
ಕಾಂಗ್ರೆಸ್ ನಾಯಕರಿಂದ ಸಾಧನಾ ಸಮಾವೇಶ ನಡೆಯುವ ಸ್ಥಳ ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ಜಿಲ್ಲೆ ) ಮೇ, 13: ರಾಜ್ಯ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶ ಮೇ,20 ರಂದು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು.
ಇದರ ಭಾಗವಾಗಿ ಕಾಂಗ್ರೆಸ್ ನಾಯಕರಾದ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್. ಆರ್. ಗವಿಯಪ್ಪ, ಬಿ. ಜೆಡ್. ಜಮೀರ್ ಅಹಮದ್ ಖಾನ್ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯನಗರ-ಬಳ್ಳಾರಿ ಉಸ್ತುವಾರಿ ಸಚಿವರು, ಈ. ತುಕಾರಾಮ ಸಂಸದರು, ಜೆ. ಎನ್. ಗಣೇಶ್ ಕಂಪ್ಲಿ ಶಾಸಕರು, ಭೀಮಾನಾಯ್ಕ್ ಕೆಎಂಎಫ್ ಅಧ್ಯಕ್ಷರು, ಸಿರಾಜ್ ಶೇಖ್ ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.