ ನಿರ್ದೇಶಕರು, ಹಾಗೂ ಸಹಕಾರಿ ಗಣ್ಯರಾದ ಮಾಜಿ ಅಧ್ಯಕ್ಷರುಗಳಾದ ಸಂಗಮೇಶ ಡಂಬಳ, ನೀಲಕಂಠಯ್ಯಹೀರಮಠ,
ಮಾಜಿ ನಿರ್ದೇಶಕರಾದ ಗವಿಸಿದ್ದಯ್ಯ ಶಶಿಮಠ ಸಿಬ್ಬಂದಿ ವರ್ಗದವರು ಸನ್ಮನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಇವರು ನೌಕರರ ಒಕ್ಕೂಟದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಗುರುಸಿಕೊಂಡು ನೌಕರರ ಬೇಡಿಕೆಗಳಿಗೆ ಪ್ರೀತಿ,ವಿಸ್ವಾಸದಿಂದ ಸ್ಪಂದಿಸುತ್ತಾ ನೌಕರರಿಗೆ ನ್ಯಾಯಯುತವಾಗಿ ಸೌಲಭ್ಯಗಳನ್ನ ಒದಗಿಸಿಕೊಟ್ಟು ತಮ್ಮ ಅತ್ಯಮೂಲ್ಯವಾದ ಸೇವೆ ನೀಡಿರಿ ಎಂದು ಸಲಹೆ ನೀಡಿದರು.
. ಈ ಸಂಧರ್ಭದಲ್ಲಿ ಬ್ಯಾಂಕಿನ ಕ್ಷೇತ್ರಾಧಿಕಾರಿಯಾದ ಶರಣಪ್ಪ ಅಮ್ಮಣ್ಣನವರು, ಶ್ರೀಮತಿ ವಿ. ಭಾಗ್ಯಮ್ಮ ಮತ್ತು ಬ್ಯಾಂಕಿನ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!