IMG-20231030-WA0008

      *ವಿದ್ಯೆಯನ್ನು ಯಾರು ಕಳ್ಳತನ ಮಾಡಲಾಗದು*
ಕವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ ಗೊಹ್ಲೊಟ್
ಧಾರವಾಡ, 30 – ಜಗತ್ತಿನಲ್ಲಿ ನಾವು ಗಳಿಸುವ ಎಲ್ಲ ವಸ್ತುಗಳ ಮೇಲೆ ಕೆಟ್ಟ ಜನರ ಕಣ್ಣುಗಳು ಬೀಳಬಹುದಾಗಿದ್ದು ವಿದ್ಯೆಯ ಮೇಲೆ ಯಾರ ಕಣ್ಣು ಬೀಳಲು ಸಾಧ್ಯವಿಲ್ಲ ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಮಯದಲ್ಲಿ ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಇರಬೇಕು ಎಂದು ರಾಜ್ಯಪಾಲ ಭಾವರ್ಚಂದ್ ಹೇಳಿದರು.
        ಇಲ್ಲಿನ ಕರ್ನಾಟಕ ವಿವಿ 73ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ವಿವಿಧ ಪದವಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದವರು.
     ವಿದ್ಯೆ ಎನ್ನುವುದು ಅಕ್ಷಯ ಪಾತ್ರೆ ಇದ್ದಂತೆ. ಈ ಅಕ್ಷಯ ಪಾತ್ರೆ ಯಾವತ್ತು ಸಹ ಬರಿದಾಗುವುದಿಲ್ಲ. ಒಂದು ಸಾರಿ ಅಕ್ಷಯಪಾತ್ರೆ ನಮ್ಮ ಜೀವನದಲ್ಲಿ ಬಂದರೆ ಅದು ನಿರಂತರವಾಗಿರಲಿದೆ ಎಂದರು.
      ಭಾರತ ಅನಾದಿಕಾಲದಿಂದಲೂ ವಿಶ್ವಗುರು ಆಗಿದ್ದು ಹಿಂದೆ ನಳಂದ ಹಾಗೂ ತಕ್ಷಶಿಲಾ ವಿವಿಗಳಲ್ಲಿ ಕಲಿಯಲು ವಿವಿಧ ದೇಶಗಳ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು ಅಂತಹ ಮಹಾನ್ ಇತಿಹಾಸವನ್ನು ಹೊಂದಿರುವ ಭಾರತ ಈಗ ಮತ್ತೆ ವಿಶ್ವಗುರುವಾಗುವತ್ತ ದಾಪುಗಾಲು ಇಟ್ಟಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಹ ಸಾಗಬೇಕಾದ ಅವಶ್ಯಕತೆ ಇದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸ್ವ ಉದ್ಯೋಗದತ್ತ ಒಲವು ಹೆಚ್ಚುತ್ತಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ. ಇದರ ಜೊತೆಗೆ ದೇಶದ ಸಮಗ್ರತೆ ಐಕ್ಯತೆಯನ್ನು ಕಾಪಾಡುವ ಜವಾಬ್ದಾರಿ ಶಿಕ್ಷಣದ ಮೇಲಿದೆ. ದೇಶದ ಅರ್ಥ ವ್ಯವಸ್ಥೆ ಅತ್ಯಂತ ಉತ್ತಮ ಸ್ಥಿತಿಯಲ್ಲಿದ್ದು ಈಗಾಗಲೇ ಐದನೇ ಸ್ಥಾನಕ್ಕೆ ಏರಿದೆ. 2047 ರ ವೇಳೆಗೆ ಇದು ಮೂರನೇ ಸ್ಥಾನಕ್ಕೆ ಏರಬೇಕಾಗಿದೆ ಎಂದ ಅವರು, ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಅಳವಡಿಸುವ ಹಾಗೂ ಬೋಧಿಸುವ ಜವಾಬ್ದಾರಿ ವಿವಿಗಳ ಮೇಲೆ ಇದ್ದು ಅದನ್ನು ಅತ್ಯಂತ ಶ್ರದ್ಧೆಯಿಂದ ವಿವಿಗಳು ನಿರ್ವಹಿಸಬೇಕು ಎಂದರು.

     ಕಾರ್ಯಕ್ರಮದಲ್ಲಿ ಸಹಕುಲಾಧಿಪತಿ ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್, ಕುಲಪತಿ ಪ್ರೊಫೆಸರ್ ಕೆ.ಬಿ ಗುಡಿಸಿ, ಪ್ರೊ. ನಿತಿನ್ ಶೇಠ್, ಇತರರಿದ್ದರು. ಇದೇ ವೇಳೆ ಕವಿಯಿಂದ ರವಿಶಂಕರ್ ಅರವಿಂದ್ ಜತ್ತಿ ಹಾಗೂ ಅರ್ಚನಾ ಸುರಾನ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!