
ಪಂಚಮ ಸಾಲಿ ಸಮಾಜಕ್ಕೆ 12 ಸಾವಿರ ವರ್ಷಗಳ ಇತಿಹಾಸ ವಿದೆ
ಕಿತ್ತೂರು ಚನ್ನಮ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀಜಯ ಮೃತ್ಯುಂಜಯ ಸ್ವಾಮಿಜ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ21 – ಪಂಚಮ ಸಾಲಿ ಸಮಾಜದಲ್ಲಿ ಅನೇಕ ಜನರು ಉತ್ತಮ ಶಿಕ್ಷಣ ಪಡೆದರು ಸರಕಾರಿ ಸೌಲಭ್ಯವಿಲ್ಲದೆ ಮತ್ತು ಸರಕಾರಿ ನೌಕರಿ ಸಿಗಲಾರದೆ ನಿರುದ್ಯೋಗ ಸಮಸ್ಯೆ ಎದು ಕಾಣುತ್ತದೆ .ಸಮಾಜ ಅಭಿವೃದ್ಧಿಯಾಗ ಬೇಕಾದರೆ 2 A ಮೀಸಲಾತಿ ಅತ್ಯವಶ್ಯಕ ವಾಗಿರುತ್ತದೆ 2ಎ ,ಮಿಸಲಾತಿ ಸಿಗುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಸಮಾಜದ ಎಲ್ಲಾ ಮುಖಂಡರು ಕೈ ಜೋಡಿಸಬೇಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠಧ್ಯಾಕ್ಷರಾದ ಶ್ರೀ ಜಯ ಮೃತ್ಯುಂಜಯ ಸ್ವಾಮಿಜೀ ಅವರು ಹೇಳಿದರು.
ಅವರು ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಲ್ಲೂರು,ಆಡೂರು,ಹಾಗೂ ರಾಜೂರು ಗ್ರಾಮದವರಿಂದ ಯಲಬುರ್ಗಾ ಹಾಗೂ ಕುಕನೂರು ತಾಲೂಕ ಲಿಂಗಾಯತ ಪಂಚಮಸಾಲಿ ಸಮಾಜದ ಸಹಯೋಗದೊಂದಿಗೆ ಕಿತ್ತೂರು ರಾಣಿ ಚನ್ನಮ್ಮಾಜಿಯ 245 ನೇ ಜಯಂತೋತ್ಸವ ಹಾಗೂ 199ನೇ ಕಿತ್ತೂರು ವಿಜಯೋತ್ಸವ ಹಾಗೂ ಜಯ ಮೃತುಂಜಯ ಮಹಾ ಸ್ವಾಮಿಗಳ ತುಲಬಾರ ಹಾಗೂ ಎಸ್,ಎಸ್,ಎಲ್,ಸಿ,ಮತ್ತು ಪಿಯುಸಿ,ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಉದ್ದೇಶಿಸಿ ಮಾತನಾಡಿ ಪ್ರತಿ ಜಿಲ್ಲೆಯಲ್ಲಿ ಪಂಚಮಸಾಲಿ ಸಮಾಜವನ್ನ ಒಗ್ಗೂಡಿಸಿಕೊಂಡು ಮುಂಬರುವ ಅಧಿವೇಶನದಲ್ಲಿ ಹೋರಾಟ ಮಾಡುವದಾಗಿ ಹೇಳಿದರು.
ಸಮಾಜ ಸಂಘಟನೆ ಯಾಗಲು ರಾಜ್ಯದಲ್ಲಿಯ ಮೋದಲ ಬಾರಿಗೆ ಸಂಘಟೆ ಮಾಡಿರುವದು ಯಲಬುರ್ಗಾ ಮತ್ತು ರೋಣ ತಾಲೂಕಿನವರು ಈ ತಾಲೂಕಿಗೆ ಇತಿಹಾಸ ವಿದೆ.ಇದೇ ತಾಲೂಕಿನವರೆ ಬಿಜ್ಜಳದ ಅರಸನ್ನುಸಂವಾರ ಮಾಡಿದವರು ಜಯದೇವ ಮಲ್ಲಿ,ಮತ್ತು ಬೊಮ್ಮಣ್ಣ ಎಂಬುವವರು .ಪಂಚಮಸಾಲಿ ಸಮಾಜಕ್ಕೆ 12 ಸಾವಿರ ವರ್ಷಗಳ ಇತಿಹಾಸ ವಿದೆ ಭೂಮಿಯನ್ನು ಬಿತ್ತಿ ಬೆಳೆ ಬೆಳೆಯಲು ಪ್ರಾರಭಿಸಿದವರು ಪಂಚಮಸಾಲಿ ಸಮಾಜದವರು ಮೋದಲಿಗರು ಎಂದು ಹೇಳಿದರು.
ಸಂಸದ ಸಂಗಣ್ಣ ಕರಡಿ ಅವರ ಕುಟುಂಬದ ಸೂಸೆ ಸಮಾಜ ಸೇವಕರು. ಸಮಾಜ ಸಂಘಟಿಕರಾದ. ಶ್ರೀಮತಿ
ಮಂಜುಳಾ ಅಮರೇಶ ಕರಡಿ ಅವರು ಮಾತನಾಡಿ ತೊಟ್ಟಿಲ ತೂಗುವ ಕೈ. ಜಗತ್ತನ್ನು ತೂಗುತ್ತದೆ. ಭಾರತ ಸ್ವಾತಂತ್ರ್ಯ ದ ಕಿಡಿ ಹೊತ್ತಿಸಿದ ಕನ್ನಡದ ವೀರರಾಣಿ ಕಿತ್ತೋರ ಚನ್ನಮ್ಮಅವರು ಬ್ರಿಟಿಷ್ ರ ಹುಟು ಅಡಗಿಸಿ ಅವರಿಗೆ ಸಿಂಹ ಸ್ವಪನ್ನ ವಾಗಿದರು ಬ್ರಿಟಿಷ್ ವಿರುದ್ಧ ಖಡ್ಗ ಎತ್ತಿ ಅವರಿಗೆ ನಡುಕ ಹುಟ್ಟಿಸಿ ದವರು ನಮ್ಮ ನೆಲ. ಜಲ. ನಾಡು ಬಿಟ್ಟು ತೊಲಗಿ ಎಂದು ಹೇಳಿದವರು.
ಸ್ತ್ರೀ ಕುಲಕ್ಕೆ ಸ್ವತಂತ್ರ ಕೊಟ್ಟ ಕಿತ್ತೂರು ರಾಣಿ ಚನ್ನಮ್ಮ ಚನ್ನಮ್ಮಾಜೀ ಅವರು 700 ಹಳ್ಳಿಗಳು 70 ಕೋಟೆಗಳು ಸಾಮ್ರಾಜ್ಮ ಒಂದಿ ಆಡಳಿತ ಮಾಡಿ ಬ್ರಟೀಷ ಥ್ಯಾಕ್ರೆ ವಿರುದ್ದ ಸ್ವಾತಂತ್ರ ಕಹಳೆ ಮೋಳಗಿಸಿ ಮೊಟ್ಟ ಮೊದಲ ವೀರ.ದಿಟ್ಟ.ಧೀರ .ಮಹಿಳೆ ಚನ್ನಮ್ಮಾಜೀ ಅವರು ನಾಡು ನುಡಿ ನಲ. ಜಲ ಮತ್ತು ದೇಶವನ್ನು ಸಂರಕ್ಷಣೆ ಮಾಡಲು ತಮ್ಮ ಸೈನ್ಯವನ್ನು ಕಟ್ಟಿಕೊಂಡು ಸ್ವತಂತ್ರಕ್ಕಾಗಿ ಹೋರಾಡಿದವರು ಅವರನ್ನು ಎಷ್ಟು ಸ್ಮರಿಸಿದರು ಕಡಿಮೆ ಮತ್ತು ಸಮಾಜ ಎಲ್ಲಾ ಬಂಧು ಮಿತ್ರರರು ನಿಮ್ಮ ನಿಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ನಂತರನಿಕಟಪೂರ್ವ ಜಿಲ್ಲಾಧ್ಯಕ್ಷ ಮತ್ತು ಬಿಜೆಪಿ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಅವರು ಮಾತನಾಡಿ ಕೂಡಲ ಸಂಗಮ ಪಂಚಮಸಾಲಿ ಸಮಾಜದ ಪ್ರಥಮ ಪೀಠಾಧ್ಯಕ್ಷರಾದ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಅವರು 2ಎ ಮೀಸಲಾತಿಯ ಸಲುವಾಗಿ ಕೂಡಲ ಸಂಗಮದಿಂದ ಬೆಂಗಳೂರು ನಗರದ ವರಿಗೆ
ಪೂಜ್ಯರು 750 ಕೀಲೋ ಮೀಟರ್ ಪಾದಯಾತ್ರೆಮಾಡಿ ಸಮಾಜವನ್ನು ಸಂಘಟಿಸುವದರ ಜೊತೆಗೆ ಪ್ರೀಡಂ ಪಾರ್ಕ್ ನ ಮುಂದೆ ಸತ್ಯಾಗ್ರಹ ಮಾಡಿ ಅಂದಿನ ಸರಕಾರ ನಿಮ್ಮಗೆ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ಕೊಟ್ಟಿದರು ಆದರೆ ಅದು ಈಡೇರಲಿಲ್ಲ ಈ ಹಿಂದೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಪಂಚಮಸಾಲಿ ಸಮಾಜದವರನ್ನು ಒಂದುಗೂಡಿಸಿ ಹೋರಾಟ ಮಾಡಿದ್ದಾರೆ 2ಎ ಮಿಸಲಾತಿ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವದಿಲ್ಲ ಎಂದು ಸರಕಾರಕ್ಕೆ ಮನವಿ ಮಾಡಿದರು ಆದರೆ ಇದುವರೆಗೆ ಯಾವುದೇ ರೀತಿಯ ಲಕ್ಷಣಗಳು ಕಾಣುತ್ತಿಲ್ಲ ಹೀಗಾಗಿ ಪೂಜ್ಯರು ಇತ್ತೀಚೆಗೆ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಹೈವೆ ಬಳಿ ಇಷ್ಟಲಿಂಗ ಪೂಜ್ಯ ಮಾಡುವುದರೊಂದಿಗೆ ಸಾಮೂಹಿಕ ಹೋರಾಟ ಮಾಡುತ್ತೇವೆ ಇದಕ್ಕೆ ಇಂದಿನ ರಾಜ್ಯಸರಕಾರ ಶೀಘ್ರದಲ್ಲಿ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು ಎಂದು ಮನವಿ ಮೀಸಲಾತಿ ಕೊಡದಿದ್ದರೆ.
ಮುಂದಿನ ದಿನಮಾನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಇದಕ್ಕೆ ಸಮಾಜದವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಶ್ರೀಗಳಿಗೆ ಸಹಕಾರ ನೀಡಬೇಕೆಂದು ಸಲಹೆ. ನಮ್ಮ ಸಮಾಜದವರು ಎಲ್ಲರೂ ಸೇರಿ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಪ್ರಥಮವಾಗಿ ತುಲಾಭಾರ ಸೇವೆ ಮಾಡುತ್ತಿರುವದು.ತುಂಬಾ ಸಂತಸ ತಂದಿದೆ. ಇಂತಹ ಶ್ರೀ ಜಗದ್ಗುರುಗಳು ಸಿಕ್ಕಿರುವುದು ನಮ್ಮ ಪುಣ್ಯ. ಎಂದರು ನಾವು 2ಎ ಮೀಸಲಾತಿ ಕೇಳುತ್ತಿರುವುದು ನಮ್ಮ ಮಕ್ಕಳ ಶಿಕ್ಷಣ. ನೌಕರಿ ಭವಿಷ್ಯದ ಸಲುವಾಗಿ ಎಂದರು ಮತ್ತು ಪ್ರತಿಯೊಬ್ಬ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮುಖ್ಯವಾಹಿನಿಗೆ ಬಂದು ಎಲ್ಲಾ ರಂಗದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ನಂತರ ಸಮಾಜದ ಮುಖಂಡರಾದ ಸಿ. ಎಚ್. ಪೋಲೀಸ್ ಪಾಟೀಲ. ಮತ್ತು ವೀರಣ್ಣ ಹುಬ್ಬಳ್ಳಿ. ಅವರು ವಾಸ್ತವಿಕವಾಗಿ ಕಾರ್ಯಕ್ರಮ ಕುರಿತು ಮಾತನಾಡಿ ಪಂಚಮಸಾಲಿ ಸಮಾಜ ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ.ಶಿಕ್ಷಣ. ರಾಜಕೀಯ.ನೌಕರಿ.ಮತ್ತು ಇನ್ನೂ ಹಲವಾರು ಸೌಲಭ್ಯ ಸಿಗುತ್ತಿಲ್ಲ ಅದಕೋಸ್ಕರ ಪ್ರತಿಯೊಬ್ಬರು ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ವಿಧ್ಯಾವಂತರನ್ನಾಗಿ ಮಾಡಬೇಕು ಎಲ್ಲಾ ಸಮಾಜದವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಒಳ್ಳೇಯ ವ್ಯಕ್ತಿಯಾಗಬೇಕು ಎಂದು ಹೇಳಿದರು.
ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಶ್ರೀಪಾದಪ್ಪ ಅಧಿಕಾರಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ.ಕುಕನೂರು ತಾಲೂಕ ಪಂಚಮಸಾಲಿ ಅಧ್ಯಕ್ಷ ವೀರಣ್ಣ ಅಣ್ಣಿಗೇರಿ ಯಲಬುರ್ಗಾ ತಾಲೂಕ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಕೆ.ಜಿ.ಪಲ್ಲೇದ.ವೀರಣ್ಣ ಹುಬ್ಬಳ್ಳಿಶಕುಂತಲಾದೇವಿ ಮಾಲಿ ಪಾಟೀಲ್, ಉಮಾ ಓಜನಹಳ್ಳಿ,ನ್ಯಾಯವಾದಿಗಳು ಶಂಕರಗೌಡ ಗೇದಗೇರಿ ,ಸಮಾಜದ ಕಾರ್ಯದರ್ಶಿ ರಾಜಶೇಖರ ನಿಂಗೋಜಿ,ಆರ್,ಡಿ,ಸಿ,ಸಿ, ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಅಶೋಕ ತೋಟದ ರುದ್ರಗೌಡ ಸೋನಬಗೌಡ್ರ ಹಿರಿಯ ಪತ್ರಕರ್ತ ಕೊಟ್ರಪ್ಪ ಮುತ್ತಾಳ.,ಶಿವರಾಜ ಗೌಡ ಪೋಲಿಸ್ ಪಾಟೀಲ್,ಗ್ರಾಮ ಪಂಚಾಯತ ಅಧ್ಯಕ್ಷ ನಾಗಯ್ಯ ಗುರುಮಠ. ಯುವ ಮುಖಂಡ ಕಲ್ಲಪ್ಪ ಕರಮುಡಿ.ಯುವ ಮೊಚಾ೯ ಕಲ್ಲೂರು.ಆಡೂರು.ರಾಜೂರು.ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡರು. ಯುವಕರು.ಮಹಿಳೆಯರು.ಸೇರಿದಂತೆ ಮತ್ತು ಇತರರು ಕಾರ್ಯಕ್ರಮದಲ್ಲಿ