
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತದಾರರ ಕರಡು ಪಟ್ಟಿ ಬಿಡುಗಡೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ರ ಸಿರುಗುಪ್ಪ ತಾಲೂಕಿನ ಘಟಕದ ವತಿಯಿಂದ ನಡೆಯುವ ಚುನಾವಣೆ ಪೂರ್ವಭಾವಿ ಸಭೆ ಯಲ್ಲಿ ಮತದಾರರ ಕರಡು ಪಟ್ಟಿ ಬಿಡುಗಡೆ ಮತ್ತು ನಿಯೋಜಿತ ಸರ್ಕಾರಿ ನೌಕರರ ಮತ್ತು ನಿವೃತ್ತ ಸರ್ಕಾರಿ ನೌಕರರ ಸಹಕಾರಿ ಪತ್ತಿನ ಸಂಘದ ಸದಸ್ಯತ್ವ ಪಡೆದುಕೊಳ್ಳುವ ಕಾರ್ಯಕ್ರಮ ಜರುಗಿತು.
ಸಿರುಗುಪ್ಪ ನಗರದ ಸರ್ಕಾರಿ ನೌಕರರ ತಾಲೂಕ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಹೆಚ್ ಲಿಂಗರಾಜ ರೆಡ್ಡಿ ಅವರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಿಜಿಸ್ಟರ್ ದ 2024 – 2029 ರ ಅವಧಿಯ ಚುನಾವಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕುರಡು ಮತದಾರರ ಪಟ್ಟಿ ತಯಾರಿದ್ದು ಈ ಪಟ್ಟಿಯಲ್ಲಿ ಸರ್ಕಾರಿ ನೌಕರರ ಹೆಸರುಗಳು ಇಲ್ಲದೆ ಸಂದರ್ಭದಲ್ಲಿ ಅದನ್ನು ಸರಿಪಡಿಸಲಾಗುತ್ತದೆ ಕಾರಣ ಇದೆ 2 ಜುಲೈ2024 ರಿಂದ 10 ಜುಲೈ 2024ರ ವರೆಗೆ ಅವಕಾಶವಿರುತ್ತದೆ ಮತ್ತು ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ ಸಂಘದ ಬೈಲಾ ನಿಯಮದ ಅನ್ವಯ ಅರ್ಹರಿರುವ ಸಂಘದ ಸದಸ್ಯರ ಹೆಸರುಗಳ ಒಳಗೊಂಡ ಕರಡು ಮತದಾರರ ಪಟ್ಟಿಯನ್ನು ನಿಗದಿತ ದಿನಾಂಕದೊಳಗೆ ಸಿದ್ಧಪಡಿಸಿ ಹೊರಡಿಸಲಾದ ಮತದಾರರ ಪಟ್ಟಿಯನ್ನು ರಾಜ್ಯ ಸಂಘಕ್ಕೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿ ಹೇಳಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅಲ್ಲಾಭಕ್ಷಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ತಾಲೂಕು ಸಂಘಟನಾ ಕಾರ್ಯದರ್ಶಿ ಜಿ ವೆಂಕಟೇಶ್ ತಾಲೂಕು ನಾಮ ನಿರ್ದೇಶಕ ಎಲ್ಲಪ್ಪ ಶಿಕ್ಷಣ ಇಲಾಖೆಯ ಮಹೇಂದ್ರ ಪಾಟೀಲ್ ಜೀ ವೇಶ್ ಕುಲಕರ್ಣಿ ಮತ್ತಿತರರು ಇದ್ದರು