20gvt02

ಸಂಸದರ ಚುನಾವಣೆ ಮುಗಿದರೂ ಬಗೆ ಹರಿಯದ ಬಣ ರಾಜಕೀಯ ಜಟಾಪಟಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 21- ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಅವಹೇಳನಕಾರಿ ಪದ ಬಳಸಿ ಪ್ರತಿಭಟಸಿದ್ದನ್ನು ವಿರೋಧಿಸಿ ಗಂಗಾವತಿ ನಗರದ ಕಾಂಗ್ರೇಸ ಎರಡು ಬಣಗಳು ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಬ್ಲಾಕಕಾಂಗ್ರೇಸ ಅಧ್ಯಕ್ಷ ನಗರಸಭೆ ಹಾಲಿ ಸದಸ್ಯ ಶ್ಯಾಮಿದ ಮನಿಯಾದ,ಹನುಮಂತಪ್ಪ ಅರಸಿನಕೇರಿ,ತಾಫಂ ಮಾಜಿ ಅಧ್ಯಕ್ಷ ಶರಣೆಗೌಡ,ಮಲ್ಲೇಶ ದೆವರಮನಿ ನೇತೃತ್ವದ ಕಾಂಗ್ರೇಸ ಬಣ ಪ್ರತಿಭಟಸಿ ಶಾಸಕ ಗಾಲಿ ಜರ್ನಾಧನರೆಡ್ಡಿ ವಿರುದ್ದ ಪ್ರತಿಭಟಸಿದರು.

ಮಾಜಿ ಸಚಿವ ಇಕ್ಬಾಲ ಅನ್ಸಾರಿಯ ಕಾಂಗ್ರೇಸ ಬಣದ ಯಮನಪ್ಪ ವಿಠಲಾಪೂರ,ಎಪಿಎಂಸಿ ಮಾಜಿ ಅಧ್ಯಕ್ಷ ನಿಲ್ಲಪ್ಪ ಸಣ್ಣಕ್ಕಿ,ಜಿಲ್ಲಾ ಕಾಂಗ್ರೇಸನ ಜುಬೇರ, ನಗರಸಭೆ ಸದಸ್ಯ ಮನೋಹರಸ್ವಾಮಿ ಮುದೇನೂರ, ಖಾಸಿಂಸಾಬ ಗದ್ವಾಲ, ಕೋತ್ವಾಲ ನಾಗರಾಜ,ಆರ್ ಖಾದ್ರಿ ನೇತೃತ್ವದ ಬಣ ಶಾಸಕ ಗಾಲಿ ಜನಾರ್ಧನ ರಡಡಿ ಗಡಿಪಾರು ಮಾಡಲು ಒತ್ತಾಯಿಸಿ ಪ್ರತಿಭಟಸಿದರು.

ಶ್ರೀಕೃಷ್ಣದೇವರಾಯ ವೃತದಲ್ಲಿ ಎರಡು ಕಾಂಗ್ರೇಸಬಣಗಳ ಪ್ರತಿಭಟನೆ ಇರಸುಮುರಸು ಮಾಡಿತ್ತು.

ಸಂಸದರ ಚುನಾವಣೆ ಮುಗಿದರು ಗಂಗಾವತಿ ನಗರದಲ್ಲಿ ಮಾತ್ರ ಕಾಂಗ್ರೇಸ ಎರಡು ಬಣಗಳ ಜಟಾಪಟಿ ನಿರಂತರ ನಡದಿದೆ. ಸಂಸದ ರಾಜಶೇಖರ ಹಿಟ್ನಾಳ ತಿಳಿಸಿ ಶಾಸಕ ಜನಾರ್ಧನರೆಡ್ಡಿ ವಿರುದ್ದ ಪ್ರತಿಭಟನೆ ನಡೆಸಿದ್ದಾರ. ಮುಂಬರುವ ದಿನದಲ್ಲಿ ಕಾಂಗ್ರೇಸ ಪಕ್ಷದ ಹೈಕಮಾಂಡ ಎಲ್ಲಾ ಸರಿಮಾಡುತ್ತದೆ ಎಂದು ದೂರವಾಣಿಯಲ್ಲಿ ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!